22-02-2024

IPL 2024 Schedule: ಎಲ್ಲಾ 10 ತಂಡಗಳು ಎಷ್ಟು ಪಂದ್ಯಗಳನ್ನಾಡಲಿವೆ? ಇಲ್ಲಿದೆ ಸಂಪೂರ್ಣ ವಿವರ

Author: ಪೃಥ್ವಿ ಶಂಕರ

ಮೊದಲಾರ್ಧದ ಐಪಿಎಲ್​ 2024 ರಲ್ಲಿ ಆರ್​ಸಿಬಿ ಒಟ್ಟು ಐದು ಪಂದ್ಯಗಳನ್ನಾಡಲಿದೆ. ಅದರಲ್ಲಿ ಚೆನ್ನೈ, ಪಂಜಾಬ್, ಕೋಲ್ಕತ್ತಾ, ಲಕ್ನೋ, ರಾಜಸ್ಥಾನ್ ತಂಡವನ್ನು ಎದುರಿಸಲಿದೆ.

ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್ ಕಿಂಗ್ಸ್ 4 ಪಂದ್ಯಗಳನ್ನಾಡಲಿದ್ದು, ಆರ್​ಸಿಬಿ, ಗುಜರಾತ್, ಡೆಲ್ಲಿ ಕ್ಯಾಪಿಟಲ್ಸ್, ಸನ್​ರೈಸರ್ಸ್​ ಹೈದರಾಬಾದ್ ತಂಡವನ್ನು ಎದುರಿಸಲಿದೆ.

ಮುಂಬೈ ಇಂಡಿಯನ್ಸ್ ತಂಡ 4 ಪಂದ್ಯಗಳನ್ನಾಡಲಿದ್ದು, ಗುಜರಾತ್, ಹೈದರಾಬಾದ್, ರಾಜಸ್ಥಾನ್, ಡೆಲ್ಲಿ ತಂಡವನ್ನು ಎದುರಿಸಲಿದೆ.

ಗುಜರಾತ್ ಟೈಟಾನ್ಸ್ 5 ಪಂದ್ಯಗಳನ್ನಾಡಲಿದ್ದು, ಮುಂಬೈ, ಚೆನ್ನೈ, ಹೈದರಾಬಾದ್, ಪಂಜಾಬ್ ತಂಡಗಳನ್ನು ಎದುರಿಸಲಿದೆ.

ಪಂಜಾಬ್ ಕಿಂಗ್ಸ್ ತಂಡ 4 ಪಂದ್ಯಗಳನ್ನಾಡಲಿದ್ದು, ಡೆಲ್ಲಿ, ಆರ್​ಸಿಬಿ, ಲಕ್ನೋ, ಗುಜರಾತ್ ತಂಡಗಳನ್ನು ಎದುರಿಸಲಿದೆ.

ಕೆಕೆಆರ್ ತಂಡ 3 ಪಂದ್ಯಗಳನ್ನಾಡಲಿದ್ದು, ಹೈದರಾಬಾದ್, ಆರ್​ಸಿಬಿ, ಡೆಲ್ಲಿ ತಂಡಗಳನ್ನು ಎದುರಿಸಲಿದೆ.

ಸನ್​ರೈಸರ್ಸ್​ ಹೈದರಾಬಾದ್ ತಂಡ 4 ಪಂದ್ಯಗಳನ್ನಾಡಲಿದ್ದು, ಕೋಲ್ಕತ್ತಾ, ಮುಂಬೈ, ಗುಜರಾತ್, ಚೆನ್ನೈ ತಂಡವನ್ನು ಎದುರಿಸಲಿದೆ.

ಲಕ್ನೋ ಸೂಪರ್ ಜೈಂಟ್ಸ್ 3 ಪಂದ್ಯಗಳನ್ನಾಡಲಿದ್ದು, ರಾಜಸ್ಥಾನ್, ಪಂಜಾಬ್, ಆರ್​ಸಿಬಿ ತಂಡಗಳನ್ನು ಎದುರಿಸಲಿದೆ.

ರಾಜಸ್ಥಾನ ರಾಯಲ್ಸ್ 4 ಪಂದ್ಯಗಳನ್ನಾಡಲಿದ್ದು, ಲಕ್ನೋ, ಡೆಲ್ಲಿ, ಮುಂಬೈ, ಆರ್​ಸಿಬಿ ತಂಡಗಳನ್ನು ಎದುರಿಸಲಿದೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡ 5 ಪಂದ್ಯಗಳನ್ನಾಡಲಿದ್ದು, ಪಂಜಾಬ್, ರಾಜಸ್ಥಾನ್, ಚೆನ್ನೈ, ಮುಂಬೈ ತಂಡಗಳನ್ನು ಎದುರಿಸಲಿದೆ.