17-03-2024

ಐಪಿಎಲ್​ನಲ್ಲಿ ಶತಕ ಸಿಡಿಸಿದ 6 ಆರ್​ಸಿಬಿ ಬ್ಯಾಟರ್ಸ್ ಯಾರು ಗೊತ್ತೇ?

Author: Vinay Bhat

ಮನೀಶ್ ಪಾಂಡೆ

ಮನೀಶ್ ಪಾಂಡೆ ಐಪಿಎಲ್‌ನಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ. ಇವರು RCB ಪರ ಐಪಿಎಲ್ 2009 ರಲ್ಲಿ ಡೆಕ್ಕನ್ ಚಾರ್ಜರ್ಸ್ ವಿರುದ್ಧ 114* ರನ್ ಗಳಿಸಿದರು.

ದೇವದತ್ ಪಡಿಕ್ಕಲ್

ಐಪಿಎಲ್ 2021 ರಲ್ಲಿ ವಾಂಖೆಡೆ ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 52 ಎಸೆತಗಳಲ್ಲಿ ದೇವದತ್ ಪಡಿಕ್ಕಲ್ ಬಿರುಸಿನ 101* ರನ್ ಗಳಿಸಿದರು.

ರಜತ್ ಪಾಟಿದಾರ್

ರಜತ್ ಪಾಟಿದಾರ್ ಆರ್​ಸಿಬಿ ಶತಕಗಳ ಪಟ್ಟಿಗೆ ಸೇರಿಕೊಂಡಿದ್ದಾರೆ. ಅವರು ಐಪಿಎಲ್ 2022 ರಲ್ಲಿ ಈಡನ್ ಗಾರ್ಡನ್ಸ್‌ನಲ್ಲಿ ಎಲ್‌ಎಸ್‌ಜಿ ವಿರುದ್ಧ 52 ಎಸೆತಗಳಲ್ಲಿ 112* ರನ್ ಗಳಿಸಿದರು.

ಎಬಿ ಡಿವಿಲಿಯರ್ಸ್

ಎಬಿ ಡಿವಿಲಿಯರ್ಸ್ ಆರ್​ಸಿಬಿಗಾಗಿ IPL ಇತಿಹಾಸದಲ್ಲಿ ಕೆಲವು ಸ್ಮರಣೀಯ ಆಟವನ್ನು ಆಡಿದ್ದಾರೆ. ಒಟ್ಟಾರೆ, ಅವರು ಐಪಿಎಲ್‌ನಲ್ಲಿ 2 ಶತಕಗಳನ್ನು ಗಳಿಸಿದ್ದಾರೆ.

ಕ್ರಿಸ್ ಗೇಲ್

ಕ್ರಿಸ್ ಗೇಲ್ ಐಪಿಎಲ್‌ನಲ್ಲಿ ಅತಿ ಹೆಚ್ಚು ಸ್ಕೋರ್ ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ - 175*. ಆರ್​ಸಿಬಿ ಪರ ಗೇಲ್ ಐದು ಶತಕಗಳನ್ನು ಸಿಡಿದ್ದಾರೆ.

ವಿರಾಟ್ ಕೊಹ್ಲಿ

ಕೊಹ್ಲಿ ಆರ್​ಸಿಬಿ ಫ್ರಾಂಚೈಸಿಗಾಗಿ 7000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ ಮತ್ತು ಪಂದ್ಯಾವಳಿಯ ಪ್ರಮುಖ ರನ್ ಸ್ಕೋರರ್ ಆಗಿದ್ದಾರೆ. ಕೊಹ್ಲಿ ಐಪಿಎಲ್‌ನಲ್ಲಿ 7 ಶತಕಗಳನ್ನು ಗಳಿಸಿದ್ದಾರೆ.

ಫಾಫ್ ಡುಪ್ಲೆಸಿಸ್

ಫಾಫ್ ಡುಪ್ಲೆಸಿಸಿಸ್ RCB ಪರ ಶತಕ ಗಳಿಸುವ ಹಂಚಿನನಲ್ಲಿ ಎಡವಿದ್ದರು. ಐಪಿಎಲ್ 2022 ರಲ್ಲಿ LSG ವಿರುದ್ಧ 96 ರನ್ ಗಳಿಸಿ ಔಟಾದರು.