29-11-2023

ಟಿ20ಯಲ್ಲಿ ಎಷ್ಟು ಭಾರತೀಯ ಬ್ಯಾಟ್ಸ್‌ಮನ್‌ಗಳು ಶತಕ ಸಿಡಿಸಿದ್ದಾರೆ ಗೊತ್ತಾ?

Author: ಪೃಥ್ವಿ ಶಂಕರ

2010 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸುರೇಶ್ ರೈನಾ ಟಿ20ಯಲ್ಲಿ ಭಾರತದ ಪರ ಮೊದಲ ಶತಕ ದಾಖಲಿಸಿದರು.

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಭಾರತ ಪರ ಟಿ20ಯಲ್ಲಿ ಇದುವರೆಗೆ ಅತ್ಯಧಿಕ 4 ಶತಕ ಸಿಡಿಸಿದ್ದಾರೆ.

ಟಿ20ಯಲ್ಲಿ ಕೆಎಲ್ ರಾಹುಲ್ ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ವಿರುದ್ಧ ತಲಾ ಒಂದೊಂದು  ಶತಕ ಸಿಡಿಸಿದ್ದಾರೆ.

ದೀಪಕ್ ಹೂಡಾ 2022 ರಲ್ಲಿ ಐರ್ಲೆಂಡ್ ವಿರುದ್ಧ ಟಿ20 ಶತಕ ಸಿಡಿಸಿದ್ದರು.

ಸೂರ್ಯಕುಮಾರ್ ಯಾದವ್ ಇಂಗ್ಲೆಂಡ್, ನ್ಯೂಜಿಲೆಂಡ್, ಶ್ರೀಲಂಕಾ ವಿರುದ್ಧ ಟಿ20 ಶತಕ ಸಿಡಿಸಿದ್ದಾರೆ.

ವಿರಾಟ್ ಕೊಹ್ಲಿ ಅಫ್ಘಾನಿಸ್ತಾನದ ವಿರುದ್ಧ ಟಿ20ಯಲ್ಲಿ 1 ಶತಕ ಸಿಡಿಸಿದ್ದಾರೆ.

ಶುಭ್​ಮನ್ ಗಿಲ್ ನ್ಯೂಜಿಲೆಂಡ್ ವಿರುದ್ಧ ಟಿ20 ಶತಕ ಸಿಡಿಸಿದ್ದಾರೆ.

ಯಶಸ್ವಿ ಜೈಸ್ಬಾಲ್ ನೇಪಾಳದ ವಿರುದ್ಧ 49 ಎಸೆತಗಳಲ್ಲಿ ಶತಕದ ಇನ್ನಿಂಗ್ಸ್ ಆಡಿದ್ದರು.

ಇದೀಗ ಆಸ್ಟ್ರೇಲಿಯಾದ ವಿರುದ್ಧ ಆರಂಭಿಕ ರುತುರಾಜ್ ಗಾಯಕ್ವಾಡ್ ಚೊಚ್ಚಲ ಟಿ20 ಶತಕ ಸಿಡಿಸಿದ್ದಾರೆ.