17-03-2024

ಐಪಿಎಲ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ ಹೊಡೆದ ತಂಡ ಯಾವುದು ಗೊತ್ತಾ?

Author: ಪೃಥ್ವಿ ಶಂಕರ

ಐಪಿಎಲ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ತಂಡಗಳ ಪೈಕಿ ಮುಂಬೈ ಇಂಡಿಯನ್ಸ್ ಮೊದಲ ಸ್ಥಾನದಲ್ಲಿದೆ. ರೋಹಿತ್ ಪಡೆ ಇದುವರೆಗೆ 1548 ಸಿಕ್ಸರ್‌ ಬಾರಿಸಿದೆ.

ಎರಡನೇ ಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದುವರೆಗೆ 1484 ಸಿಕ್ಸರ್‌ ಸಿಡಿಸಿದೆ.

ಮೂರನೇ ಸ್ಥಾನದಲ್ಲಿರುವ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ 1401 ಸಿಕ್ಸರ್‌ ಹೊಡೆದಿದೆ.

ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ಇದುವರೆಗೆ 1393 ಸಿಕ್ಸರ್‌ಗಳನ್ನು ಬಾರಿಸಿದೆ.

ಕೋಲ್ಕತ್ತಾ ನೈಟ್ ರೈಡರ್ಸ್ ಐಪಿಎಲ್‌ನಲ್ಲಿ ಇದುವರೆಗೆ 1351 ಸಿಕ್ಸರ್‌ಗಳನ್ನು ಬಾರಿಸಿದೆ.

\ಐಪಿಎಲ್‌ನಲ್ಲಿ ಒಮ್ಮೆಯೂ ಟ್ರೋಫಿ ಗೆಲ್ಲದ ಡೆಲ್ಲಿ ಕ್ಯಾಪಿಟಲ್ಸ್ 1214 ಸಿಕ್ಸರ್ ಸಿಡಿಸಿದೆ.

ರಾಜಸ್ಥಾನ್ ರಾಯಲ್ಸ್ ಐಪಿಎಲ್‌ನಲ್ಲಿ ಇದುವರೆಗೆ1123 ಸಿಕ್ಸರ್‌ ಹೊಡೆದಿದೆ.

ಈ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಸನ್‌ರೈಸರ್ಸ್ ಹೈದರಾಬಾದ್ 861 ಸಿಕ್ಸರ್‌ ಹೊಡೆದಿದೆ.

]NEXT: ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಡಾಟ್ ಬಾಲ್‌ ಬೌಲ್ ಮಾಡಿದ ಬೌಲರ್ಗಳಿವರು