09-02-2024

ಈವರೆಗೆ ಒಂದೇ ಒಂದು ಟೆಸ್ಟ್ ಪಂದ್ಯ ಗೆಲ್ಲದ ಭಾರತದ ನಾಯಕರಿವರು

Author: Vinay Bhat

ಸಿ ಕೆ ನಾಯ್ಡು

ಭಾರತದ ಮೊದಲ ಟೆಸ್ಟ್ ನಾಯಕ ಸಿಕೆ ನಾಯುಡು ಅವರು ದೇಶವನ್ನು ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಮುನ್ನಡೆಸಿದರು. ಆದರೆ ಭಾರತವು ಅವುಗಳಲ್ಲಿ ಒಂದು ಪಂದ್ಯವನ್ನು ಗೆಲ್ಲಲಿಲ್ಲ.

ವಿಜಯನಗರ ಮಹಾರಾಜ್

ವಿಜಯನಗರ ಮಹಾರಾಜ್ 1936 ರಲ್ಲಿ ಭಾರತವನ್ನು ಮೂರು ಟೆಸ್ಟ್ ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದರು. ಇದರಲ್ಲಿ ಎರಡು ಪಂದ್ಯ ಸೋತರೆ, ಒಂದು ಪಂದ್ಯ ಡ್ರಾ ಆಯಿತು.

ಇಫ್ತಿಕರ್ ಅಲಿ ಖಾನ್

ಇಫ್ತಿಕರ್ ಅಲಿ ಖಾನ್ ಅವರು ಮೂರು ಟೆಸ್ಟ್ ಪಂದ್ಯಗಳಲ್ಲಿ ಭಾರತವನ್ನು ನಾಯಕತ್ವ ವಹಿಸಿದ್ದರು. ಇದರಲ್ಲಿ ಒಂದು ಪಂದ್ಯವನ್ನು ಸೋತರು ಮತ್ತು 2 ಡ್ರಾ ಮಾಡಿಕೊಂಡರು.

ವಿನೂ ಮಂಕಡ್

ವಿನೂ ಮಂಕಡ್ ಅವರು 1955 ರಿಂದ 1959 ರವರೆಗಿನ ಆರು ಟೆಸ್ಟ್ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದರು. ಇದರಲ್ಲಿ ಒಂದು ಸೋತರೆ, ಐದು ಡ್ರಾ ಆಯಿತು.

ಗುಲಾಮ್ ಅಹಮದ್

ಮಾಜಿ ಸ್ಪಿನ್ನರ್ ಗುಲಾಮ್ ಅಹ್ಮದ್ ಮೂರು ಟೆಸ್ಟ್ ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದರು. ಇದರಲ್ಲಿ ಎರಡು ಪಂದ್ಯ ಕಳೆದುಕೊಂಡರು, ಒಂದು ಡ್ರಾ ಮಾಡಿದರು.

ಹೇಮು ಅಧಿಕಾರಿ

ಹೇಮು ಅಧಿಕಾರಿ ಕೇವಲ ಒಂದು ಟೆಸ್ಟ್ ಪಂದ್ಯದಲ್ಲಿ ಭಾರತದ ನಾಯಕತ್ವ ವಹಿಸಿದ್ದರು ಮತ್ತು ಒಂದು ಪಂದ್ಯವನ್ನು ಡ್ರಾ ಮಾಡಿದರು.

ದತ್ತಾ ಗಾಯಕ್ವಾಡ್

ದತ್ತಾ ಗಾಯಕ್ವಾಡ್ ಅವರು ಒಟ್ಟು ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದಾರೆ. ಈ ನಾಲ್ಕರಲ್ಲೂ ಸೋತರು.

ಪಂಕಜ್ ರಾಯ್

ರಾಯ್ ಅವರು ತಮ್ಮ ವೃತ್ತಿಜೀವನದಲ್ಲಿ ಒಂದು ಟೆಸ್ಟ್ ಪಂದ್ಯದಲ್ಲಿ ಭಾರತವನ್ನು ಮುನ್ನಡೆಸಿದರು ಮತ್ತು ಆ ಪಂದ್ಯವನ್ನು ಸೋತರು.

ಚಂದು ಬೋರ್ಡೆ

ಚಂದು ಬೋರ್ಡೆ 1967 ರಲ್ಲಿ ತಮ್ಮ ವೃತ್ತಿಜೀವನದಲ್ಲಿ ಒಂದು ಟೆಸ್ಟ್ ಪಂದ್ಯದಲ್ಲಿ ಭಾರತವನ್ನು ಮುನ್ನಡೆಸಿದರು ಮತ್ತು ಆ ಪಂದ್ಯವನ್ನು ಸೋತರು.

ಶ್ರೀನಿವಾಸ ವೆಂಕಟರಾಘವನ್

ವೆಂಕಟರಾಘವನ್ ಅವರ ವೃತ್ತಿಜೀವನದಲ್ಲಿ ಒಟ್ಟು ಐದು ಟೆಸ್ಟ್ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದರು, ಇದರಲ್ಲಿ ಎರಡು ಸೋಲು ಮತ್ತು ಮೂರು ಡ್ರಾ ಮಾಡಿಕೊಂಡಿತು.

ಗುಂಡಪ್ಪ ವಿಶ್ವನಾಥ್

ಲೆಜೆಂಡರಿ ಬ್ಯಾಟರ್ ಗುಂಡಪ್ಪ ವಿಶ್ವನಾಥ್ ಅವರ ವೃತ್ತಿಜೀವನದಲ್ಲಿ ಒಟ್ಟು ಎರಡು ಟೆಸ್ಟ್ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದರು. ಎರಡರಲ್ಲೂ ಸೋಲುಂಡಿತು.

ಶ್ರೀಕಾಂತ್

ಶ್ರೀಕಾಂತ್ 1989 ರ ಪಾಕಿಸ್ತಾನ ಪ್ರವಾಸದಲ್ಲಿ ಸಚಿನ್ ತೆಂಡೂಲ್ಕರ್ ಅವರ ವೃತ್ತಿಜೀವನದಲ್ಲಿ ಮೊದಲ ಟೆಸ್ಟ್ ಸರಣಿಯಾಗಿತ್ತು. ಆದರೆ ಎಲ್ಲಾ ನಾಲ್ಕು ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿತು.

ಜಸ್ಪ್ರೀತ್ ಬುಮ್ರಾ

2022 ರಲ್ಲಿ ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಭಾರತವನ್ನು ನಾಯಕತ್ವ ವಹಿಸಿದ್ದರು. ಭಾರತವು ಆ ಪಂದ್ಯವನ್ನು ಕಳೆದುಕೊಂಡಿತು.