24-05-2024

IPL: ಫ್ರೀ ಹಿಟ್‌ಗಳಲ್ಲಿ ಹೆಚ್ಚು ರನ್ ಬಾರಿಸಿದ ಬ್ಯಾಟರ್ ಯಾರು ಗೊತ್ತಾ?

Author: ಪೃಥ್ವಿ ಶಂಕರ

ಐಪಿಎಲ್ ಇತಿಹಾಸದಲ್ಲಿ ಫ್ರೀ ಹಿಟ್‌ಗಳಲ್ಲಿ ಅತಿ ಹೆಚ್ಚು ರನ್ ಬಾರಿಸಿದ ದಾಖಲೆ ಕನ್ನಡಿಗ ಕೆಎಲ್ ರಾಹುಲ್ ಹೆಸರಿನಲ್ಲಿದೆ. ರಾಹುಲ್ ಇಲ್ಲಿಯವರೆಗೆ 46 ರನ್ ಸಿಡಿಸಿದ್ದಾರೆ.

ಈ ಪಟ್ಟಿಯಲ್ಲಿ ಶಿಖರ್ ಧವನ್ ಎರಡನೇ ಸ್ಥಾನದಲ್ಲಿದ್ದು, ಅವರು ಫ್ರೀ ಹಿಟ್‌ ಎಸೆತಗಳಲ್ಲಿ 39 ರನ್ ಬಾರಿಸಿದ್ದಾರೆ.

ಬ್ರೆಂಡನ್ ಮೆಕಲಮ್ ಹೆಸರು ಮೂರನೇ ಸ್ಥಾನದಲ್ಲಿದ್ದು, ಅವರು ಫ್ರೀ ಹಿಟ್‌ಗಳಲ್ಲಿ 38 ರನ್ ಗಳಿಸಿದ್ದಾರೆ

ಕೆಕೆಆರ್ ಸ್ಟಾರ್ ಆಲ್​ರೌಂಡರ್ ಆಂಡ್ರೆ ರಸೆಲ್ ಇದುವರೆಗೆ ಫ್ರೀ ಹಿಟ್‌ಗಳಲ್ಲಿ 36 ರನ್ ಬಾರಿಸಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ಓಪನರ್ ಡೇವಿಡ್ ವಾರ್ನರ್ ಇದುವರೆಗೆ ಐಪಿಎಲ್‌ ಫ್ರೀ ಹಿಟ್‌ಗಳಲ್ಲಿ 34 ರನ್ ಕಲೆಹಾಕಿದ್ದಾರೆ.

ಆರ್​ಸಿಬಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ ಇದುವರೆಗೆ ಫ್ರೀ ಹಿಟ್‌ ಎಸೆತಗಳಲ್ಲಿ 33 ರನ್ ಬಾರಿಸಿದ್ದಾರೆ.

ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಇದುವರೆಗೆ ಫ್ರೀ ಹಿಟ್‌ಗಳಲ್ಲಿ 32 ರನ್ ಗಳಿಸಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ನಾಯಕ ಎಂಎಸ್ ಧೋನಿ ಫ್ರೀ ಹಿಟ್‌ನಲ್ಲಿ 31 ರನ್ ಸಿಡಿಸಿದ್ದಾರೆ.

ಅಂಬಟಿ ರಾಯುಡು ಹಾಗೂ ಮಾರ್ಕಸ್ ಸ್ಟೊಯಿನಿಸ್ ಫ್ರೀ ಹಿಟ್‌ ಎಸೆತಗಳಲ್ಲಿ ತಲಾ 31 ರನ್ ಬಾರಿಸಿದ್ದಾರೆ.

NEXT: ಐಪಿಎಲ್​ನಿಂದ ದಿನೇಶ್ ಕಾರ್ತಿಕ್ ಸಂಪಾದಿಸಿದ್ದು ಎಷ್ಟು ಕೋಟಿ ಗೊತ್ತಾ?