04-05-2024

ಐಪಿಎಲ್ 2024 ರ ಬಹುಮಾನದ ಗಾತ್ರ ಎಷ್ಟು ಕೋಟಿ ಗೊತ್ತಾ?

Author: ಪೃಥ್ವಿ ಶಂಕರ

ವರದಿಯ ಪ್ರಕಾರ, ಐಪಿಎಲ್ 2024 ಕ್ಕೆ 46.5 ಕೋಟಿ ರೂಪಾಯಿಗಳನ್ನು ಬಹುಮಾನಕ್ಕಾಗಿ ಮೀಸಲಿರಿಸಲಾಗಿದೆ.

ಇದರಲ್ಲಿ ವಿಜೇತ ತಂಡಕ್ಕೆ ಬರೋಬ್ಬರಿ 20 ಕೋಟಿ ರೂಗಳು ಬಹುಮಾನವಾಗಿ ಸಿಗಲಿದೆ.

ರನ್ನರ್​ಅಪ್ ತಂಡ 13 ಕೋಟಿ ರೂಗಳನ್ನು ಬಹುಮಾನವಾಗಿ ಪಡೆಯಲ್ಲಿದೆ.

ವಿನ್ನರ್, ರನ್ನರ್​ಅಪ್ ತಂಡಗಳಂತೆ ಮೂರನೇ ಸ್ಥಾನ ಪಡೆದ ತಂಡಕ್ಕೂ 7 ಕೋಟಿ ರೂ.  ನಗದು ಸಿಗಲಿದೆ.

ನಾಲ್ಕನೇ ಸ್ಥಾನ ಪಡೆಯುವ ತಂಡಕ್ಕೆ 6.5 ಕೋಟಿ ರೂ.ಗಳನ್ನು ಬಹುಮಾನವನ್ನಾಗಿ ನೀಡಲಾಗುತ್ತದೆ.

ಇದಲ್ಲದೆ ಆಟಗಾರರ ವೈಯಕ್ತಿಕ ಪ್ರದರ್ಶನಕ್ಕೂ ಬಹುಮಾನ ಸಿಗಲಿದ್ದು, ಅಧಿಕ ರನ್ ಬಾರಿಸಿ ಆರೆಂಜ್ ಕ್ಯಾಪ್ ಗೆಲ್ಲುವ ಬ್ಯಾಟರ್​ಗೆ 15 ಲಕ್ಷ ರೂ ಬಹುಮಾನ ಸಿಗಲಿದೆ.

ಹಾಗೆಯೇ ಬೌಲಿಂಗ್​ನಲ್ಲಿ ಅಧಿಕ ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಗೆಲ್ಲುವ ಬೌಲರ್​ಗೂ 15 ಲಕ್ಷ ರೂ ಬಹುಮಾನ ಸಿಗಲಿದೆ.

ಅದೇ ರೀತಿ ಅತ್ಯಂತ ಮೌಲ್ಯಯುತ ಆಟಗಾರ (most valuable) ಮತ್ತು ಸೂಪರ್ ಸ್ಟ್ರೈಕರ್ ಆಟಗಾರರಿಗೆ 15 ಲಕ್ಷ ರೂ. ಬಹುಮಾನ ಸಿಕ್ಕರೆ, ಗೇಮ್ ಚೇಂಜರ್ ಆಟಗಾರನಿಗೆ 12 ಲಕ್ಷ ರೂ. ಸಿಗಲಿದೆ.

NEXT: T20 World Cup 2024: ಈ ಮೂವರು ಭಾರತೀಯರಿಗೆ ಇದು ಕೊನೆಯ ಟಿ20 ವಿಶ್ವಕಪ್‌..!