IPL 2025 Points Table: ದ್ವಿತೀಯ ಸ್ಥಾನಕ್ಕೆ ಜಿಗಿದ ಗುಜರಾತ್: ಕುಸಿದ ಆರ್ಸಿಬಿ
07 April 2025 Author: Vinay Bhat
Pic credit - Google
ಅಕ್ಷರ್ ಪಟೇಲ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐಪಿಎಲ್ 2025 ರಲ್ಲಿ ಭರ್ಜರಿ ಆರಂಭ ಪಡೆದುಕೊಂಡಿದೆ. ಆಡಿದ ಮೂರೂ ಪಂದ್ಯಗಳಲ್ಲಿ ಜಯ ಸಾಧಿಸಿ 6 ಅಂಕ ಸಂಪಾದಿಸಿದೆ. +1.257 ರನ್ರೇಟ್ ಹೊಂದಿದ್ದು ಮೊದಲ ಸ್ಥಾನದಲ್ಲಿದೆ.
ಡೆಲ್ಲಿ ಕ್ಯಾಪಿಟಲ್ಸ್
ಶುಭ್ಮನ್ ಗಿಲ್ ನಾಯಕತ್ವದ ಗುಜರಾತ್ ಟೈಟಾನ್ಸ್ ತಂಡ ಹೈದರಾಬಾದ್ ವಿರುದ್ಧ ಗೆದ್ದು ದ್ವಿತೀಯ ಸ್ಥಾನಕ್ಕೆ ಜಿಗಿದಿದೆ. ಆಡಿದ ನಾಲ್ಕು ಪಂದ್ಯಗಳ ಪೈಕಿ ಮೂರರಲ್ಲಿ ಜಯ ಸಾಧಿಸಿ 6 ಅಂಕ ಸಂಪಾದಿಸಿದೆ. +1.031 ರನ್ರೇಟ್ ಹೊಂದಿದೆ.
ಗುಜರಾತ್ ಟೈಟಾನ್ಸ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದು ತನ್ನ ನಾಲ್ಕನೇ ಪಂದ್ಯ ಆಡಲಿದೆ. ಸದ್ಯ ಪಾಯಿಂಟ್ಸ್ ಟೇಬಲ್ನಲ್ಲಿ ಮೂರನೇ ಸ್ಥಾನದಲ್ಲಿದೆ. ಆಡಿದ ಮೂರು ಪಂದ್ಯಗಳಲ್ಲಿ 2 ಜಯ 1 ಸೋಲು ಕಂಡು +1.149 ರನ್ ರೇಟ್ ಹೊಂದಿ 4 ಅಂಕ ಪಡೆದುಕೊಂಡಿದೆ.
ಆರ್ಸಿಬಿ
ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್ ಈ ಋತುವಿನಲ್ಲಿ ಉತ್ತಮವಾಗಿ ಕಾಣಿಸುತ್ತಿದೆ. ಆಡಿದ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಜಯ- ಒಂದರಲ್ಲಿ ಸೋಲು ಕಂಡು ನಾಲ್ಕನೇ ಸ್ಥಾನದಲ್ಲಿದೆ. +0.074 ರನ್ರೇಟ್ನೊಂದಿಗೆ 4 ಅಂಕ ಪಡೆದುಕೊಂಡಿದೆ.
ಪಂಜಾಬ್ ಕಿಂಗ್ಸ್
ಅಜಿಂಕ್ಯಾ ರಹಾನೆ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಹೈದರಾಬಾದ್ ವಿರುದ್ಧ ಗೆದ್ದು ಐದನೇ ಸ್ಥಾನಕ್ಕೆ ಜಿಗಿದಿತ್ತು. ಆಡಿರುವ 4 ಪಂದ್ಯಗಳಲ್ಲಿ ಎರಡು ಸೋಲು- ಎರಡು ಗೆಲುವು ಮೂಲಕ +0.070 ರನ್ ರೇಟ್ ಹೊಂದಿದೆ.
ಕೆಕೆಆರ್
ರಿಷಭ್ ಪಂತ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡ ಮುಂಬೈ ವಿರುದ್ಧ ಗೆದ್ದ ಒಂದು ಸ್ಥಾನ ಮೇಲೇರಿದೆ. ಆಡಿದ ನಾಲ್ಕು ಪಂದ್ಯಗಳಲ್ಲಿ ಎರಡು ಗೆಲುವು ಎರಡು ಸೋಲು ಕಾಣುವ ಮೂಲಕ +0.048 ರನ್ರೇಟ್ ನೊಂದಿಗೆ ಆರನೇ ಸ್ಥಾನದಲ್ಲಿದೆ.
ಲಕ್ನೋ ಸೂಪರ್ ಜೈಂಟ್ಸ್
ರಾಜಸ್ಥಾನ್ ರಾಯಲ್ಸ್ ತಂಡ ಆಡಿದ ನಾಲ್ಕು ಪಂದ್ಯಗಳಲ್ಲಿ ಎರಡರಲ್ಲಿ ಜಯ- ಇನ್ನೆರಡರಲ್ಲಿ ಸೋಲು ಕಂಡಿದೆ. ಪಾಯಿಂಟ್ಸ್ ಟೇಬಲ್ನಲ್ಲಿ ಏಳನೇ ಸ್ಥಾನದಲ್ಲಿದ್ದು, -0.185 ರನ್ ರೇಟ್ ಹೊಂದಿದೆ.
ರಾಜಸ್ಥಾನ್ ರಾಯಲ್ಸ್
ಮುಂಬೈ ಇಂಡಿಯನ್ಸ್ ತಂಡ ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರು ಸೋಲು ಒಂದು ಗೆಲುವು ಕಂಡು 2 ಅಂಕ ಪಡೆದುಕೊಂಡಿದ್ದು, +0.108 ರನ್ರೇಟ್ ಹೊಂದಿ ಎಂಟನೇ ಸ್ಥಾನದಲ್ಲಿದೆ.
ಮುಂಬೈ ಇಂಡಿಯನ್ಸ್
ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೂಡ ಆಡಿರುವ ಮೂರು ಪಂದ್ಯಗಳಲ್ಲಿ ಎರಡು ಸೋಲು ಕೇವಲ 1 ಗೆಲುವು ಮೂಲಕ 2 ಅಂಕ ಪಡೆದುಕೊಂಡಿದೆ. ಈ ತಂಡ -0.771 ರನ್ ರೇಟ್ನೊಂದಿಗೆ ಎಂಟನೇ ಸ್ಥಾನಕ್ಕೆ ಕುಸಿದಿದೆ.
ಚೆನ್ನೈ ಸೂಪರ್ ಕಿಂಗ್ಸ್
ಪ್ಯಾಟ್ ಕಮ್ಮಿನ್ಸ್ ನಾಯಕತ್ವದ ಸನ್ರೈಸರ್ಸ್ ಹೈದರಾಬಾದ್ ತಂಡ ಪಾತಾಳಕ್ಕೆ ಕುಸಿದಿದೆ. ಆಡಿದ ಐದು ಪಂದ್ಯದಲ್ಲಿ ಒಂದು ಗೆಲುವು- ನಾಲ್ಕು ಸೋಲಿನ ಮೂಲಕ 2 ಅಂಕ ಸಂಪಾದಿಸಿದೆ. -1.629 ರನ್ ರೇಟ್ನೊಂದಿಗೆ ಹತ್ತನೇ ಸ್ಥಾನದಲ್ಲಿದೆ.