10-12-2023

ರೋಹಿತ್ ದಾಖಲೆ ಉಡೀಸ್ ಮಾಡುವ ತವಕದಲ್ಲಿ ಮಿಲ್ಲರ್..!

Author: ಪೃಥ್ವಿ ಶಂಕರ

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 3 ಪಂದ್ಯಗಳ ಟಿ20 ಸರಣಿ ಇಂದಿನಿಂದ ಆರಂಭವಾಗಲಿದೆ.

ಮೊದಲ ಪಂದ್ಯ ಇಂದು ಡರ್ಬನ್‌ನ ಕಿಂಗ್ಸ್‌ಮೀಡ್ ಕ್ರಿಕೆಟ್ ಮೈದಾನದಲ್ಲಿ ರಾತ್ರಿ 7.30ಕ್ಕೆ ಪ್ರಾರಂಭವಾಗಲಿದೆ.

ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರ ದೊಡ್ಡ ದಾಖಲೆಯನ್ನು ಮುರಿಯುವ ಅವಕಾಶ ಡೇವಿಡ್ ಮಿಲ್ಲರ್​ಗಿದೆ.

ಪ್ರಸ್ತುತ, ರೋಹಿತ್ ಶರ್ಮಾ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಬಾರಿಸಿದವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಟಿ20ಯಲ್ಲಿ ರೋಹಿತ್ ಶರ್ಮಾ ಒಟ್ಟು 16 ಇನ್ನಿಂಗ್ಸ್‌ಗಳಲ್ಲಿ 420 ರನ್ ಗಳಿಸಿದ್ದಾರೆ.

ಇದಲ್ಲದೆ ಅವರು 129 ರ ಸ್ಟ್ರೈಕ್ ರೇಟ್​ನಲ್ಲಿ 1 ಶತಕ ಸೇರಿದತೆ 2 ಅರ್ಧ ಶತಕಗಳನ್ನು ಬಾರಿಸಿದ್ದಾರೆ.

ಪ್ರಸ್ತುತ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಡೇವಿಡ್ ಮಿಲ್ಲರ್, ಭಾರತದ ವಿರುದ್ಧ ಆಡಿರುವ 15 ಇನ್ನಿಂಗ್ಸ್‌ಗಳಲ್ಲಿ 379 ರನ್ ಸಿಡಿಸಿದ್ದಾರೆ.

ಭಾರತ ವಿರುದ್ಧ 161 ಸ್ಟ್ರೈಕ್ ರೇಟ್‌ನಲ್ಲಿ ಸ್ಕೋರ್ ಮಾಡಿರುವ ಮಿಲ್ಲರ್ 1 ಶತಕ ಮತ್ತು 2 ಅರ್ಧ ಶತಕಗಳನ್ನು ಸಹ ಬಾಸಿದ್ದಾರೆ.

ಭಾರತ ವಿರುದ್ಧದ ಈ ಸರಣಿಯಲ್ಲಿ ಡೇವಿಡ್ ಮಿಲ್ಲರ್‌ಗೆ 42 ರನ್‌ ಬಾರಿಸಿದರೆ, ಉಭಯ ತಂಡಗಳ ಟಿ20 ಮುಖಾಮುಖಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಳ್ಳಲಿದ್ದಾರೆ.