ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಸೂಪರ್ ಸ್ಟಾರ್ಸ್; ಐಪಿಎಲ್‌ನಲ್ಲಿ ಫ್ಲಾಪ್ ಸ್ಟಾರ್ಸ್..!
Author: ಪೃಥ್ವಿ ಶಂಕರ
ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ತಮ್ಮ ಆಕ್ರಮಣಕಾರಿ ಆಟದಿಂದ ಸಂಚಲನ ಸೃಷ್ಟಿಸುವ ಈ ಐವರು ಆಟಗಾರರು ಐಪಿಎಲ್‌ನಲ್ಲಿ ಮಾತ್ರ ನಿಷ್ಪರಿಣಾಮಕಾರಿಯಾಗಿದ್ದಾರೆ.
ಮಿಲಿಯನ್ ಡಾಲರ್ ಟೂರ್ನಿಯಾದ ಐಪಿಎಲ್‌ನಲ್ಲಿ ಭಾರತವನ್ನು ಹೊರತುಪಡಿಸಿ, ಪ್ರಪಂಚದಾದ್ಯಂತದ ಸ್ಟಾರ್ ಆಟಗಾರರು ಭಾಗವಹಿಸುತ್ತಾರೆ.
ಆದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಅಬ್ಬರಿಸುವ ಈ ಆಟಗಾರರು ಐಪಿಎಲ್‌ನಲ್ಲಿ ಮಾತ್ರ ಕಳಪೆ ಪ್ರದರ್ಶನ ನೀಡುತ್ತಾರೆ. ಅಂತಹ ಆಟಗಾರರ ವಿವರ ಇಲ್ಲಿದೆ.
ಈ ಪಟ್ಟಿಯಲ್ಲಿ ಮೊದಲ ಹೆಸರು ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಆರೋನ್ ಫಿಂಚ್. ಈ ಆಸೀಸ್ ಮಾಜಿ ನಾಯಕ 71 ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 2346 ರನ್ ಬಾರಿಸಿದ್ದಾರೆ. ಆದರೆ, ಐಪಿಎಲ್‌ನಲ್ಲಿ ಮಾತ್ರ 87 ಪಂದ್ಯಗಳಲ್ಲಿ ಕೇವಲ 2005 ರನ್ ಕಲೆಹಾಕಿದ್ದಾರೆ.
ನ್ಯೂಜಿಲೆಂಡ್ನ ಸ್ಫೋಟಕ ಬ್ಯಾಟರ್ ಮಾರ್ಟಿನ್ ಗಪ್ಟಿಲ್ ಕೂಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಬ್ಬರಿಸಿದಷ್ಟು, ಐಪಿಎಲ್‌ನಲ್ಲಿ ಮಿಂಚಲಿಲ್ಲ. ಐಪಿಎಲ್‌ನಲ್ಲಿ ಅವರು ಆಡಿದ 13 ಪಂದ್ಯಗಳಲ್ಲಿ ಕೇವಲ 270 ರನ್ ಬಾರಿಸಿದ್ದಾರೆ.
ನ್ಯೂಜಿಲೆಂಡ್ನ ಮತ್ತೊಬ್ಬ ಬ್ಯಾಟರ್ ಕಾಲಿನ್ ಮುನ್ರೊ ಕೂಡ 65 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 1724 ರನ್ ಬಾರಿಸಿದ್ದರೆ, 13 ಐಪಿಎಲ್ ಪಂದ್ಯಗಳಲ್ಲಿ ಕೇವಲ 177 ರನ್ ಮಾತ್ರ ಕಲೆಹಾಕಿದರು.
ಈ ಬಾರಿಯ ಐಪಿಎಲ್‌ನಲ್ಲಿ ತನ್ನ ಪ್ರದರ್ಶನದಿಂದ ಎಲ್ಲರನ್ನೂ ನಿರಾಸೆಗೊಳಿಸಿರುವ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್. ಈ ಸೀಸನ್ನಲ್ಲಿ ಅವರು ಏಳು ಪಂದ್ಯಗಳಲ್ಲಿ ಕೇವಲ 32 ರನ್ ಮಾತ್ರ ಬಾರಿಸಿದ್ದಾರೆ. ಇದರ ಹೊರತಾಗಿ ಐದು ವಿಕೆಟ್ ಮಾತ್ರ ಪಡೆದಿದ್ದಾರೆ.
NEXT: ಮೊದಲ ಓವರ್ನಲ್ಲೇ ವಿಕೆಟ್ ಉರುಳಿಸುವುದರಲ್ಲಿ ಇವರು ನಿಸ್ಸೀಮರು..!