07-01-2024
ಇಂಗ್ಲೆಂಡ್ ವಿರುದ್ಧ ಟೆಸ್ಟ್‌ನಲ್ಲಿ ಅಧಿಕ ರನ್ ಬಾರಿಸಿದ ಭಾರತದ ಬ್ಯಾಟರ್ಗಳಿವರು
Author: ಪೃಥ್ವಿ ಶಂಕರ
ಸಚಿನ್ ತೆಂಡೂಲ್ಕರ್ ಇಂಗ್ಲೆಂಡ್ ವಿರುದ್ಧ 32 ಟೆಸ್ಟ್ ಪಂದ್ಯಗಳಲ್ಲಿ 51.73 ಸರಾಸರಿಯಲ್ಲಿ 2535 ರನ್ ಗಳಿಸಿದ್ದಾರೆ.
ಸುನಿಲ್ ಗವಾಸ್ಕರ್ ಇಂಗ್ಲೆಂಡ್ ವಿರುದ್ಧ 38 ಟೆಸ್ಟ್ ಪಂದ್ಯಗಳಲ್ಲಿ 38.20 ಸರಾಸರಿಯಲ್ಲಿ 2483 ರನ್ ಸಿಡಿಸಿದ್ದಾರೆ.
ವಿರಾಟ್ ಕೊಹ್ಲಿ ಇದುವರೆಗೆ ಇಂಗ್ಲೆಂಡ್ ವಿರುದ್ಧ 28 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಅದರಲ್ಲಿ 42.36 ಸರಾಸರಿಯಲ್ಲಿ 1991 ರನ್ ಕಲೆಹಾಕಿದ್ದಾರೆ.
ರಾಹುಲ್ ದ್ರಾವಿಡ್ ಇಂಗ್ಲೆಂಡ್ ವಿರುದ್ಧ 21 ಟೆಸ್ಟ್ ಪಂದ್ಯಗಳಲ್ಲಿ 60.93 ಸರಾಸರಿಯಲ್ಲಿ 1950 ರನ್ ಬಾರಿಸಿದ್ದಾರೆ.
ಗುಂಡಪ್ಪ ವಿಶ್ವನಾಥ್ ಅವರು ಇಂಗ್ಲೆಂಡ್ ವಿರುದ್ಧ 30 ಟೆಸ್ಟ್ ಪಂದ್ಯಗಳಲ್ಲಿ 37.60 ಸರಾಸರಿಯಲ್ಲಿ 1880 ರನ್ ಗಳಿಸಿದ್ದಾರೆ.
ಚೇತೇಶ್ವರ ಪೂಜಾರ ಇಂಗ್ಲೆಂಡ್ ವಿರುದ್ಧ ಇದುವರೆಗೆ 27 ಟೆಸ್ಟ್ ಪಂದ್ಯಗಳಲ್ಲಿ 39.51 ಸರಾಸರಿಯಲ್ಲಿ 1778 ರನ್ ಸಿಡಿಸಿದ್ದಾರೆ.
ದಿಲೀಪ್ ವೆಂಗ್‌ಸರ್ಕರ್ ಇಂಗ್ಲೆಂಡ್ ವಿರುದ್ಧ 26 ಟೆಸ್ಟ್ ಪಂದ್ಯಗಳಲ್ಲಿ 42.94 ಸರಾಸರಿಯಲ್ಲಿ 1589 ರನ್ ಬಾರಿಳಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧ 27 ಟೆಸ್ಟ್ ಪಂದ್ಯಗಳನ್ನಾಡಿರುವ ಕಪಿಲ್ ದೇವ್ 41.06 ಸರಾಸರಿಯಲ್ಲಿ 1355 ರನ್ ಗಳಿಸಿದ್ದಾರೆ.
ಮೊಹಮ್ಮದ್ ಅಜರುದ್ದೀನ್ ಇಂಗ್ಲೆಂಡ್ ವಿರುದ್ಧ 15 ಟೆಸ್ಟ್ ಪಂದ್ಯಗಳಲ್ಲಿ 58.09 ಸರಾಸರಿಯಲ್ಲಿ 1278 ರನ್ ಸಿಡಿಸಿದ್ದಾರೆ.
ವಿಜಯ್ ಮಂಜ್ರೇಕರ್ ಇಂಗ್ಲೆಂಡ್ ವಿರುದ್ಧ 17 ಟೆಸ್ಟ್ ಪಂದ್ಯಗಳಲ್ಲಿ 43.74 ಸರಾಸರಿಯಲ್ಲಿ 1181 ರನ್ ಬಾರಿಸಿದ್ದಾರೆ.
NEXT: ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಆರಂಭಿಕ ಬ್ಯಾಟರ್ ಯಾರು ಗೊತ್ತಾ?