22-04-2024

IPL 2024: 53 ಲಕ್ಷ ರೂ. ನಷ್ಟ ಅನುಭವಿಸಿದ ಕಿಂಗ್ ಕೊಹ್ಲಿ..!

Author: ಪೃಥ್ವಿ ಶಂಕರ

ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ಆರ್​ಸಿಬಿ ಬ್ಯಾಟರ್ ವಿರಾಟ್​ ಕೊಹ್ಲಿಗೆ ಬಿಸಿಸಿಐ ದಂಡ ವಿಧಿಸಿದೆ.

ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಂಪೈರ್ ತೀರ್ಪಿಗೆ ಅಸಮಾಧಾನ ಹೊರಹಾಕಿದ್ದಲ್ಲದೆ, ಅವರೊಂದಿಗೆ ವಾಗ್ವಾದ ನಡೆಸಿದ್ದರು.

ಇದೀಗ ಕೊಹ್ಲಿಯ ಈ ವರ್ತನೆಗೆ ಕ್ರಮ ಜರುಗಿಸಿರುವ ಬಿಸಿಸಿಐ ಅವರ ಪಂದ್ಯ ಶುಲ್ಕದ ಶೇಕಡಾ 50 ರಷ್ಟು ಸಂಭಾವನೆಯನ್ನು ದಂಡವಾಗಿ ವಿಧಿಸಿದೆ.

ಅದರಂತೆ ಕೊಹ್ಲಿ ಈಗ ತನ್ನ ಮುಂಗೋಪದ ನಿರ್ಧಾರದಿಂದಾಗಿ ಅಂದಾಜು 53 ಲಕ್ಷ ರೂಪಾಯಿಗಳನ್ನು ದಂಡವಾಗಿ ಬಿಸಿಸಿಐಗೆ ಪಾವತಿಸಬೇಕಿದೆ.

ವಾಸ್ತವವಾಗಿ ಆರ್‌ಸಿಬಿ, ಒಂದು ಸೀಸನ್‌ ಆಡಲು ವಿರಾಟ್ ಕೊಹ್ಲಿಗೆ 15 ಕೋಟಿ ರೂ. ಸಂಭಾವನೆ ನೀಡುತ್ತದೆ.

ಅಂದರೆ ಒಂದು ಪಂದ್ಯಕ್ಕೆ ಕೊಹ್ಲಿಯ ಸಂಭಾವನೆ ಸರಿಸುಮಾರು 1.07 ಕೋಟಿ ರೂಪಾಯಿಗಳು.

ಇದೀಗ ಪಂದ್ಯ ಶುಲ್ಕದ ಶೇಕಡಾ 50 ರಷ್ಟು ಸಂಭಾವನೆಯನ್ನು ಕೊಹ್ಲಿ ದಂಡವಾಗಿ ಪಾವತಿಸಿದರೆ, ಅವರ ಸಂಭಾವನೆಯಲ್ಲಿ 53 ಲಕ್ಷ ರೂ. ಖಡಿತವಾಗಲಿದೆ.

ಇನ್ನು ಪಂದ್ಯದ ವಿಚಾರಕ್ಕೆ ಬರುವುದಾದರೆ.. ಈ ಪಂದ್ಯದಲ್ಲಿ ವಿವಾದಾತ್ಮಕ ತೀರ್ಪಿಗೆ ಔಟಾಗುವ ಮುನ್ನ ಕೊಹ್ಲಿ 7 ಎಸೆತಗಳಲ್ಲಿ 1 ಬೌಂಡರಿ 2 ಸಿಕ್ಸರ್ ಸಹಿತ 18 ರನ್ ಕಲೆಹಾಕಿದ್ದರು.

NEXT: ಈ ಐಪಿಎಲ್‌ನಲ್ಲಿ ವೇಗದ ಅರ್ಧಶತಕ ಸಿಡಿಸಿದ್ಯಾರು ಗೊತ್ತಾ?