ಟಿ20 ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ಪಡೆದ ಬೌಲರ್ಗಳು ಯಾರ್ಯಾರು ಗೊತ್ತಾ?
Author: ಪೃಥ್ವಿ ಶಂಕರ
ಶುಕ್ರವಾರ ನಡೆದ ಟಿ20 ವಿಶ್ವಕಪ್ 2024 ರ ಪಂದ್ಯದಲ್ಲಿ ಆಸ್ಟ್ರೇಲಿಯಾದ ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್ ಬಾಂಗ್ಲಾದೇಶದ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಪಡೆದರು.
ಪ್ಯಾಟ್ ಕಮ್ಮಿನ್ಸ್ ಪಂದ್ಯದ 18ನೇ ಓವರ್‌ನ ಕೊನೆಯ ಎರಡು ಎಸೆತಗಳಲ್ಲಿ ಮಹಮ್ಮದುಲ್ಲಾ ಮತ್ತು ಮೆಹದಿ ಹಸನ್ ಅವರನ್ನು ಔಟ್ ಮಾಡಿದ್ದರು.
ನಂತರ 20ನೇ ಓವರ್‌ನಲ್ಲಿ ತೌಹಿದ್ ಹೃದಯ್ ಅವರನ್ನು ಔಟ್ ಮಾಡುವ ಮೂಲಕ ಹ್ಯಾಟ್ರಿಕ್ ಪೂರ್ಣಗೊಳಿಸಿದರು.
ಕಮ್ಮಿನ್ಸ್ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಆಸ್ಟ್ರೇಲಿಯಾದ ಎರಡನೇ ಆಟಗಾರ ಮತ್ತು ಒಟ್ಟಾರೆ ಏಳನೇ ಆಟಗಾರ ಎನಿಸಿಕೊಂಡರು. ಕಮ್ಮಿನ್ಸ್ಗೂ ಮೊದಲು, ಬ್ರೆಟ್ ಲೀ ಈ ಸಾಧನೆ ಮಾಡಿದ್ದರು.
ಇವರಲ್ಲದೆ ಕರ್ಟಿಸ್ ಕ್ಯಾಂಫರ್ (ಐರ್ಲೆಂಡ್), ವನಿಂದು ಹಸರಂಗಾ (ಶ್ರೀಲಂಕಾ), ಕಗಿಸೊ ರಬಾಡ (ದಕ್ಷಿಣ ಆಫ್ರಿಕಾ), ಕಾರ್ತಿಕ್ ಮೇಯಪ್ಪನ್ (ಯುಎಇ) ಮತ್ತು ಜೋಶುವಾ ಲಿಟಲ್ (ಐರ್ಲೆಂಡ್) ಕೂಡ ಈ ಸಾಧನೆ ಮಾಡಿದ್ದಾರೆ.
ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಆಸ್ಟ್ರೇಲಿಯಾದ ನಾಲ್ಕನೇ ಆಟಗಾರ ಎಂಬ ಹೆಗ್ಗಳಿಕೆಗೆ ಕಮ್ಮಿನ್ಸ್ ಪಾತ್ರರಾದರು. ಇವರಿಗಿಂತ ಮೊದಲು ಬ್ರೆಟ್ ಲೀ (2007), ಆಷ್ಟನ್ ಅಗರ್ (2020) ಮತ್ತು ನಾಥನ್ ಎಲ್ಲಿಸ್ (2021) ಈ ಸಾಧನೆ ಮಾಡಿದ್ದಾರೆ.
ಉಳಿದಂತೆ ಯಾವ ಬೌಲರ್ ಯಾವ ಆವೃತ್ತಿಯಲ್ಲಿ ಯಾವ ತಂಡದ ವಿರುದ್ಧ ಹ್ಯಾಟ್ರಿಕ್ ಪಡೆದಿದ್ದಾರೆ ಎಂಬುದನ್ನು ನೋಡುವುದಾದರೆ..
2007ರಲ್ಲಿ ನಡೆದಿದ್ದ ಚೊಚ್ಚಲ ಟಿ20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ಬ್ರೆಟ್ ಲೀ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು.
2021ರ ಟಿ20 ವಿಶ್ವಕಪ್‌ನಲ್ಲಿ ನೆದರ್ಲೆಂಡ್ ವಿರುದ್ಧ ಐರ್ಲೆಂಡ್‌ನ ಕರ್ಟಿಸ್ ಕ್ಯಾಂಪರ್ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು.
2021ರಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಶ್ರೀಲಂಕಾದ ವನಿಂದು ಹಸರಂಗ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು.
2021ರ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ ಈ ಸಾಧನೆ ಮಾಡಿದ್ದರು.
2021ರಲ್ಲಿ ಇಂಗ್ಲೆಂಡ್ ವಿರುದ್ಧ ಯುಎಇಯ ಕಾರ್ತಿಕ್ ಮೆಯ್ಯಪ್ಪನ್ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು.
2022 ರಲ್ಲಿ ಐರ್ಲೆಂಡ್‌ನ ಜೋಶ್ ಲಿಟಲ್ ನ್ಯೂಜಿಲೆಂಡ್ ವಿರುದ್ಧ ಈ ಸಾಧನೆ ಮಾಡಿದ್ದರು.