04-03-2024

ಐಪಿಎಲ್​ನಲ್ಲಿ 200+ ಟಾರ್ಗೆಟ್ ನೀಡಿಯೂ ಹೆಚ್ಚು ಪಂದ್ಯ ಸೋತ ತಂಡ ಯಾವುದು ಗೊತ್ತಾ?

Author: ಪೃಥ್ವಿ ಶಂಕರ

ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 21 ಬಾರಿ 200+ ರನ್‌ಗಳನ್ನು ಟಾರ್ಗೆಟ್ ನೀಡಿದ್ದು, ಇದರಲ್ಲಿ 5 ಬಾರಿ ಸೋಲನ್ನು ಎದುರಿಸಿದೆ.

ಎರಡನೇ ಸ್ಥಾನದಲ್ಲಿರುವ ಸಿಎಸ್​ಕೆ ತಂಡ 22 ಬಾರಿ 200+ ರನ್ ಟಾರ್ಗೆಟ್ ನೀಡಿದೆ. ಈ ಅವಧಿಯಲ್ಲಿ 4 ಪಂದ್ಯಗಳಲ್ಲಿ ಸೋತಿದ್ದಾರೆ.

ಮೂರನೇ ಸ್ಥಾನದಲ್ಲಿರುವ ಪಂಜಾಬ್ ಕಿಂಗ್ಸ್ 12 ಬಾರಿ 200+ ರನ್ ಟಾರ್ಗೆಟ್ ನೀಡಿದೆ. ಇದರಲ್ಲಿ 3 ಪಂದ್ಯಗಳಲ್ಲಿ ಸೋಲನುಭವಿಸಿದೆ.

13 ಬಾರಿ 200+ ರನ್‌ಗಳ ಗುರಿ ನೀಡಿರುವ ರಾಜಸ್ಥಾನ್ ರಾಯಲ್ಸ್ ತಂಡ 2 ಬಾರಿ ಸೋಲನ್ನು ಎದುರಿಸಿದೆ.

ಸನ್‌ರೈಸರ್ಸ್ ಹೈದರಾಬಾದ್ ಮೊದಲು ಬ್ಯಾಟಿಂಗ್ ಮಾಡುವಾಗ 12 ಬಾರಿ 200+ ರನ್ ಕಲೆಹಾಕಿದೆ. ಈ ಅವಧಿಯಲ್ಲಿ 2 ಪಂದ್ಯಗಳಲ್ಲಿ ಸೋತಿದೆ.

ಕೋಲ್ಕತ್ತಾ ನೈಟ್ ರೈಡರ್ಸ್ 200+ ರನ್‌ಗಳ ಗುರಿಯನ್ನು 10 ಬಾರಿ ನೀಡಿದೆ. ಇದರಲ್ಲಿ 2 ಬಾರಿ ಸೋಲನ್ನು ಎದುರಿಸಿದೆ.

4 ಪಂದ್ಯಗಳಲ್ಲಿ 200+ ರನ್‌ಗಳ ಗುರಿ ನೀಡಿರುವ ಗುಜರಾತ್ ಟೈಟಾನ್ಸ್ 1 ಪಂದ್ಯದಲ್ಲಿ ಸೋತಿದೆ.