13-05-2024

IPL 2024: ತವರು ನೆಲದಲ್ಲಿ ವಿಶೇಷ ಸಾಧನೆ ಮಾಡಿದ ಅಶ್ವಿನ್

Author: ಪೃಥ್ವಿ ಶಂಕರ

ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಸುಲಭ ಜಯ ದಾಖಲಿಸಿತು.

ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಪ್ರತಿನಿಧಿಸಿದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಎರಡು ವಿಕೆಟ್ ಪಡೆದರು.

ಇದರೊಂದಿಗೆ ಅಶ್ವಿನ್ ಐಪಿಎಲ್‌ನಲ್ಲಿ ಯಾವುದೇ ಒಂದು ಸ್ಥಳದಲ್ಲಿ 50 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದರು.

ಚೆಪಾಕ್ ಸ್ಟೇಡಿಯಂನಲ್ಲಿ 50 ವಿಕೆಟ್‌ಗಳನ್ನು ಪೂರೈಸಿದ ಅಶ್ವಿನ್ ಯಾವುದೇ ಒಂದು ಮೈದಾನದಲ್ಲಿ 50 ವಿಕೆಟ್ ಪೂರೈಸಿದ ಆರನೇ ಬೌಲರ್ ಎನಿಸಿಕೊಂಡರು.

ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಕೆಕೆಆರ್‌ನ ಸುನಿಲ್ ನರೈನ್ ಇದುವರೆಗೆ 70 ವಿಕೆಟ್‌ಗಳನ್ನು ಕಬಳಿಸಿದ್ದು, ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಮುಂಬೈನ ಲಸಿತ್ ಮಾಲಿಂಗ ವಾಂಖೆಡೆ ಸ್ಟೇಡಿಯಂನಲ್ಲಿ 68 ವಿಕೆಟ್ ಪಡೆದಿದ್ದು, ಎರಡನೇ ಸ್ಥಾನದಲ್ಲಿದ್ದಾರೆ.

ದೆಹಲಿ ಪರ ಆಡಿದ ಅಮಿತ್ ಮಿಶ್ರಾ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ 58 ವಿಕೆಟ್ ಪಡೆದಿದ್ದಾರೆ.

ರಾಜಸ್ಥಾನದ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಬೆಂಗಳೂರಿನಲ್ಲಿ 52 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.

ಮುಂಬೈ ಇಂಡಿಯನ್ಸ್ ವೇಗಿ ಜಸ್ಪ್ರೀತ್ ಬುಮ್ರಾ ವಾಂಖೆಡೆಯಲ್ಲಿ 52 ವಿಕೆಟ್ ಪಡೆದಿದ್ದಾರೆ.

NEXT: IPL: ಐಪಿಎಲ್‌ನಲ್ಲಿ ವಿಶೇಷ ಮೈಲಿಗಲ್ಲು ದಾಟಿದ ಕಿಂಗ್ ಕೊಹ್ಲಿ