ಈ ಐವರು ಆಫ್ರಿಕನ್ ಆಟಗಾರರೇ ಟೀಂ ಇಂಡಿಯಾಗೆ ಅಪಾಯಕಾರಿ..!

09-December-2023

Author: ಪೃಥ್ವಿಶಂಕರ

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿ ಡಿಸೆಂಬರ್ 10 ರಿಂದ ಆರಂಭವಾಗಲಿದೆ. ಸರಣಿಯ ಮೊದಲ ಪಂದ್ಯ ಡರ್ಬನ್‌ನಲ್ಲಿ ನಡೆಯಲಿದೆ.

ಅನೇಕ ಪ್ರಮುಖ ಆಟಗಾರರು ಇಲ್ಲದೆ ಟೀಂ ಇಂಡಿಯಾ ಈ ಸರಣಿಯನ್ನು ಆಡುತ್ತಿದೆ. ಆದರೆ ದಕ್ಷಿಣ ಆಫ್ರಿಕಾ ಬಹುತೇಕ ಪೂರ್ಣ ಬಲದೊಂದಿಗೆ ಪ್ರವೇಶಿಸುತ್ತಿದೆ.

ಹೀಗಾಗಿ ಈ ಚುಟುಕು ಮಾದರಿಯಲ್ಲಿ ದಕ್ಷಿಣ ಆಫ್ರಿಕಾ ತಂಡದ ಈ ಐವರು ಆಟಗಾರರ ಮೇಲೆ ಭಾರತ ಯುವಪಡೆ ಎಚ್ಚರಿಕೆ ವಹಿಸುವುದು ಅಗತ್ಯ.

ಆಫ್ರಿಕಾ ತಂಡದ ನಾಯಕ ಐಡೆನ್ ಮಾರ್ಕ್ರಾಮ್ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಭಾರತದಲ್ಲಿ ನಡೆದ ವಿಶ್ವಕಪ್‌ನಲ್ಲಿ ಮಾರ್ಕ್ರಾಮ್ ಸಾಕಷ್ಟು ರನ್ ಗಳಿಸಿದ್ದರು.  ಮಾರ್ಕ್ರಾಮ್ ಟಿ20 ಪಂದ್ಯಗಳಲ್ಲಿ ಭಾರತದ ವಿರುದ್ಧ 3 ಇನ್ನಿಂಗ್ಸ್‌ಗಳಲ್ಲಿ 110 ರನ್ ಗಳಿಸಿದ್ದಾರೆ.

ಏಡೆನ್ ಮಾರ್ಕ್ರಾಮ್

ಸ್ಫೋಟಕ ಬ್ಯಾಟರ್ ಹೆನ್ರಿಚ್ ಕ್ಲಾಸೆನ್ ಕೂಡ ಭಾರತಕ್ಕೆ ಅಪಾಯಕಾರಿ. ಈ ಸ್ವರೂಪದಲ್ಲಿ ಅವರು ಭಾರತದ ವಿರುದ್ಧ 6 ಇನ್ನಿಂಗ್ಸ್‌ಗಳಲ್ಲಿ 166 ಸ್ಟ್ರೈಕ್ ರೇಟ್‌ನಲ್ಲಿ 210 ರನ್ ಗಳಿಸಿದ್ದಾರೆ.

ಹೆನ್ರಿಚ್ ಕ್ಲಾಸೆನ್

ಡೇವಿಡ್ ಮಿಲ್ಲರ್ ಟಿ20ಯಲ್ಲಿ ಅತ್ಯಂತ ಸ್ಫೋಟಕ ಫಿನಿಶರ್‌ಗಳಲ್ಲಿ ಒಬ್ಬರಾಗಿದ್ದಾರೆ. ಭಾರತದ ವಿರುದ್ಧ ಅವರು 15 ಇನ್ನಿಂಗ್ಸ್‌ಗಳಲ್ಲಿ 161 ಸ್ಟ್ರೈಕ್ ರೇಟ್‌ನಲ್ಲಿ 379 ರನ್ ಗಳಿಸಿದ್ದಾರೆ.

ಡೇವಿಡ್ ಮಿಲ್ಲರ್

ತಂಡದ ಹಿರಿಯ ವೇಗಿಗಳು ಈ ಸರಣಿಯಲ್ಲಿಲ್ಲ. ಆದರೆ ವಿಶ್ವಕಪ್‌ನಲ್ಲಿ ಸಂಚಲನ ಮೂಡಿಸಿದ್ದ ಯುವ ವೇಗಿ ಜೆರಾಲ್ಡ್ ಕೊಯೆಟ್ಜಿಯಾ ಮೇಲೆ ಕಣ್ಣು ನೆಟ್ಟಿದೆ.  ಕೋಟ್ಜಿಯಾ ತಮ್ಮ ಒಟ್ಟಾರೆ ಟಿ20 ವೃತ್ತಿಜೀವನದಲ್ಲಿ 41 ಪಂದ್ಯಗಳಲ್ಲಿ 57 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಜೆರಾಲ್ಡ್ ಕೊಯೆಟ್ಜೆ

ಉತ್ತಮ ಫಾರ್ಮ್‌ನಲ್ಲಿರುವ ಎಡಗೈ ಸ್ಪಿನ್ನರ್ ಕೇಶವ್ ಮಹಾರಾಜ್ ಭಾರತದ ವಿರುದ್ಧ 9 ಪಂದ್ಯಗಳಲ್ಲಿ 8 ವಿಕೆಟ್ ಪಡೆದಿದ್ದಾರೆ ಆದರೆ ಅವರ ಪ್ರಸ್ತುತ ಫಾರ್ಮ್‌ ಭಾರತಕ್ಕೆ ಅಪಾಯಕಾರಿಯಾಗಿದೆ.

ಕೇಶವ್ ಮಹಾರಾಜ್