27-06-2024

T20 World Cup: ಅತಿ ಹೆಚ್ಚು ಬಾರಿ ಫೈನಲ್ ಪಂದ್ಯದಲ್ಲಿ ಸೋತ ತಂಡಗಳಿವು

Author: ಪೃಥ್ವಿ ಶಂಕರ

9ನೇ ಆವೃತ್ತಿಯ ಟಿ20 ವಿಶ್ವಕಪ್​ನ ಫೈನಲ್ ಪಂದ್ಯ ಜೂನ್ 29 ರಂದು ನಡೆಯಲ್ಲಿದೆ. ಈ ಸುತ್ತಿಗೆ ಮೊದಲ ತಂಡವಾಗಿ ದಕ್ಷಿಣ ಆಫ್ರಿಕಾ ಎಂಟ್ರಿಕೊಟ್ಟಿದೆ.

ಇಂದು ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಗೆಲ್ಲುವ ತಂಡವೂ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.

ಆದರೆ ಅದಕ್ಕೂ ಮುನ್ನ ಇದುವರೆಗೆ ನಡೆದಿರುವ8 ಆವೃತ್ತಿಗಳ ಟಿ20 ವಿಶ್ವಕಪ್ ಫೈನಲ್ ಪಂದ್ಯಗಳಲ್ಲಿ ಅಧಿಕ ಬಾರಿ ಸೋತಿರುವ ತಂಡಗಳ ಪಟ್ಟಿಯನ್ನು ನೋಡೋಣ.

ಟಿ20 ವಿಶ್ವಕಪ್ ಇತಿಹಾಸದಲ್ಲಿ ಪಾಕಿಸ್ತಾನ ತಂಡ ಎರಡು ಬಾರಿ (2007, 2022) ಫೈನಲ್ ಪಂದ್ಯದಲ್ಲಿ ಸೋತಿದೆ.

ಟಿ20 ವಿಶ್ವಕಪ್ (2009, 2012) ಇತಿಹಾಸದಲ್ಲಿ ಶ್ರೀಲಂಕಾ ತಂಡ ಎರಡು ಬಾರಿ ಫೈನಲ್‌ನಲ್ಲಿ ಸೋತಿದೆ.

ಟಿ20 ವಿಶ್ವಕಪ್ ಇತಿಹಾಸದಲ್ಲಿ ಆಸ್ಟ್ರೇಲಿಯ ತಂಡ ಒಮ್ಮೆ (2010) ಫೈನಲ್ ಪಂದ್ಯವನ್ನು ಸೋತಿದೆ.

ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತ ತಂಡ ಒಂದು ಬಾರಿ (2014) ಫೈನಲ್ ಪಂದ್ಯವನ್ನು ಸೋತಿದೆ.

ಟಿ20 ವಿಶ್ವಕಪ್ ಇತಿಹಾಸದಲ್ಲಿ ಇಂಗ್ಲೆಂಡ್ ತಂಡ ಒಂದು ಬಾರಿ (2016) ಫೈನಲ್ ಪಂದ್ಯವನ್ನು ಸೋತಿದೆ.

ಟಿ20 ವಿಶ್ವಕಪ್ ಇತಿಹಾಸದಲ್ಲಿ ನ್ಯೂಜಿಲೆಂಡ್ ತಂಡ ಒಮ್ಮೆ (2021) ಫೈನಲ್ ಪಂದ್ಯವನ್ನು ಸೋತಿದೆ.