22-01-2024

ಇಂಗ್ಲೆಂಡ್ ವಿರುದ್ಧ ಟೆಸ್ಟ್​ನಲ್ಲಿ ಅಧಿಕ ರನ್ ಸಿಡಿಸಿದ ಭಾರತೀಯ ಬ್ಯಾಟರ್​ಗಳಿವರು

Author: ಪೃಥ್ವಿ ಶಂಕರ

ಇಂಗ್ಲೆಂಡ್ ವಿರುದ್ಧ ಟೆಸ್ಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟರ್​ಗಳ ಪಟ್ಟಿಯಲ್ಲಿ 32 ಟೆಸ್ಟ್‌ಗಳಲ್ಲಿ 2535 ರನ್ ಸಿಡಿಸಿರುವ ಸಚಿನ್ ತೆಂಡೂಲ್ಕರ್ ಮೊದಲ ಸ್ಥಾನದಲ್ಲಿದ್ದಾರೆ.

ಎರಡನೇ ಸ್ಥಾನದಲ್ಲಿರುವ ಸುನಿಲ್ ಗವಾಸ್ಕರ್ ಇಂಗ್ಲೆಂಡ್ ವಿರುದ್ಧ 38 ಟೆಸ್ಟ್ ಪಂದ್ಯಗಳನ್ನಾಡಿದ್ದು ಒಟ್ಟು 2483 ರನ್ ಗಳಿಸಿದ್ದಾರೆ.

28 ಟೆಸ್ಟ್ ಪಂದ್ಯಗಳಲ್ಲಿ 1991 ರನ್ ಗಳಿಸಿರುವ ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

ರಾಹುಲ್ ದ್ರಾವಿಡ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಇಂಗ್ಲೆಂಡ್ ವಿರುದ್ಧ 21 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 1950 ರನ್ ಗಳಿಸಿದ್ದಾರೆ.

ಗುಂಡಪ್ಪ ವಿಶ್ವನಾಥ್ ಇಂಗ್ಲೆಂಡ್ ವಿರುದ್ಧ 30 ಟೆಸ್ಟ್ ಪಂದ್ಯಗಳನ್ನು ಆಡಿದ್ದು ಒಟ್ಟು 1880 ರನ್ ಕಲೆ ಹಾಕಿದ್ದಾರೆ.

ಚೇತೇಶ್ವರ ಪೂಜಾರ ಇಂಗ್ಲೆಂಡ್ ವಿರುದ್ಧ 27 ಟೆಸ್ಟ್ ಪಂದ್ಯಗಳನ್ನು ಆಡಿದ್ದು 1778 ರನ್ ಬಾರಿಸಿದ್ದಾರೆ.

ದಿಲೀಪ್ ವೆಂಗ್‌ಸರ್ಕರ್ ಇಂಗ್ಲೆಂಡ್ ವಿರುದ್ಧ 26 ಟೆಸ್ಟ್ ಪಂದ್ಯಗಳಲ್ಲಿ 1589 ರನ್ ಸಿಡಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧ 27 ಟೆಸ್ಟ್ ಆಡಿರುವ ಕಪಿಲ್ ದೇವ್ ಒಟ್ಟು 1355 ರನ್ ಗಳಿಸಿದ್ದಾರೆ.

NEXT: ಟೆಸ್ಟ್ನಲ್ಲಿ ಇಂಗ್ಲೆಂಡ್ ವಿರುದ್ಧ ದ್ವಿಶತಕ ಸಿಡಿಸಿದ ಭಾರತದ ಬ್ಯಾಟರ್ಸ್ ಯಾರ್ಯಾರು ಗೊತ್ತಾ?