IPL: ಒಂದು ಐಪಿಎಲ್ ಆವೃತ್ತಿಯಲ್ಲಿ ಅಧಿಕ ಬಾರಿ ಟಾಸ್ ಸೋತ ನಾಯಕರಿವರು

14-05-2024

IPL: ಒಂದು ಐಪಿಎಲ್ ಆವೃತ್ತಿಯಲ್ಲಿ ಅಧಿಕ ಬಾರಿ ಟಾಸ್ ಸೋತ ನಾಯಕರಿವರು

Author: ಪೃಥ್ವಿ ಶಂಕರ

TV9 Kannada Logo For Webstory First Slide
ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ರಸ್ತುತ ಪ್ಲೇಆಫ್‌ನ ರೇಸ್‌ನಲ್ಲಿರಬಹುದು. ಆದರೆ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಟಾಸ್ ವಿಷಯದಲ್ಲಿ ತುಂಬಾ ದುರದೃಷ್ಟವಂತರಾಗಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ರಸ್ತುತ ಪ್ಲೇಆಫ್‌ನ ರೇಸ್‌ನಲ್ಲಿರಬಹುದು. ಆದರೆ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಟಾಸ್ ವಿಷಯದಲ್ಲಿ ತುಂಬಾ ದುರದೃಷ್ಟವಂತರಾಗಿದ್ದಾರೆ.

ಈ ಸೀಸನ್​ನಲ್ಲಿ ರುತುರಾಜ್ ಆಡಿರುವ 13 ಪಂದ್ಯಗಳಲ್ಲಿ 11 ರಲ್ಲಿ ಟಾಸ್ ಸೋತಿದ್ದಾರೆ. ರುತುರಾಜ್ ಎರಡು ಬಾರಿ ಮಾತ್ರ ಟಾಸ್ ಗೆದ್ದಿದ್ದಾರೆ.

ಈ ಸೀಸನ್​ನಲ್ಲಿ ರುತುರಾಜ್ ಆಡಿರುವ 13 ಪಂದ್ಯಗಳಲ್ಲಿ 11 ರಲ್ಲಿ ಟಾಸ್ ಸೋತಿದ್ದಾರೆ. ರುತುರಾಜ್ ಎರಡು ಬಾರಿ ಮಾತ್ರ ಟಾಸ್ ಗೆದ್ದಿದ್ದಾರೆ.

ಇದರೊಂದಿಗೆ ಐಪಿಎಲ್‌ನ ಒಂದು ಸೀಸನ್​ನಲ್ಲಿ ಅತಿ ಹೆಚ್ಚು ಬಾರಿ ಟಾಸ್‌ ಸೋತ ನಾಯಕರ ಪಟ್ಟಿಯಲ್ಲಿ ಜಂಟಿಯಾಗಿ ಮೂರನೇ ಸ್ಥಾನದಲ್ಲಿದ್ದಾರೆ.

ಇದರೊಂದಿಗೆ ಐಪಿಎಲ್‌ನ ಒಂದು ಸೀಸನ್​ನಲ್ಲಿ ಅತಿ ಹೆಚ್ಚು ಬಾರಿ ಟಾಸ್‌ ಸೋತ ನಾಯಕರ ಪಟ್ಟಿಯಲ್ಲಿ ಜಂಟಿಯಾಗಿ ಮೂರನೇ ಸ್ಥಾನದಲ್ಲಿದ್ದಾರೆ.

ಈ ಪಟ್ಟಿಯಲ್ಲಿ ಸಂಜು ಸ್ಯಾಮ್ಸನ್ ಅಗ್ರಸ್ಥಾನದಲ್ಲಿದ್ದು, 2022ರಲ್ಲಿ ಆಡಿದ 16 ಪಂದ್ಯಗಳಲ್ಲಿ ಸಂಜು 13 ಪಂದ್ಯಗಳಲ್ಲಿ ಟಾಸ್ ಸೋತಿದ್ದರು.

ಎಂಎಸ್ ಧೋನಿ ಎರಡನೇ ಸ್ಥಾನದದ್ದು, 2012ರ ಆವೃತ್ತಿಯಲ್ಲಿ ಧೋನಿ ಆಡಿದ 18 ಪಂದ್ಯಗಳಲ್ಲಿ 12 ಬಾರಿ ಟಾಸ್ ಸೋತಿದ್ದರು.

ಮೂರನೇ ಸ್ಥಾನದಲ್ಲಿ ಜಂಟಿಯಾಗಿ ಮೂವರು ನಾಯಕರಿದ್ದಾರೆ. ಇವರಲ್ಲಿ ಎಂಎಸ್ ಧೋನಿ, ವಿರಾಟ್ ಕೊಹ್ಲಿ ಮತ್ತು ರುತುರಾಜ್ ಸೇರಿದ್ದಾರೆ.

ಐಪಿಎಲ್ 2008ರಲ್ಲಿ ಧೋನಿ 16 ಪಂದ್ಯಗಳಲ್ಲಿ 11 ಬಾರಿ ಟಾಸ್ ಸೋತಿದ್ದರು. ಅದೇ ಸಮಯದಲ್ಲಿ ವಿರಾಟ್ 2013 ರಲ್ಲಿ 16 ಪಂದ್ಯಗಳಲ್ಲಿ 11 ಬಾರಿ ಟಾಸ್ ಸೋತಿದ್ದರು. ಇದೀಗ ರುತುರಾಜ್ 11 ಬಾರಿ ಟಾಸ್ ಸೋತಿದ್ದಾರೆ.

ಇದಲ್ಲದೆ ಕೇವಲ ಲೀಗ್ ಹಂತದಲ್ಲಿ ಅಧಿಕ ಬಾರಿ ಟಾಸ್ ಸೋತ ನಾಯಕರ ಪಟ್ಟಿಯಲ್ಲಿ ಇದೀಗ ರುತುರಾಜ್ ಜಂಟಿಯಾಗಿ ಎರಡನೇ ಸ್ಥಾನದಲ್ಲಿದ್ದಾರೆ.