16-12-2023

‘IND vs SA: ಏಕದಿನದಲ್ಲಿ ನಾಯಕನಾಗಿ ಕೆಎಲ್ ರಾಹುಲ್ ಸಾಧನೆ ಹೇಗಿದೆ?

Author: ಪೃಥ್ವಿ ಶಂಕರ

ದಕ್ಷಿಣ ಆಫ್ರಿಕಾ ಮತ್ತು ಭಾರತ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಡಿಸೆಂಬರ್ 17 ರಂದು ಆರಂಭವಾಗಲಿದೆ.

ಈ ಏಕದಿನ ಸರಣಿಯಲ್ಲಿ, ಕೆಎಲ್ ರಾಹುಲ್ ಅವರು ದಕ್ಷಿಣ ಆಫ್ರಿಕಾದ ನೆಲದಲ್ಲಿ ಮೊದಲ ಬಾರಿಗೆ ಟೀಮ್ ಇಂಡಿಯಾದ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ.

ಈ ಏಕದಿನ ಸರಣಿಯಲ್ಲಿ ಕೆಎಲ್ ರಾಹುಲ್ ಬಹುತೇಕ ಹೊಸ ತಂಡವನ್ನು ಹೊಂದಿದ್ದು, ಈ ತಂಡದೊಂದಿಗೆ ಪ್ರೋಟೀಸ್‌ಗೆ ಸವಾಲೊಡ್ಡಬೇಕಿದೆ.

ಕೆಎಲ್ ರಾಹುಲ್ ಏಕದಿನ ಕ್ರಿಕೆಟ್‌ನಲ್ಲಿ ಭಾರತ ತಂಡದ ನಾಯಕರಾಗುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು ಒಂಬತ್ತು ಏಕದಿನ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದಾರೆ.

ಈ 9 ಪಂದ್ಯಗಳಲ್ಲಿ ಟೀಂ ಇಂಡಿಯಾ 6 ಪಂದ್ಯ ಗೆದ್ದಿದ್ದರೆ 3 ಪಂದ್ಯಗಳಲ್ಲಿ ಸೋಲು ಕಂಡಿದೆ. ನಾಯಕನಾಗಿ, ಅವರ ಗೆಲುವಿನ ಶೇಕಡಾವಾರು 66.66 ಆಗಿದೆ.

ಭಾರತವು 2021-22ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಈ ತಂಡದ ವಿರುದ್ಧ ಕೊನೆಯ ಬಾರಿಗೆ 3ಪಂದ್ಯಗಳ ಏಕದಿನ ಸರಣಿಯನ್ನು ಆಡಿ ಕ್ಲೀನ್ ಸ್ವೀಪ್ ಮುಖಭಂಗ ಅನುಭವಿಸಿತ್ತು.

ಇನ್ನು ಕೆಎಲ್ ರಾಹುಲ್ ಇದುವರೆಗೆ ಆಫ್ರಿಕಾ ವಿರುದ್ಧ ಉತ್ತಮ ಪ್ರದರ್ಶನ ನೀಡಿಲ್ಲ. ಈ ತಂಡದ ವಿರುದ್ಧ 5 ಪಂದ್ಯಗಳನ್ನಾಡಿರುವ ಅವರು 22.00 ಸರಾಸರಿಯೊಂದಿಗೆ 110 ರನ್ ಗಳಿಸಿದ್ದಾರೆ.

ಹಾಗೆಯೇ ಕೆಎಲ್ ರಾಹುಲ್ ದಕ್ಷಿಣ ಆಫ್ರಿಕಾ ನೆಲದಲ್ಲಿ 3 ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಅವರು 25.33 ಸರಾಸರಿಯೊಂದಿಗೆ 66 ರನ್ ಗಳಿಸಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಕೆಎಲ್ ರಾಹುಲ್ ಇದುವರೆಗೆ ಏಕದಿನ ಮಾದರಿಯಲ್ಲಿ ಒಂದೇ ಒಂದು ಸಿಕ್ಸರ್ ಗಳಿಸಲು ಸಾಧ್ಯವಾಗಿಲ್ಲ.

NEXT: ಟಿ20ಯಲ್ಲಿ ಅಧಿಕ ಸಿಕ್ಸರ್ ಬಾರಿಸಿರುವ ಬ್ಯಾಟರ್​ಗಳ ಪೈಕಿ ಮೂವರು ಭಾರತೀಯರು