29-05-2024

ಟಿ20 ವಿಶ್ವಕಪ್‌ ಆಡದ 10 ದಿಗ್ಗಜ ಕ್ರಿಕೆಟಿಗರಿವರು; ಪಟ್ಟಿಯಲ್ಲಿ ಕ್ರಿಕೆಟ್ ದೇವರು

Author: ಪೃಥ್ವಿ ಶಂಕರ

ಸಚಿನ್ ತೆಂಡೂಲ್ಕರ್ (ಭಾರತ): ಸಚಿನ್ ತೆಂಡೂಲ್ಕರ್ 2013 ರವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ್ದರು. ಐಪಿಎಲ್‌ನಲ್ಲೂ ಅವರ ದಾಖಲೆ ಅದ್ಭುತವಾಗಿದೆ. ಆದರೆ ಅವರು ಟಿ20 ವಿಶ್ವಕಪ್‌ನಲ್ಲಿ ಆಡಿಲ್ಲ.

ಆಂಡ್ರ್ಯೂ ಸ್ಟ್ರಾಸ್ (ಇಂಗ್ಲೆಂಡ್): ಇಂಗ್ಲೆಂಡ್ ತಂಡದ ಮಾಜಿ ನಾಯಕ ಆಂಡ್ರ್ಯೂ ಸ್ಟ್ರಾಸ್ ಕೂಡ ಟಿ20 ವಿಶ್ವಕಪ್‌ನಲ್ಲಿ ಆಡಲು ಸಾಧ್ಯವಾಗಲಿಲ್ಲ.

ಮೊಹಮ್ಮದ್ ಯೂಸುಫ್ (ಪಾಕಿಸ್ತಾನ): ಪಾಕಿಸ್ತಾನದ ಲೆಜೆಂಡರಿ ಬ್ಯಾಟರ್ ಮೊಹಮ್ಮದ್ ಯೂಸುಫ್ ಕೂಡ ಟಿ20 ವಿಶ್ವಕಪ್ ಆಡಲಿಲ್ಲ.

ಡೀನ್ ಎಲ್ಗರ್ (ದಕ್ಷಿಣ ಆಫ್ರಿಕಾ); ದಕ್ಷಿಣ ಆಫ್ರಿಕಾ ಟೆಸ್ಟ್ ತಂಡದ ಮಾಜಿ ನಾಯಕ ಡೀನ್ ಎಲ್ಗರ್ ಕೂಡ ಟಿ20 ಆಡುವ ಅವಕಾಶ ಪಡೆದಿರಲಿಲ್ಲ.

ಶೋಯೆಬ್ ಅಖ್ತರ್ (ಪಾಕಿಸ್ತಾನ): ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ವೇಗದ ಬೌಲರ್ ಎಂದು ಪರಿಗಣಿಸಲ್ಪಟ್ಟ ಶೋಯೆಬ್ ಅಖ್ತರ್ ಅವರು ಎಂದಿಗೂ ಕಡಿಮೆ ಸ್ವರೂಪದ ವಿಶ್ವಕಪ್ ಆಡಲು ಸಾಧ್ಯವಾಗಲಿಲ್ಲ.

ಇಯಾನ್ ಬೆಲ್ (ಇಂಗ್ಲೆಂಡ್): ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಇಯಾನ್ 13000 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ರನ್ ಬಾರಿಸಿದ್ದಾರೆ. ಅದಾಗ್ಯೂ ಅವರಿಗೆ ಟಿ20 ವಿಶ್ವಕಪ್ ತಂಡದಲ್ಲಿ ಅವಕಾಶ ಸಿಗಲಿಲ್ಲ.

ದಿಮುತ್ ಕರುಣಾಪಟ್ನೆ (ಶ್ರೀಲಂಕಾ): ಶ್ರೀಲಂಕಾ ತಂಡದ ಮಾಜಿ ನಾಯಕ ದಿಮುತ್ ಕರುಣಾಪಟ್ನೆ ಕೂಡ ಟಿ20 ವಿಶ್ವಕಪ್ ಆಡಲಾಗಲಿಲ್ಲ.

ಅಜರ್ ಅಲಿ (ಪಾಕಿಸ್ತಾನ): ಟಿ20 ವಿಶ್ವಕಪ್ ಆಡದ ಆಟಗಾರರ ಪೈಕಿ ಪಾಕಿಸ್ತಾನದ ಅಜರ್ ಅಲಿ ಹೆಸರೂ ಇದೆ.

ಅಲೆಸ್ಟರ್ ಕುಕ್ (ಇಂಗ್ಲೆಂಡ್): ಟಿ20 ಕ್ರಿಕೆಟ್‌ನಲ್ಲಿ ಶತಕ ಸಿಡಿಸಿರುವ ಕುಕ್‌ಗೆ ವಿಶ್ವಕಪ್‌ನಲ್ಲಿ ಆಡಲು ಸಾಧ್ಯವಾಗಲೇ ಇಲ್ಲ.

ನ್ಯೂಜಿಲೆಂಡ್‌ನ ವೇಗಿ ನೀಲ್ ವಾಂಗ್ನರ್‌ಗೆ ಟಿ20 ಮಾತ್ರವಲ್ಲ ಏಕದಿನದಲ್ಲಿ ಆಡಲೂ ಅವಕಾಶ ಸಿಗಲಿಲ್ಲ.

NEXT: IPL: ಒಂದು ಸೀಸನ್‌ನಲ್ಲಿ ಅಧಿಕ ಸಿಕ್ಸರ್‌ ಸಿಡಿಸಿದ ಬ್ಯಾಟರ್ಗಳಿವರು