03-05-2024

IPL: ಮೊದಲ ಓವರ್​ನಲ್ಲೇ ವಿಕೆಟ್ ಉರುಳಿಸುವುದರಲ್ಲಿ ಇವರು ನಿಸ್ಸೀಮರು..!

Author: ಪೃಥ್ವಿ ಶಂಕರ

ಐಪಿಎಲ್‌ನಲ್ಲಿ ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲಿ ವಿಕೆಟ್‌ಗಳನ್ನು ಪಡೆಯುವುದು ಬೌಲರ್‌ಗಳಿಗೆ ಅಷ್ಟು ಸುಲಭದ ಕೆಲಸವಲ್ಲ.

ಆದರೆ, ಕೆಲವು ಬೌಲರ್‌ಗಳು ಮಾತ್ರ ಇಂತಹ ಅಪರೂಪದ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ.

ಅಂತಹವರುಗಳಲ್ಲಿ ಪ್ರಸ್ತುತ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿರುವ ಟ್ರೆಂಟ್ ಬೌಲ್ಟ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಪರ ಆಡುತ್ತಿರುವ ಭುವನೇಶ್ವರ್ ಕುಮಾರ್ ನಿಸ್ಸೀಮರು.

ಪ್ರಸ್ತುತ ಈ ಇಬ್ಬರು ವೇಗಿಗಳು ಮೊದಲ ಓವರ್‌ನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಇದುವರೆಗೆ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿರುವ ಟ್ರೆಂಟ್ ಬೌಲ್ಟ್ ಗರಿಷ್ಠ 27 ವಿಕೆಟ್ ಪಡೆದು ಮೊದಲ ಸ್ಥಾನದಲ್ಲಿದ್ದರು.

ಆದರೆ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಮೊದಲ ಓವರ್‌ನಲ್ಲಿ ಎರಡು ವಿಕೆಟ್ ಪಡೆಯುವ ಮೂಲಕ ಭುವನೇಶ್ವರ್, ಬೌಲ್ಟ್ ದಾಖಲೆಯನ್ನು ಸರಿಗಟ್ಟಿದರು.

ಇದೀಗ ಇವರಿಬ್ಬರೂ ಐಪಿಎಲ್‌ನಲ್ಲಿ ಇನಿಂಗ್ಸ್‌ನ ಮೊದಲ ಓವರ್‌ನಲ್ಲಿ ಗರಿಷ್ಠ ತಲಾ 27 ವಿಕೆಟ್ ಪಡೆದಿದ್ದಾರೆ.

ಅಚ್ಚರಿಯೆಂದರೆ ಈ ವಿಚಾರದಲ್ಲಿ ಇವರಿಬ್ಬರ ಹತ್ತಿರ ಯಾವ ಬೌಲರ್​ ಇಲ್ಲ. ಮೊದಲ ಓವರ್​ನಲ್ಲಿ ಗರಿಷ್ಠ 15 ವಿಕೆಟ್‌ ಪಡೆದಿರುವ ಪ್ರವೀಣ್ ಕುಮಾರ್ ಮೂರನೇ ಸ್ಥಾನದಲ್ಲಿದ್ದಾರೆ.

ತಲಾ 13 ವಿಕೆಟ್‌ಗಳನ್ನು ಉರುಳಿಸುವ ಮೂಲಕ ಸಂದೀಪ್ ಶರ್ಮಾ ಮತ್ತು ದೀಪಕ್ ಚಹಾರ್ ಜಂಟಿಯಾಗಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

NEXT: ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ತಂಡ ಯಾವುದು ಗೊತ್ತಾ?