27-05-2024

IPL 2024: ಕೆಕೆಆರ್ ಕೈಸೇರಿದ ಐಪಿಎಲ್ ಟ್ರೋಫಿ ಎಷ್ಟು ದುಬಾರಿ ಗೊತ್ತಾ?

Author: ಪೃಥ್ವಿ ಶಂಕರ

17ನೇ ಆವೃತ್ತಿಯ ಐಪಿಎಲ್​ಗೆ ಅದ್ಧೂರಿ ತೆರೆಬಿದ್ದಿದೆ. ಫೈನಲ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿದ ಕೆಕೆಆರ್​ ಮೂರನೇ ಬಾರಿಗೆ ಚಾಂಪಿಯನ್ ಆಗಿದೆ.

ಇನ್ನು ಈ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದ ಕೆಕೆಆರ್ ತಂಡಕ್ಕೆ ಟ್ರೋಫಿಯೊಂದಿಗೆ 20 ಕೋಟಿ ರೂಪಾಯಿ ಬಹುಮಾನ ಕೂಡ ನೀಡಲಾಗಿದೆ.

ನಗದು ಬಹುಮಾನ ಮಾತ್ರವಲ್ಲದೆ, ಕೆಕೆಆರ್‌ ತಂಡದ ಕೈಸೇರಿರುವ ಐಪಿಎಲ್ ಟ್ರೋಫಿ ಕೂಡ ದುಬಾರಿ ಬೆಲೆಯದ್ದಾಗಿದೆ.

ಈ ಟ್ರೋಫಿ ತಯಾರಿಕೆಯಲ್ಲಿ ಪರಿಶುದ್ಧ ಚಿನ್ನವನ್ನು ಬಳಸಲಾಗಿದೆ. ಚಿನ್ನದ ಜೊತೆಗೆ ಬೆಳ್ಳಿಯನ್ನೂ ಸಹ ಇದರಲ್ಲಿ ಬಳಸಲಾಗಿದೆ.

ಪ್ರತಿ ಆವೃತ್ತಿಯ ವಿನ್ನರ್​ಗೂ ಈ ಟ್ರೋಫಿಯನ್ನು ನೀಡಲಾಗುತ್ತದೆ. ಬಿಸಿಸಿಐ ಈ ಟ್ರೋಫಿಯನ್ನು ತಯಾರಿಸಿದ್ದು, ವಿಜೇತ ತಂಡದ ಹೆಸರನ್ನು ಅದರಲ್ಲಿ ಬರೆಯಲಾಗಿರುತ್ತದೆ.

ಐಪಿಎಲ್ ಟ್ರೋಫಿಯ ತೂಕ ಸುಮಾರು ಆರು ಕಿಲೋ. ಈ ಟ್ರೋಫಿಯನ್ನು ಮುಖೇಶ್ ಅಂಬಾನಿ ಅವರ ಸೋದರ ಮಾವ ರಸೆಲ್ ಮೆಹ್ತಾ ಅವರ ಕಂಪನಿ ತಯಾರಿಸಿದೆ.

ಇನ್ನು ಈ ಟ್ರೋಫಿಯ ಬೆಲೆಯ ಬಗ್ಗೆ ನಾವು ಮಾತನಾಡುವುದಾದರೆ, ಈ ಟ್ರೋಫಿಯ ಬೆಲೆಯನ್ನು ಅಧಿಕೃತವಾಗಿ ಎಲ್ಲಿಯೂ ಬಹಿರಂಗಪಡಿಸಲಾಗಿಲ್ಲ.

ಆದರೆ ವಿವಿಧ ಮಾಧ್ಯಮಗಳಲ್ಲಿ ವರದಿಯಾಗಿರುವ ಪ್ರಕಾರ ಇದರ ಬೆಲೆ ಸುಮಾರು 50 ಲಕ್ಷ ಎಂದು ಹೇಳಲಾಗಿದೆ.

ಬೆಲೆಗೆ ಸಂಬಂಧಿಸಿದಂತೆ, ಈ ಟ್ರೋಫಿಯನ್ನು ವಿಶ್ವಕಪ್ ಟ್ರೋಫಿಗಿಂತ ಹೆಚ್ಚು ದುಬಾರಿ ಎಂದು ಪರಿಗಣಿಸಲಾಗಿದೆ. ವಿಶ್ವಕಪ್ ಟ್ರೋಫಿಯ ಅಂದಾಜು ಮೌಲ್ಯ ಸುಮಾರು $30,000 ಅಂದರೆ ರೂ.24 ಲಕ್ಷಕ್ಕಿಂತ ಹೆಚ್ಚು.

NEXT: IPL 2024: ಆರೆಂಜ್ ಕ್ಯಾಪ್ ಗೆದ್ದ ಕಿಂಗ್ ಕೊಹ್ಲಿಗೆ ಸಿಕ್ಕ ಹಣವೇಷ್ಟು..!