06-05-2024

IPL 2024: ರಸೆಲ್ ದಾಖಲೆ ಸರಿಗಟ್ಟಿದ ಸುನಿಲ್ ನರೈನ್

Author: ಪೃಥ್ವಿ ಶಂಕರ

ಸುನಿಲ್ ನರೈನ್ ಈ ಸೀಸನ್‌ನಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡುತ್ತಿದ್ದಾರೆ.

ಈ ಸೀಸನ್‌ನಲ್ಲಿ ಇದುವರೆಗೆ 11 ಪಂದ್ಯಗಳನ್ನಾಡಿರುವ ನರೈನ್ 461 ರನ್ ಬಾರಿಸಿದ್ದು 14 ವಿಕೆಟ್ ಕೂಡ ಪಡೆದಿದ್ದಾರೆ.

ನಿನ್ನೆ ನಡೆದ ಲಕ್ನೋ ಸೂಪರ್‌ಜೈಂಟ್ಸ್ ವಿರುದ್ಧವೂ ಅಬ್ಬರಿಸಿದ ನರೈನ್ 39 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಏಳು ಸಿಕ್ಸರ್‌ ಸೇರಿದಂತೆ 81 ರನ್‌ ಚಚ್ಚಿದರು.

ಈ ಸ್ಫೋಟಕ ಇನ್ನಿಂಗ್ಸ್​ಗಾಗಿ ನರೈನ್ ಪಂದ್ಯದ ಆಟಗಾರ ಪ್ರಶಸ್ತಿ ಕೂಡ ಪಡೆದರು.

ಈ ಮೂಲಕ ನರೈನ್ ಕೆಕೆಆರ್‌ ಪರ ಐಪಿಎಲ್‌ನಲ್ಲಿ ಅತಿ ಹೆಚ್ಚು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರ ಎಂಬ ಹೆಗ್ಗಳಿಕೆಗೆ ನರೈನ್ ಪಾತ್ರರಾದರು.

ಅಲ್ಲದೆ ಈ ವಿಚಾರದಲ್ಲಿ ಆಂಡ್ರೆ ರಸೆಲ್ ಅವರನ್ನು ಸರಿಗಟ್ಟಿದರು. ರಸೆಲ್ ಮತ್ತು ನರೈನ್ ಇಬ್ಬರೂ ತಂಡದ ಪರ ಇದುವರೆಗೆ ತಲಾ 15 ಬಾರಿ ಈ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ನಂತರದ ಸ್ಥಾನದಲ್ಲಿರುವ ಗೌತಮ್ ಗಂಭೀರ್ ಕೋಲ್ಕತ್ತಾ ಪರ 10 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದಿದ್ದಾರೆ.

ಕೆಕೆಆರ್ ಪರ ಸುದೀರ್ಘ ಕಾಲ ಆಡಿದ ಯೂಸುಫ್ ಪಠಾಣ್ ಏಳು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.