ಕೂದಲೆಳೆ ಅಂತರದಿಂದ ಅಗ್ರಸ್ಥಾನ ತಪ್ಪಿಸಿಕೊಂಡ ಆರ್ಸಿಬಿ: ಇಲ್ಲಿದೆ ಪಾಯಿಂಟ್ಸ್ ಟೇಬಲ್
28 May 2025 Author: Vinay Bhat
Pic credit - Google
ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡ ಅಗ್ರಸ್ಥಾನದೊಂದಿಗೆ ಲೀಗ್ ಕೊನೆಗೊಳಿಸಿದೆ. ಆಡಿದ 14 ಪಂದ್ಯಗಳಲ್ಲಿ ಒಂಬತ್ತರಲ್ಲಿ ಜಯ- ನಾಲ್ಕರಲ್ಲಿ ಸೋಲು ಹಾಗೂ ಒಂದು ಪಂದ್ಯ ರದ್ದುಗೊಂಡು +0.372 ರನ್ರೇಟ್ನೊಂದಿಗೆ 19 ಅಂಕ ಪಡೆದುಕೊಂಡಿದೆ.
ಪಂಜಾಬ್ ಕಿಂಗ್ಸ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಲಕ್ನೋ ವಿರುದ್ಧ ಗೆದ್ದು ಎರಡನೇ ಸ್ಥಾನಕ್ಕೆ ಜಿಗಿದಿದೆ. ಆಡಿದ 14 ಪಂದ್ಯಗಳಲ್ಲಿ 9 ರಲ್ಲಿ ಜಯ 4 ಸೋಲು ಹಾಗೂ ಒಂದು ಪಂದ್ಯ ರದ್ದುಗೊಂಡು +0.301 ರನ್ ರೇಟ್ ಮೂಲಕ 19 ಅಂಕ ಪಡೆದಿದೆ. ರನ್ರೇಟ್ ಆಧಾರದ ಮೇಲೆ ಆರ್ಸಿಬಿ ಎರಡನೇ ಸ್ಥಾನದಲ್ಲಿದೆ.
ಆರ್ಸಿಬಿ
ಶುಭ್ಮನ್ ಗಿಲ್ ನಾಯಕತ್ವದ ಗುಜರಾತ್ ಟೈಟಾನ್ಸ್ ತಂಡ ಮೂರನೇ ಸ್ಥಾನಕ್ಕೆ ಕುಸಿದಿದೆ. ಇವರು ಆಡಿದ 14 ಪಂದ್ಯಗಳ ಪೈಕಿ ಒಂಬತ್ತರಲ್ಲಿ ಜಯ ಸಾಧಿಸಿ ಐದರಲ್ಲಿ ಸೋತು 18 ಅಂಕ ಸಂಪಾದಿಸಿದೆ. +0.254 ರನ್ರೇಟ್ ಹೊಂದಿದೆ.
ಗುಜರಾತ್ ಟೈಟಾನ್ಸ್
ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಪಂಜಾಬ್ ವಿರುದ್ಧ ಸೋತರೂ ನಾಲ್ಕನೇ ಸ್ಥಾನದಲ್ಲಿದೆ. ಆಡಿದ 14 ಪಂದ್ಯಗಳಲ್ಲಿ ಆರು ಸೋಲು ಹಾಗೂ ಎಂಟು ಜಯ ಕಂಡು 16 ಅಂಕ ಪಡೆದುಕೊಂಡಿದ್ದು, +1.142 ರನ್ರೇಟ್ ಹೊಂದಿದೆ.
ಮುಂಬೈ ಇಂಡಿಯನ್ಸ್
ಅಕ್ಷರ್ ಪಟೇಲ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐದನೇ ಸ್ಥಾನದಲ್ಲಿದ್ದು ಟೂರ್ನಿಯಿಂದ ಔಟ್ ಆಗಿದೆ. ಆಡಿದ 14 ಪಂದ್ಯಗಳಲ್ಲಿ ಆರರಲ್ಲಿ ಸೋಲು ಏಳರಲ್ಲಿ ಜಯ ಹಾಗೂ ಒಂದು ರದ್ದು ಕಂಡು 15 ಅಂಕ ಸಂಪಾದಿಸಿದೆ. +0.011 ರನ್ರೇಟ್ ಹೊಂದಿದೆ.
ಡೆಲ್ಲಿ ಕ್ಯಾಪಿಟಲ್ಸ್
ಸನ್ರೈಸರ್ಸ್ ಹೈದರಾಬಾದ್ ತಂಡ ಆರನೇ ಸ್ಥಾನಕ್ಕೆ ಏರಿ ಟೂರ್ನಿಯನ್ನು ಮುಗಿಸಿದೆ. ಆಡಿದ 14 ಪಂದ್ಯದಲ್ಲಿ ಆರು ಗೆಲುವು- ಏಳು ಸೋಲು ಹಾಗೂ ಒಂದು ಪಂದ್ಯ ರದ್ದಾದ ಪರಿಣಾಮ 13 ಅಂಕ ಸಂಪಾದಿಸಿದೆ. -0.241 ರನ್ ರೇಟ್ ಹೊಂದಿದೆ.
ಸನ್ರೈಸರ್ಸ್ ಹೈದರಾಬಾದ್
ರಿಷಭ್ ಪಂತ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡ ಏಳನೇ ಸ್ಥಾನದಲ್ಲಿದೆ. ಆಡಿದ 14 ಪಂದ್ಯಗಳಲ್ಲಿ ಆರು ಗೆಲುವು 8 ಸೋಲು ಕಾಣುವ ಮೂಲಕ -0.376 ರನ್ರೇಟ್ ಹೊಂದಿದೆ.
ಲಕ್ನೋ ಸೂಪರ್ ಜೈಂಟ್ಸ್
ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಎಂಟನೇ ಸ್ಥಾನದೊಂದಿಗೆ ಟೂರ್ನಿಯನ್ನು ಮುಗಿಸಿದೆ. ಆಡಿದ 14 ಪಂದ್ಯಗಳಲ್ಲಿ ಐದರಲ್ಲಿ ಜಯ- ಏಳರಲ್ಲಿ ಸೋಲು ಹಾಗೂ ಒಂದು ಪಂದ್ಯ ರದ್ದು ಕಾಣುವ ಮೂಲಕ -0.305 ರನ್ ರೇಟ್ ಹೊಂದಿದೆ.
ಕೆಕೆಆರ್
ರಾಜಸ್ಥಾನ್ ರಾಯಲ್ಸ್ ತಂಡ ಆಡಿದ 14 ಪಂದ್ಯಗಳಲ್ಲಿ ನಾಲ್ಕರಲ್ಲಿ ಜಯ- ಹತ್ತರಲ್ಲಿ ಸೋಲು ಕಂಡಿದೆ. ಪಾಯಿಂಟ್ಸ್ ಟೇಬಲ್ನಲ್ಲಿ ಒಂಬತ್ತನೇ ಸ್ಥಾನದಲ್ಲಿದ್ದು, -0.549 ರನ್ ರೇಟ್ ಹೊಂದಿದೆ.
ರಾಜಸ್ಥಾನ್ ರಾಯಲ್ಸ್
ಚೆನ್ನೈ ಸೂಪರ್ ಕಿಂಗ್ಸ್ ತಂಡ ಗೆಲುವಿನೊಂದಿಗೆ ತನ್ನ ಐಪಿಎಲ್ 2025 ಪಯಣವನ್ನು ಮುಗಿಸಿದೆ. ಆಡಿದ 14 ಪಂದ್ಯಗಳಲ್ಲಿ ಹತ್ತು ಸೋಲು 4 ಗೆಲುವು ಮೂಲಕ 8 ಅಂಕ ಪಡೆದಿದೆ. ಈ ತಂಡ -0.647 ರನ್ ರೇಟ್ನೊಂದಿಗೆ ಹತ್ತನೇ ಸ್ಥಾನದಲ್ಲಿದೆ.