12-10-2023

ಭಾರತ-ಪಾಕ್ ಪಂದ್ಯಕ್ಕೂ ಮುನ್ನ ಸಂಗೀತ ಸಮಾರಂಭ

ಭಾರತ-ಪಾಕಿಸ್ತಾನ

ಐಸಿಸಿ ಏಕದಿನ ವಿಶ್ವಕಪ್'ನಲ್ಲಿ ಅಕ್ಟೋಬರ್ 14 ರಂದು ಭಾರತ ಹಾಗೂ ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಪಂದ್ಯ ಏರ್ಪಡಿಸಲಾಗಿದೆ.

ಮೋದಿ ಕ್ರೀಡಾಂಗಣ

ಅಹ್ಮದಾಬಾದ್​ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣ ಭಾರತ-ಪಾಕಿಸ್ತಾನ ರಣರೋಚಕ ಪಂದ್ಯಕ್ಕೆ ಸಾಕ್ಷಿಯಾಗಲಿದೆ.

ಸಂಗೀತ ಸಮಾರಂಭ

ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಕದನ ಆರಂಭವಾಗುವುದಕ್ಕೂ ಮುನ್ನ ಸಂಗೀತ ಸಮಾರಂಭ ನಡೆಸಲು ಬಿಸಿಸಿಐ ತೀರ್ಮಾನಿಸಿದೆ.

ನೃತ್ಯ ಪ್ರದರ್ಶನ

ಈ ಸಮಯದಲ್ಲಿ ಲಘು ಪ್ರದರ್ಶನ ಮತ್ತು ನೃತ್ಯ ಪ್ರದರ್ಶನಗಳು ಇರಲ್ಲಿದ್ದು, ಗಾಯಕ ಅರಿಜಿತ್ ಸಿಂಗ್ ಅವರು ಪ್ರದರ್ಶನ ನೀಡಲಿದ್ದಾರೆ ಎನ್ನಲಾಗಿದೆ.

ಲೆಜೆಂಡ್​ಗಳ ಉಪಸ್ಥಿತಿ

ಸಚಿನ್ ತೆಂಡೂಲ್ಕರ್, ರಜನಿಕಾಂತ್ ಮತ್ತು ಅಮಿತಾಬ್ ಬಚ್ಚನ್ ಸೇರಿದಂತೆ ಹಲವಾರಿ ದಿಗ್ಗಜರು ಇಂಡೋ-ಪಾಕ್ ಪಂದ್ಯಕ್ಕೆ ಸಾಕ್ಷಿಯಾಗಲಿದ್ದಾರೆ.

ಗೋಲ್ಡನ್ ಟಿಕೆಟ್

ಈ ಪಂದ್ಯವನ್ನು ವೀಕ್ಷಿಸಲು ಗೋಲ್ಡನ್ ಟಿಕೆಟ್ ಹೊಂದಿರುವವರು ಕ್ರೀಡಾಂಗಣದಲ್ಲಿ ಹಾಜರಿರುತ್ತಾರೆ ಎಂದು ಗುಜರಾತ್ ಕ್ರಿಕೆಟ್ ಸಂಸ್ಥೆ ತಿಳಿಸಿದೆ.

12:40 ಕ್ಕೆ ಪ್ರಾರಂಭ

ಈ ಈವೆಂಟ್ ಮಧ್ಯಾಹ್ನ 12:40 ಕ್ಕೆ ಪ್ರಾರಂಭವಾಗಿ 1:10 ಕ್ಕೆ ಕೊನೆಗೊಳ್ಳುತ್ತದೆ. ಹಾಗೆಯೇ ಈ ಪಂದ್ಯಕ್ಕೆ 20 ರಿಂದ 25 ಪಾಕಿಸ್ತಾನಿ ಮಾಧ್ಯಮ ಪ್ರತಿನಿಧಿಗಳು ಬರಲಿದ್ದಾರೆ.

ಟೀಮ್ ಇಂಡಿಯಾ

ಭಾರತ ಕ್ರಿಕೆಟ್ ತಂಡದ ಆಟಗಾರರು ವಿಶ್ರಾಂತಿ ಕೂಡ ಪಡೆದುಕೊಳ್ಳದೆ ಇಂದು ಬೆಳಗ್ಗೆಯೇ ಅಹ್ಮದಾಬಾದ್​ಗೆ ಹೊರಟಿದ್ದಾರೆ.

ರೋಹಿತ್ ಶರ್ಮಾ: ಒಂದಲ್ಲ ಎರಡಲ್ಲ ಬರೋಬ್ಬರಿ 10 ದಾಖಲೆ