RCB ತಂಡಕ್ಕೆ ಕಾಲಿಟ್ಟ ಸೆಹ್ವಾಗ್ ಸೋದರಳಿಯ: ಶಹ್ಬಾಜ್ ಔಟ್

26 November 2023

ಐಪಿಎಲ್ 2024 ರ ಹರಾಜು ಮುನ್ನ ಟ್ರೇಡ್ ಕುತೂಹಲ ಕೆರಳಿಸಿದೆ. ನ. 26ಕ್ಕೆ ಎಲ್ಲಾ ತಂಡಗಳು ಉಳಿಸಿಕೊಂಡಿರುವ ಮತ್ತು ಬಿಡುಗಡೆಯಾದ ಆಟಗಾರರ ಪಟ್ಟಿಯನ್ನು ನೀಡಬೇಕಿದೆ.

ಐಪಿಎಲ್ ಟ್ರೇಡ್

ಪ್ರಸ್ತುತ, ಈ ವಹಿವಾಟಿನ ವಿಂಡೋದಲ್ಲಿ ಚರ್ಚೆಯಲ್ಲಿರುವುದು ಜಿಟಿ ನಾಯಕ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್‌ಗೆ ಮರಳುವ ಬಗ್ಗೆ.

ಹಾರ್ದಿಕ್ ಸಂಚಲನ

ಇದರ ನಡುವೆ ಸದ್ದಿಲ್ಲದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಗಡುವಿನ ಒಂದು ದಿನ ಮುಂಚಿತವಾಗಿ ಶನಿವಾರದಂದು ವಹಿವಾಟು ನಡೆಸಿದೆ.

ಆರ್‌ಸಿಬಿ

RCB ಹಿಮಾಚಲ ಪ್ರದೇಶದ ಸ್ಪಿನ್-ಆಲ್ರೌಂಡರ್ ಮಯಾಂಕ್ ದಾಗರ್ ಅವರನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿದೆ. ಇವರು ವೀರೇಂದ್ರ ಸೆಹ್ವಾಗ್ ಅವರ ಸೋದರಳಿಯ.

ಸೆಹ್ವಾಗ್ ಸೋದರಳಿಯ

ಡಾಗರ್ ಸನ್‌ರೈಸರ್ಸ್ ಹೈದರಾಬಾದ್‌ನ ಭಾಗವಾಗಿದ್ದರು. ಇವರನ್ನು ಕರೆತರಲು ಆರ್‌ಸಿಬಿ ಶಹ್ಬಾಜ್ ಅಹ್ಮದ್ ಅವರನ್ನು ಎಸ್‌ಆರ್‌ಎಚ್‌ಗೆ ಹಸ್ತಾಂತರಿಸಿದೆ.

ಶಹ್ಬಾಜ್ ಔಟ್

ಡಾಗರ್ ಕಳೆದ ಋತುವಿನಲ್ಲಿ SRH ಪರ 3 ಪಂದ್ಯಗಳನ್ನು ಆಡಿ 1 ವಿಕೆಟ್ ಪಡೆದಿದ್ದರು. ಇತ್ತ ಬೆಂಗಳೂರು ಪರ ಅಹ್ಮದ್ 42 ರನ್ ಗಳಿಸಿ 1 ವಿಕೆಟ್ ಪಡೆದಿದ್ದರು.

ಪ್ರದರ್ಶನ ಹೇಗಿತ್ತು?

ಡಾಗರ್ ಕೂಡ ಕೊಹ್ಲಿಯಂತೆ ಫಿಟ್‌ನೆಸ್‌ಗೆ ಫೇಮಸ್ ಆಗಿದ್ದಾರೆ. ಅವರ ಯೋ-ಯೋ ಟೆಸ್ಟ್ ಸ್ಕೋರ್ 19.3 ಆಗಿದೆ ಎಂದು ಹೇಳಲಾಗಿದೆ.

ಫಿಟ್ ಆಟಗಾರ

ಹಿಮಾಚಲ ಪ್ರದೇಶದ ಎಡಗೈ ಸ್ಪಿನ್ನರ್ ಮಯಾಂಕ್ ಒಟ್ಟಾರೆಯಾಗಿ 54 ಟಿ20ಗಳಲ್ಲಿ 55 ವಿಕೆಟ್ ಪಡೆದಿದ್ದಾರೆ. ಎಲ್ಲಾ ಮೂರು ಸ್ವರೂಪಗಳಲ್ಲೂ ಇವರು ಆಡುತ್ತಾರೆ.

54 ಪಂದ್ಯ 55 ವಿಕೆಟ್