22-05-2024

IPL: ಅತಿ ಹೆಚ್ಚು ಐಪಿಎಲ್ ಫೈನಲ್‌ಗಳನ್ನು ಆಡಿದ ಆಟಗಾರ ಯಾರು ಗೊತ್ತಾ?

Author: ಪೃಥ್ವಿ ಶಂಕರ

ಅತಿ ಹೆಚ್ಚು ಐಪಿಎಲ್ ಫೈನಲ್‌ಗಳನ್ನು ಆಡಿದ ಆಟಗಾರರ ಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಇದ್ದಾರೆ. ಧೋನಿ ಐಪಿಎಲ್‌ನಲ್ಲಿ 11 ಫೈನಲ್ ಪಂದ್ಯಗಳನ್ನು ಆಡಿದ್ದಾರೆ.

ಈ ಪಟ್ಟಿಯಲ್ಲಿ ರವೀಂದ್ರ ಜಡೇಜಾ ಎರಡನೇ ಸ್ಥಾನದಲ್ಲಿದ್ದು, ಅವರು ಇದುವರೆಗೆ ಎಂಟು ಬಾರಿ ಫೈನಲ್ ಆಡಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಸುರೇಶ್ ರೈನಾ ಕೂಡ ಎಂಟು ಬಾರಿ ಫೈನಲ್‌ ಆಡಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮತ್ತೊಬ್ಬ ಮಾಜಿ ಆಟಗಾರ ಅಂಬಟಿ ರಾಯುಡು ಎಂಟು ಬಾರಿ ಐಪಿಎಲ್‌ನಲ್ಲಿ ಫೈನಲ್‌ ಆಡಿದ್ದಾರೆ.

ಪ್ರಸ್ತುತ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿರುವ ರವಿಚಂದ್ರನ್ ಅಶ್ವಿನ್ ಏಳು ಬಾರಿ ಫೈನಲ್ ಆಡಿದ್ದಾರೆ.

ಮಾಜಿ ಸಿಎಸ್​ಕೆ ಆಲ್​​ರೌಂಡರ್ ಡ್ವೇನ್ ಬ್ರಾವೋ ಕೂಡ ಏಳು ಬಾರಿ ಐಪಿಎಲ್‌ ಫೈನಲ್‌ ಆಡಿದ್ದಾರೆ.

ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಆರು ಬಾರಿ ಫೈನಲ್ ಆಡಿದ್ದಾರೆ.

ಮಾಜಿ ಮುಂಬೈ ಇಂಡಿಯನ್ಸ್ ಆಟಗಾರ ಕೀರನ್ ಪೊಲಾರ್ಡ್ ಕೂಡ ಆರು ಬಾರಿ ಫೈನಲ್ ಆಡಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಆರು ಬಾರಿ ಐಪಿಎಲ್‌ನಲ್ಲಿ ಫೈನಲ್ ಆಡಿದ್ದಾರೆ.

NEXT: ಇನ್ಸ್ಟಾಗ್ರಾಮ್ನಲ್ಲಿ ದಾಖಲೆ ಬರೆದ ಚೆನ್ನೈ ಸೂಪರ್ ಕಿಂಗ್ಸ್