IND vs AUS ಫೈನಲ್​ಗೆ ಮಳೆ ಕಾಟ?: ಅಹ್ಮದಾಬಾದ್ ಹವಾಮಾನ ಹೇಗಿದೆ?

19-November-2023

ಏಕದಿನ ವಿಶ್ವಕಪ್ 2023 ಫೈನಲ್'ಗೆ ಕ್ಷಣಗಣನೆ ಶುರುವಾಗಿದೆ. ಇಂದು ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಪ್ರಶಸ್ತಿಗಾಗಿ ಅಂತಿಮ ಕಾದಾಟ ನಡೆಯಲಿದೆ.

ಭಾರತ-ಆಸೀಸ್

ವಿಶ್ವದ ಅತಿ ದೊಡ್ಡ ಅಹ್ಮದಾಬಾದ್'ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂಡೋ-ಆಸೀಸ್ ಫೈನಲ್ ಇಂದು ಮಧ್ಯಾಹ್ನ 2 ಗಂಟೆಗೆ ಶುರುವಾಗಲಿದೆ.

ಪಂದ್ಯ ಎಲ್ಲಿ?

ಈ ಮಹತ್ವದ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸುವ ಸಾಧ್ಯತೆ ಇಲ್ಲ. ಭಾನುವಾರ ಅಹ್ಮದಾಬಾದ್'ನಲ್ಲಿ ಆಟ ಪ್ರಾರಂಭವಾಗುವಾಗ ಸುಮಾರು 33 C ತಾಪಮಾನದೊಂದಿಗೆ ಬಿಸಿಲಿನ ವಾತಾವರಣ ಇರಲಿದೆ.

ಮಳೆ ಅಡ್ಡಿ?

ಸಂಜೆಯ ವೇಳೆಗೆ ತಾಪಮಾನವು 24C ಗೆ ಇಳಿಯುತ್ತದೆ. ತೇವಾಂಶವು 58% ಕ್ಕೆ ಹೆಚ್ಚಾಗುತ್ತದೆ. ಹೀಗಾಗಿ ಭಾನುವಾರದ ಆಟಕ್ಕೆ ಮಳೆ ಕಾಟ ಇರುವುದಿಲ್ಲ.

ಸಂಪೂರ್ಣ ಆಟ

ಮೋದಿ ಸ್ಟೇಡಿಯಂ ಪಿಚ್‌ ಬ್ಯಾಟಿಂಗ್‌ ಸ್ನೇಹಿಯಾಗಿದೆ. ಪಂದ್ಯದ ಆರಂಭದಲ್ಲಿ ಬ್ಯಾಟಿಂಗ್‌ಗೆ ಯೋಗ್ಯವಾಗಿದ್ದರೆ, ಪಂದ್ಯ ಸಾಗುತ್ತಿದ್ದಂತೆ ಸ್ಪಿನ್ನರ್‌ಗಳು ಪರಿಣಾಮಕಾರಿಯಾಗಲಿದ್ದಾರೆ.

ಪಿಚ್ ಹೇಗಿದೆ?

ಇಲ್ಲಿರುವ ಕಪ್ಪು ಮಣ್ಣಿನ ಪಿಚ್‌ಗಳು ಉತ್ತಮ ಬೌನ್ಸ್‌ನೊಂದಿಗೆ ಬೌಲರ್‌ಗಳಿಗೆ ಯೋಗ್ಯವಾಗಿದೆ. ಬ್ಯಾಟರ್‌ಗಳಿಗೆ ಆರಂಭಿಕ ಓವರ್‌ಗಳು ಸವಾಲಾಗಿರಬಹುದು.

ಕಪ್ಪು ಮಣ್ಣಿನ ಪಿಚ್‌

ಸಮಾರೋಪ ಸಮಾರಂಭ ಆಯೋಜನೆ ಮಾಡಲಿದೆ. ಇದರಲ್ಲಿ ಬಾಲಿವುಡ್ ತಾರೆಯರು ನೃತ್ಯ ಮಾಡಲಿದ್ದಾರೆ. ಭಾರತೀಯ ವಾಯುಪಡೆಯ ಸೂರ್ಯ ಕಿರಣ್ ತಂಡ ತಮ್ಮ ವೈಮಾನಿಕ ಕೌಶಲ್ಯಗಳನ್ನು ಪ್ರಸ್ತುತಪಡಿಸಲಿದೆ.

ಸಮಾರೋಪ

ಪ್ರಸ್ತುತ ಅತಿ ಹೆಚ್ಚು ರನ್ ಗಳಿಸಿದ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ವಿರಾಟ್ ಕೊಹ್ಲಿ ಮೇಲೆ ಎಲ್ಲರ ಕಣ್ಣಿದ್ದು ಫೈನಲ್'ನಲ್ಲಿ ಹೇಗೆ ಪ್ರದರ್ಶನ ನೀಡುತ್ತಾರೆ ನೋಡಬೇಕು.

ವಿರಾಟ್ ಕೊಹ್ಲಿ

ಒಬ್ಬನೇ ಒಬ್ಬ ಭಾರತೀಯನಿಲ್ಲ: ಇಲ್ಲಿದೆ ವಿಶ್ವಕಪ್ ಫೈನಲ್‌ನಲ್ಲಿ ಶತಕ ಸಿಡಿಸಿದವರ ಪಟ್ಟಿ