ಈವರೆಗೆ ಪರ್ಪಲ್ ಕ್ಯಾಪ್ ಗೆಲ್ಲದ ಐಪಿಎಲ್ ಲೆಜೆಂಡ್ಸ್ ಯಾರು ಗೊತ್ತೇ?

14 March2024

Author: Vinay Bhat

ಹರ್ಭಜನ್  ಸಿಂಗ್ 163 ಐಪಿಎಲ್ ಪಂದ್ಯಗಳಲ್ಲಿ 150 ವಿಕೆಟ್ ಗಳಿಸುವ ಮೂಲಕ ಐಪಿಎಲ್ ಇತಿಹಾಸದಲ್ಲಿ 10 ನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.

ಹರ್ಭಜನ್ ಸಿಂಗ್

ಹರ್ಭಜನ್ ಸಿಂಗ್ ಈವರೆಗೆ ಪರ್ಪಲ್ ಕ್ಯಾಪ್ ಮೇಲೆ ಎಂದಿಗೂ ಕೈ ಹಾಕಲಿಲ್ಲ. ಅವರು ಮುಂಬೈ ಇಂಡಿಯನ್ಸ್‌ನೊಂದಿಗೆ ಮೂರು ಬಾರಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಹರ್ಭಜನ್ ಸಿಂಗ್

ರವಿಚಂದ್ರನ್ ಅಶ್ವಿನ್ 2010 ರ ಋತುವಿನಿಂದ ಐಪಿಎಲ್ ತಂಡಗಳ ಪ್ರಮುಖ ಭಾಗವಾಗಿದ್ದಾರೆ. 2010 ಮತ್ತು 2011 ರಲ್ಲಿ ಸಿಎಸ್​ಕೆ ಪರ 2 ಬಾರಿ ಪ್ರಶಸ್ತಿ ಗೆದ್ದಿದ್ದಾರೆ.

ರವಿಚಂದ್ರನ್ ಅಶ್ವಿನ್

ರವಿಚಂದ್ರನ್ ಅಶ್ವಿನ್ ಐಪಿಎಲ್ ಇತಿಹಾಸದಲ್ಲಿ ಐದನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಇವರು ಚೆನ್ನೈ, ಪುಣೆ, ಪಂಜಾಬ್, ಡೆಲ್ಲಿ ಮತ್ತು ರಾಜಸ್ಥಾನ್ ಪರ ಆಡಿದ್ದಾರೆ.

ರವಿಚಂದ್ರನ್ ಅಶ್ವಿನ್

ಸುನಿಲ್ ನರೈನ್ ಐಪಿಎಲ್‌ನ ಶ್ರೇಷ್ಠ ಸ್ಪಿನ್ನರ್​ಗಳಲ್ಲಿ ಒಬ್ಬರು. 2012 ರಿಂದ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಗಾಗಿ ಮಾತ್ರ ಆಡಿದ ಆಟಗಾರನಾಗಿದ್ದಾರೆ.

ಸುನಿಲ್ ನರೈನ್

ಸುನಿಲ್ ನರೈನ್ ಅವರು 163 ವಿಕೆಟ್‌ಗಳೊಂದಿಗೆ ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ವಿಕೆಟ್ ಪಡೆದ ಎಂಟನೇ ಬೌಲರ್ ಆಗಿದ್ದಾರೆ.

ಸುನಿಲ್ ನರೈನ್

ಜಸ್ಪ್ರೀತ್ ಬುಮ್ರಾ ಅವರು ವಿಶ್ವ ಕ್ರಿಕೆಟ್‌ನಲ್ಲಿ ಅತ್ಯುತ್ತಮ ವೇಗದ ಬೌಲರ್‌ಗಳಲ್ಲಿ ಒಬ್ಬರಾಗಿದ್ದಾರೆ. ಅವರು ಮುಂಬೈ ಇಂಡಿಯನ್ಸ್ ಗೆದ್ದ ಪ್ರತಿ ಐದು ಐಪಿಎಲ್ ಪ್ರಶಸ್ತಿಗಳ ಭಾಗವಾಗಿದ್ದಾರೆ.

ಜಸ್ಪ್ರೀತ್ ಬುಮ್ರಾ

ಬುಮ್ರಾ ಕೇವಲ 120 ಪಂದ್ಯಗಳಲ್ಲಿ 145 ವಿಕೆಟ್‌ಗಳನ್ನು ಪಡೆದಿದ್ದಾರೆ. 2020 ರಲ್ಲಿ 27 ವಿಕೆಟ್ ಪಡೆದಿದ್ದರೂ ಪರ್ಪಲ್ ಕ್ಯಾಪ್ ಕೈಗೆ ಸಿಗಲಿಲ್ಲ.

ಜಸ್ಪ್ರೀತ್ ಬುಮ್ರಾ

2017 ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ ರಶೀದ್ ಕೇವಲ 109 ಪಂದ್ಯಗಳಲ್ಲಿ 139 ವಿಕೆಟ್‌ಗಳೊಂದಿಗೆ ಅತ್ಯುತ್ತಮ ಬೌಲರ್‌ಗಳಲ್ಲಿ ಒಬ್ಬರಾಗಿದ್ದಾರೆ.

ರಶೀದ್ ಖಾನ್

ರಶೀದ್ ಖಾನ್ 2017 ರಿಂದ 2021 ರವರೆಗೆ ಸನ್‌ರೈಸರ್ಸ್ ಹೈದರಾಬಾದ್‌ಗಾಗಿ ಆಡಿದ್ದರು. 2022 ರಲ್ಲಿ ಗುಜರಾತ್ ಟೈಟಾನ್ಸ್‌ಗೆ ಸೇರಿಕೊಂಡರು.

ರಶೀದ್ ಖಾನ್