11-02-2024

IND vs ENG: 3ನೇ ಟೆಸ್ಟ್​ಗೆ ಭಾರತದ ಪ್ಲೇಯಿಂಗ್ XI

Author: Vinay Bhat

ರೋಹಿತ್ ಶರ್ಮಾ

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಓಪನರ್ ಆಗಿ ಆಡಲಿದ್ದಾರೆ. ರನ್ ಗಳಿಸಲು ಪರದಾಡುತ್ತಿರುವ ಇವರ ಮೇಲೆ ಸಾಕಷ್ಟು ಒತ್ತಡವಿದೆ.

ಯಶಸ್ವಿ ಜೈಸ್ವಾಲ್

ಜೈಸ್ವಾಲ್ ಎರಡನೇ ಟೆಸ್ಟ್‌ನಲ್ಲಿ ತಮ್ಮ ದ್ವಿಶತಕದ ಮೂಲಕ ಭರ್ಜರಿ ಫಾರ್ಮ್​ನಲ್ಲಿದ್ದಾರೆ. ಮೂರು ಪಂದ್ಯದಲ್ಲಿ ಕೂಡ ತಮ್ಮ ಫಾರ್ಮ್ ಅನ್ನು ಮುಂದುವರಿಸಲು ನೋಡುತ್ತಿದ್ದಾರೆ.

ಶುಭ್​ಮನ್ ಗಿಲ್

ಗಿಲ್ ಎರಡನೇ ಟೆಸ್ಟ್​ನಲ್ಲಿ ಶತಕ ಸಿಡಿಸಿ ಟೀಕೆ ಮಾಡುವವರ ಬಾಯಿ ಮುಚ್ಚಿಸಿದ್ದರು. ಇದೀಗ ಮೂರನೇ ಟೆಸ್ಟ್​ನಲ್ಲಿ ಇವರ ಮೇಲೆ ಹೆಚ್ಚಿನ ನಿರೀಕ್ಷೆಯಿದೆ.

ಕೆಎಲ್ ರಾಹುಲ್

ಮಂಡಿರಜ್ಜು ಗಾಯದಿಂದ ಚೇತರಿಸಿಕೊಂಡ ನಂತರ ಕೆಎಲ್ ರಾಹುಲ್ ಅಂತಿಮ ಮೂರು ಟೆಸ್ಟ್‌ಗಳಿಗೆ ತಂಡಕ್ಕೆ ಮರಳಿದ್ದಾರೆ. ಇವರ ಮೇಲೂ ನಿರೀಕ್ಷೆಯಿದೆ.

ರಜತ್ ಪಾಟಿದಾರ್

ರಜತ್ ಪಾಟಿದಾರ್ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಸರ್ಫಾರಾಜ್ ಖಾನ್ ಬೆಂಚ್ ಕಾಯುವುದು ಮುಂದುವರೆಯಲಿದೆ. ರಜತ್ ನಂ.5ರಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ.

ಕೆಎಸ್ ಭರತ್

ವೈಫಲ್ಯ ಅನುಭವಿಸುತ್ತಿದ್ದರೂ ಕೆಎಸ್ ಭರತ್ ಅವರಿಗೆ ಮತ್ತೊಮ್ಮೆ ಅವಕಾಶ ನೀಡಲಾಗಿದೆ. ಮೂರನೇ ಟೆಸ್ಟ್​ನಲ್ಲಿ ಇವರು ವಿಕೆಟ್ ಕೀಪರ್-ಬ್ಯಾಟರ್ ಆಗಿರುತ್ತಾರೆ.

ರವೀಂದ್ರ ಜಡೇಜಾ

ಗಾಯದ ಸಮಸ್ಯೆಯಿಂದಾಗಿ ಎರಡನೇ ಪಂದ್ಯದಿಂದ ಹೊರಗುಳಿದ ನಂತರ ರವೀಂದ್ರ ಜಡೇಜಾ ಕೊನೆಯ ಮೂರು ಟೆಸ್ಟ್‌ಗಳಿಗೆ ಭಾರತ ತಂಡಕ್ಕೆ ಮರಳಿದ್ದಾರೆ.

ರವಿಚಂದ್ರನ್ ಅಶ್ವಿನ್

ರಚಂದ್ರನ್ ಅಶ್ವಿನ್ ತಮ್ಮ 500ನೇ ಟೆಸ್ಟ್ ವಿಕೆಟ್‌ ಹುಡುಕಾಟದಲ್ಲಿದ್ದಾರೆ. ಇದು ಮೂರನೇ ಟೆಸ್ಟ್ ಪಂದ್ಯದಲ್ಲಿ ಆಗುವುದು ಖಚಿತ.

ಅಕ್ಷರ್ ಪಟೇಲ್

ಅಕ್ಷರ್ ಪಟೇಲ್ ಭಾರತಕ್ಕೆ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಪ್ರಮುಖರಾಗಿದ್ದಾರೆ. 3ನೇ ಟೆಸ್ಟ್​ನಲ್ಲಿ ಇವರು ಸ್ಥಾನ ಪಡೆಯಬಹುದು.

ಜಸ್ಪ್ರೀತ್ ಬುಮ್ರಾ

ಜಸ್ಪ್ರೀತ್ ಬುಮ್ರಾ ಅವರು 15 ವಿಕೆಟ್‌ಗಳೊಂದಿಗೆ ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್ ಸರಣಿಯ ಪ್ರಮುಖ ವಿಕೆಟ್ ಟೇಕರ್ ಆಗಿದ್ದಾರೆ.

ಮೊಹಮ್ಮದ್ ಸಿರಾಜ್

ಮೊಹಮ್ಮದ್ ಸಿರಾಜ್ ಎರಡನೇ ಟೆಸ್ಟ್‌ನಿಂದ ವಿಶ್ರಾಂತಿ ಪಡೆದ ನಂತರ ಮೂರನೇ ಟೆಸ್ಟ್ ಮೂಲಕ ಆಡುವ XI ಗೆ ಮರಳುವ ಸಾಧ್ಯತೆ ಇದೆ.