30-09-2023

ಭಾರತದ ಪ್ರ್ಯಾಕ್ಟೀಸ್ ಸೆಷನ್​ಗೆ ಬಂದಿದ್ದು ಕೇವಲ 4 ಮಂದಿ ಮಾತ್ರ

ಐಚ್ಛಿಕ ಅಭ್ಯಾಸ

ಭಾರತ-ಇಂಗ್ಲೆಂಡ್ ವಿಶ್ವಕಪ್ ವಾರ್ಮ್-ಅಪ್ ಪಂದ್ಯಕ್ಕೂ ಮುನ್ನ ಶುಕ್ರವಾರ ಗುವಾಹಟಿಯಲ್ಲಿ ಟೀಮ್ ಇಂಡಿಯಾ ಆಟಗಾರರಿಗೆ ಐಚ್ಛಿಕ ಅಭ್ಯಾಸ ಏರ್ಪಡಿಸಲಾಗಿತ್ತು.

ಕೊಹ್ಲಿ-ರೋಹಿತ್ ಗೈರು

ಐಚ್ಛಿಕ ಅಭ್ಯಾಸದಲ್ಲಿ ಹೆಚ್ಚಿನ ಭಾರತೀಯ ಆಟಗಾರರು ಭಾಗವಹಿಸಲಿಲ್ಲ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಪ್ರ್ಯಾಕ್ಟೀಸ್ ನಡೆಸಲಿಲ್ಲ.

ಅಶ್ವಿನ್ ಅಭ್ಯಾಸ

ರವಿಚಂದ್ರನ್ ಅಶ್ವಿನ್ ಅವರು ನಿರಂತರ 20 ನಿಮಿಷಗಳ ಕಾಲ ಬ್ಯಾಟಿಂಗ್ ಅಭ್ಯಾಸ ನಡೆಸಿದರು. ಅಕ್ಷರ್ ಪಟೇಲ್ ಬದಲು ಇವರು ಸ್ಥಾನ ಪಡೆದಿದ್ದಾರೆ.

4 ಆಟಗಾರರು

ಭಾರತದ ಅಭ್ಯಾಸ ಸೆಷನ್​ನಲ್ಲಿ ಅಶ್ವಿನ್ ಜೊತೆಗೆ ಶುಭ್​ಮನ್ ಗಿಲ್, ಇಶಾನ್ ಕಿಶನ್ ಮತ್ತು ಶಾರ್ದೂಲ್ ಥಾಕೂರ್ ಮಾತ್ರ ಭಾಗವಹಿಸಿದ್ದರು.

ಭಾರತ-ಇಂಗ್ಲೆಂಡ್

ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ತನ್ನ ಏಕದಿನ ವಿಶ್ವಕಪ್ ಮೊದಲ ಅಭ್ಯಾಸ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.

ಪಂದ್ಯ ಎಲ್ಲಿ

ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂಡೋ-ಇಂಗ್ಲೆಂಡ್ ಅಭ್ಯಾಸ ಪಂದ್ಯ ಇಂದು ಆಯೋಜಿಸಲಾಗಿದೆ.

ದ್ವಿತೀಯ ಪಂದ್ಯ

ಭಾರತ ತನ್ನ ಎರಡನೇ ಅಭ್ಯಾಸ ಪಂದ್ಯವನ್ನು ನೆದರ್ಲೆಂಡ್ಸ್ ವಿರುದ್ಧ ಅ. 3ರಂದು ತಿರುವನಂತಪುರಂನ ಗ್ರೀನ್ ಫೀಲ್ಡ್ ಸ್ಟೇಡಿಯಂನಲ್ಲಿ ಆಡಲಿದೆ.

IND vs ENG: ಬರ್ಸಾಪರಾ ಪಿಚ್ ಹೇಗಿದೆ?, ಯಾರಿಗೆ ಸಹಕಾರಿ?