15-12-2023

ಈ ಐವರು ಭಾರತೀಯ ಆಟಗಾರರು ಖರೀದಿಯಾಗುವುದು ಡೌಟ್..!

Author: ಪೃಥ್ವಿ ಶಂಕರ

ಐಪಿಎಲ್ 2024 ರ ಕಿರು-ಹರಾಜು ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಲಿದೆ.

ಖಾಲಿ ಇರುವ 77 ಸ್ಲಾಟ್‌ಗಳಿಗೆ 333 ಆಟಗಾರರ ಹೆಸರನ್ನು ಅಂತಿಮಗೊಳಿಸಲಾಗಿದೆ. ಇದರಲ್ಲಿ 214 ಭಾರತೀಯ ಆಟಗಾರರು ಸೇರಿದ್ದಾರೆ.

ಈ 214 ಭಾರತೀಯ ಆಟಗಾರರ ಪೈಕಿ ಟೀಂ ಇಂಡಿಯಾ ಪರ ಆಡಿರುವ ಈ ಐವರು ಆಟಗಾರರು ಮಾರಾಟವಾಗುವ ಸಾಧ್ಯತೆ ತೀರ ಕಡಿಮೆ.

ಕೇದಾರ್ ಜಾಧವ್: ಬಹಳ ವರ್ಷಗಳಿಂದ ಐಪಿಎಲ್ ಆಡುತ್ತಿರುವ ಜಾದವ್ ಅವರ ಇತ್ತೀಚಿನ ಫಾರ್ಮ್​ ಉತ್ತಮವಾಗಿಲ್ಲ. ಅಲ್ಲದೆ ಅವರ ಮೂಲ ಬೆಲೆ 2 ಕೋಟಿ ಇರುವುದರಿಂದ ಅವರು ಖರೀದಿಯಾಗುವುದು ಅನುಮಾನ.

ಹನುಮ ವಿಹಾರಿ: ಭಾರತದ ಪರ ಟೆಸ್ಟ್ ಕ್ರಿಕೆಟ್ ಆಡಿರುವ ವಿಹಾರಿ, ಐಪಿಎಲ್‌ನಲ್ಲಿ ಸ್ಥಿರ ಅಸ್ತಿತ್ವವನ್ನು ಉಳಿಸಿಕೊಂಡಿಲ್ಲ. ಇದುವರೆಗೆ ಕೇವಲ 24 ಐಪಿಎಲ್​ ಪಂದ್ಯಗಳನ್ನು ಆಡಿರುವ ಅವರು 2019 ರಿಂದ ಯಾವುದೇ ಆಟದ ಭಾಗವಾಗಿಲ್ಲ.

ವರುಣ್ ಆರೋನ್: ವೇಗದ ಬೌಲಿಂಗ್​ಗೆ ಹೆಸರುವಾಸಿಯಾಗಿರುವ ವರುಣ್ ಐಪಿಎಲ್ ಅಷ್ಟು ಯಶಸ್ವಿಯಾಗಿಲ್ಲ. 50 ಕ್ಕೂ ಹೆಚ್ಚು ಐಪಿಎಲ್ ಪಂದ್ಯಗಳನ್ನು ಆಡಿದ್ದರೂ, ಅವರ ಪ್ರದರ್ಶನವು ಗಮನಾರ್ಹವಾಗಿ ಕಡಿಮೆಯಾಗಿದೆ.

ಶಹಬಾಜ್ ನದೀಮ್: 2019 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ತಂಡಕ್ಕೆ 3.2 ಕೋಟಿಗೆ ಹರಾಜಿಗಿದ್ದ ನದೀಮ್, 2022 ರಿಂದ ಐಪಿಎಲ್‌ನಲ್ಲಿ ಯಾವುದೇ ತಂಡಕ್ಕೆ ಆಯ್ಕೆಯಾಗಿಲ್ಲ.

ಕರುಣ್ ನಾಯರ್: ಕಳೆದ ಐಪಿಎಲ್​ನಲ್ಲಿ ಲಕ್ನೋ ಪರ ರಾಹುಲ್ ಬದಲಿಗೆ ಆಯ್ಕೆಯಾಗಿದ್ದ ಕರುಣ್ ಪಂದ್ಯವನ್ನಾಡುವ ಅವಕಾಶ ಪಡೆದಿರಲಿಲ್ಲ. ಅಲ್ಲದೆ ದೇಶೀ ಕ್ರಿಕೆಟ್​ನಲ್ಲೂ ಅವರ ಪ್ರದರ್ಶನ ಉತ್ತಮವಾಗಿಲ್ಲ.