05-12-2023

18 ಶತಕ ಸಿಡಿಸಿದ ಆಟಗಾರನಿಗೆ 10 ವರ್ಷಗಳ ನಂತರ ತಂಡದಲ್ಲಿ ಅವಕಾಶ..!

Author: ಪೃಥ್ವಿ ಶಂಕರ

ಇದೇ ಡಿಸೆಂಬರ್ 10 ರಿಂದ ದಕ್ಷಿಣ ಆಫ್ರಿಕಾ ಹಾಗೂ ಭಾರತ ನಡುವಿನ ಮೂರು ಟಿ20, 2ಟೆಸ್ಟ್ ಹಾಗೂ 3ಏಕದಿನ ಪಂದ್ಯಗಳ ಸರಣಿ ಆರಂಭವಾಗಲಿದೆ.

ಈ ಮೂರು ಮಾದರಿಯ ಸರಣಿಗೆ ಉಭಯ ತಂಡಗಳನ್ನು ಪ್ರಕಟಿಸಲಾಗಿದೆ. ಅತಿಥೇಯ ಆಫ್ರಿಕಾ ಮೂರು ಸರಣಿಗಳಿಗೂ ವಿಭಿನ್ನ ತಂಡವನ್ನು ಪ್ರಕಟಿಸಿದೆ.

ಅದರಲ್ಲೂ ಟೆಸ್ಟ್ ತಂಡದಲ್ಲಿ ಮೂವರು ಹೊಸ ಮುಖಗಳಿಗೆ ದಕ್ಷಿಣ ಆಫ್ರಿಕಾ ಅವಕಾಶ ಮಾಡಿಕೊಟ್ಟಿದೆ.

ಈ ಪೈಕಿ ರಾಷ್ಟ್ರೀಯ ತಂಡದಲ್ಲಿ ಆಡಲು ಬರೋಬ್ಬರಿ 10 ವರ್ಷದಿಂದ ಕಾದು ಕುಳಿತಿದ್ದ ಆಟಗಾರನಿಗೆ ಅವಕಾಶ ನೀಡಲಾಗಿದೆ.

ಅಷ್ಟಕ್ಕೂ ಆ ಆಟಗಾರ ಯಾರು ಎಂದರೆ, ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ಡೇವಿಡ್ ಬೆಡಿಂಗ್‌ಹ್ಯಾಮ್.

29 ವರ್ಷದ ಡೇವಿಡ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 50 ರ ಸರಾಸರಿಯಲ್ಲಿ ರನ್ ಕಲೆಹಾಕಿದ್ದು, 18 ಶತಕಗಳನ್ನು ಬಾರಿಸಿದ್ದಾರೆ. ಆದರೂ ಅವರಿಗೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ಸಿಕ್ಕಿರಲಿಲ್ಲ.

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮಾತ್ರವಲ್ಲದೆ ಅವರು ಲಿಸ್ಟ್-ಎ ಮಾದರಿಯಲ್ಲಿಯೂ 40 ಕ್ಕಿಂತ ಹೆಚ್ಚು ಸರಾಸರಿಯಲ್ಲಿ ರನ್ ಕಲೆಹಾಕಿದ್ದು, ಇದರಲ್ಲಿ 5 ಶತಕಗಳನ್ನು ಬಾರಿಸಿದ್ದಾರೆ.

ಡೇವಿಡ್ ಬೆಡಿಂಗ್‌ಹ್ಯಾಮ್ ಅಲ್ಲದೆ ನಾಂದ್ರೆ ಬರ್ಗರ್, ಟ್ರಿಸ್ಟಾನ್ ಸ್ಟಬ್ಸ್ ಕೂಡ ಟೆಸ್ಟ್ ತಂಡದಲ್ಲಿ ಚೊಚ್ಚಲ ಅವಕಾಶ ಪಡೆದಿದ್ದಾರೆ.

NEXT: ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಮಹತ್ವದ ಬದಲಾವಣೆ..!