17-05-2024

IPL 2024: ಈ ಆವೃತ್ತಿಯಲ್ಲಿ ಎಲ್ಲಾ ತಂಡಗಳ ನಾಯಕರ ಪ್ರದರ್ಶನ ಹೇಗಿತ್ತು?

Author: ಪೃಥ್ವಿ ಶಂಕರ

ಸಿಎಸ್​ಕೆ ನಾಯಕ ರುತುರಾಜ್ ಗಾಯಕ್ವಾಡ್ ಆಡಿರುವ​ 13 ಇನ್ನಿಂಗ್ಸ್‌ಗಳಲ್ಲಿ 58.3 ಸರಾಸರಿ ಮತ್ತು 141.5 ಸ್ಟ್ರೈಕ್ ರೇಟ್‌ನಲ್ಲಿ 583 ರನ್ ಬಾರಿಸಿದ್ದಾರೆ. ಇದರೊಂದಿಗೆ ಆರೆಂಜ್ ಕ್ಯಾಪ್ ರೇಸ್​ನಲ್ಲಿದ್ದಾರೆ.

ರಾಜಸ್ಥಾನದ ನಾಯಕ ಸ್ಯಾಮ್ಸನ್ ಆಡಿರುವ 13 ಇನ್ನಿಂಗ್ಸ್‌ಗಳಲ್ಲಿ 56 ಸರಾಸರಿ ಮತ್ತು 156.5 ಸ್ಟ್ರೈಕ್ ರೇಟ್‌ನಲ್ಲಿ 504 ರನ್ ಗಳಿಸಿದ್ದಾರೆ.

ಶ್ರೇಯಸ್ ಅಯ್ಯರ್ ಈ ಸೀಸನ್​ನಲ್ಲಿ ಆಡಿರುವ 12 ಇನ್ನಿಂಗ್ಸ್‌ಗಳಲ್ಲಿ 31.89 ಸರಾಸರಿ ಮತ್ತು 135.4 ಸ್ಟ್ರೈಕ್ ರೇಟ್‌ನಲ್ಲಿ 287 ರನ್ ಬಾರಿಸಿದ್ದಾರೆ.

ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಆಡಿರುವ 12 ಇನ್ನಿಂಗ್ಸ್‌ಗಳಲ್ಲಿ 18.18 ಸರಾಸರಿಯಲ್ಲಿ 200 ರನ್ ಕಲೆಹಾಕಿದ್ದರು. ಬೌಲಿಂಗ್​ನಲ್ಲಿ 11 ವಿಕೆಟ್ ಕೂಡ ಪಡೆದಿದ್ದಾರೆ.

ಲಕ್ನೋ ನಾಯಕ ಕೆಎಲ್ ರಾಹುಲ್ ಕೂಡ ಉತ್ತಮವಾಗಿ ಆಡಿದ್ದಾರೆ. ಆದರೆ ಅವರ ಸ್ಟ್ರೈಕ್ ರೇಟ್ ತುಂಬಾ ಕಳಪೆಯಾಗಿದೆ. ರಾಹುಲ್ 12 ಇನ್ನಿಂಗ್ಸ್‌ಗಳಲ್ಲಿ 37.5 ಸರಾಸರಿ ಮತ್ತು 135.5 ಸ್ಟ್ರೈಕ್ ರೇಟ್‌ನಲ್ಲಿ 450 ರನ್ ಬಾರಿಸಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಬ್ ಪಂತ್ ಕೂಡ ಕಾರು ಅಪಘಾತದಿಂದ ಚೇತರಿಸಿಕೊಂಡ ನಂತರ ಅದ್ಭುತ ಪುನರಾಗಮನ ಮಾಡಿದ್ದಾರೆ. ಈ ಸೀಸನ್​ನಲ್ಲಿ ಆಡಿದ 13 ಇನ್ನಿಂಗ್ಸ್‌ಗಳಲ್ಲಿ 40.55 ಸರಾಸರಿ ಮತ್ತು 155.4 ಸ್ಟ್ರೈಕ್ ರೇಟ್‌ನಲ್ಲಿ 448 ರನ್ ಬಾರಿಸಿದ್ದಾರೆ.

ಈ ಸೀಸನ್​ನಲ್ಲಿ ಮೊದಲ ಬಾರಿಗೆ ನಾಯಕತ್ವ ವಹಿಸಿಕೊಂಡಿದ್ದ ಶುಭ್​ಮನ್ ಗಿಲ್ ಆಡಿದ 12 ಇನ್ನಿಂಗ್ಸ್‌ಗಳಲ್ಲಿ 38.73 ಸರಾಸರಿ ಮತ್ತು 147.4 ಸ್ಟ್ರೈಕ್ ರೇಟ್‌ನಲ್ಲಿ 426 ರನ್ ಗಳಿಸಿದ್ದಾರೆ.

ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಈ ಸೀಸನ್​ನಲ್ಲಿ ಆಡಿದ 13 ಇನ್ನಿಂಗ್ಸ್‌ಗಳಲ್ಲಿ 28.23 ಸರಾಸರಿ ಮತ್ತು 168.3 ಸ್ಟ್ರೈಕ್ ರೇಟ್‌ನಲ್ಲಿ 367 ರನ್ ಗಳಿಸಿದ್ದಾರೆ. 

ಪಂಜಾಬ್ ನಾಯಕ ಶಿಖರ್ ಧವನ್ ಐದು ಇನ್ನಿಂಗ್ಸ್‌ಗಳಲ್ಲಿ 30.4 ಸರಾಸರಿ ಮತ್ತು 125.6 ಸ್ಟ್ರೈಕ್ ರೇಟ್‌ನಲ್ಲಿ 152 ರನ್ ಬಾರಿಸಿದ್ದರು. ಅದೇ ಸಮಯದಲ್ಲಿ, ನಾಯಕನಾಗಿ, ಸ್ಯಾಮ್ ಕರನ್ ಏಳು ಇನ್ನಿಂಗ್ಸ್‌ಗಳಲ್ಲಿ 30 ರ ಸರಾಸರಿಯಲ್ಲಿ ಮತ್ತು 121 ಸ್ಟ್ರೈಕ್ ರೇಟ್‌ನಲ್ಲಿ 150 ರನ್ ಸಿಡಿಸಿದ್ದಾರೆ.

ಹೈದರಾಬಾದ್ ನಾಯಕ ಪ್ಯಾಟ್ ಕಮ್ಮಿನ್ಸ್ ಏಳು ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿ, 19.25 ಸರಾಸರಿ ಮತ್ತು 163.8 ಸ್ಟ್ರೈಕ್ ರೇಟ್‌ನಲ್ಲಿ 77 ರನ್ ಗಳಿಸಿದ್ದಾರೆ. ಹಾಗೆಯೇ ಬೌಲಿಂಗ್​ನಲ್ಲಿ ಆಡಿದ 12 ಇನ್ನಿಂಗ್ಸ್‌ಗಳಲ್ಲಿ 14 ವಿಕೆಟ್ ಪಡೆದಿದ್ದಾರೆ.