24-01-2024

ಬಿಸಿಸಿಐ ವರ್ಷದ ಕ್ರಿಕೆಟಿಗ ಪ್ರಶಸ್ತಿಯನ್ನು ಅಧಿಕ ಬಾರಿ ಗೆದ್ದವರಿವರು

Author: ಪೃಥ್ವಿ ಶಂಕರ

ಬಿಸಿಸಿಐ ನಿಂದ 5 ಬಾರಿ ವರ್ಷದ ಕ್ರಿಕೆಟಗನಾಗಿ ಆಯ್ಕೆಯಾಗಿರುವ ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಎರಡನೇ ಸ್ಥಾನದಲ್ಲಿರುವ ಸಚಿನ್ ತೆಂಡೂಲ್ಕರ್ ತಮ್ಮ ವೃತ್ತಿಜೀವನದಲ್ಲಿ ಎರಡು ಬಾರಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಕೂಡ ಈ ಪ್ರಶಸ್ತಿಯನ್ನು ಎರಡು ಬಾರಿ ಗೆದ್ದಿದ್ದಾರೆ.

ತಂಡದ ಅನುಭವಿ ಸ್ಪಿನ್ ಆಲ್​ರೌಂಡರ್ ಆರ್ ಅಶ್ವಿನ್​ಗೂ ಈ ಪ್ರಶಸ್ತಿ ಎರಡು ಬಾರಿ ಲಭಿಸಿದೆ

ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಒಮ್ಮೆ ಮಾತ್ರ ಬಿಸಿಸಿಐ ವರ್ಷದ ಕ್ರಿಕೆಟಿಗರಾಗಿ ಆಯ್ಕೆಯಾಗಿದ್ದಾರೆ.

ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್​ಗೂ ಒಮ್ಮೆ ಈ ಪ್ರಶಸ್ತಿ ಲಭಿಸಿದೆ.

ತಂಡದ ಹಾಲಿ ಕೋಚ್ ರೋಹುಲ್ ದ್ರಾವಿಡ್ ಕೂಡ ಒಮ್ಮೆ ಈ ಪ್ರಶಸ್ತಿಯನ್ನು ಗೆದ್ದಿದ್ದರು.

ಗೌತಮ್ ಗಂಭೀರ್ ತಮ್ಮ ವೃತ್ತಿಜೀವನದಲ್ಲಿ ಒಮ್ಮೆ ಮಾತ್ರ ಬಿಸಿಸಿಐ ವರ್ಷದ ಕ್ರಿಕೆಟಿಗನಾಗಿ ಆಯ್ಕೆಯಾಗಿದ್ದಾರೆ.

ಟೀಂ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ಕೂಡ ಒಂದು ಬಾರಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಇದೀಗ ಈ ಬಾರಿ ಶುಭ್​ಮನ್ ಗಿಲ್​ಗೆ ಬಿಸಿಸಿಐ ವರ್ಷದ ಕ್ರಿಕೆಟಿಗ ಪ್ರಶಸ್ತಿ ಲಭಿಸಿದೆ.

NEXT: ಇಂಗ್ಲೆಂಡ್ ವಿರುದ್ಧ ಟೆಸ್ಟ್ನಲ್ಲಿ ಅಧಿಕ ರನ್ ಸಿಡಿಸಿದ ಭಾರತೀಯ ಬ್ಯಾಟರ್ಗಳಿವರು