ಗಾಯಗೊಂಡವರ ಸೇನೆ: ಎಷ್ಟು ಪ್ಲೇಯರ್ಸ್ ಇಂಜುರಿ ಗೊತ್ತೇ?

21 January 2024

Author: Vinay Bhat

ಭಾರತ ತಂಡ ಐಸಿಸಿ ಟಿ20 ವಿಶ್ವಕಪ್ ತಯಾರಿಯಲ್ಲಿದೆ. ಇದಕ್ಕೂ ಮುನ್ನ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ.

ಭಾರತಕ್ಕೆ ಸಂಕಷ್ಟ

ಮಹತ್ವದ ದೊಡ್ಡ ಸರಣಿಗಳು ಮತ್ತು ಟೂರ್ನಿಗಳ ಹೊರತಾಗಿ ಟೀಮ್ ಇಂಡಿಯಾ ಇಂಜುರಿ ಸಮಸ್ಯೆಯನ್ನು ಎದುರಿಸುತ್ತಿದೆ.

ಇಂಜುರಿ

ಭಾರತೀಯ ತಂಡವು ಪ್ರಸ್ತುತ ಇಂಜುರಿಯಿಂದ ಬಳಲುತ್ತಿದೆ. ಅರ್ಧ ಡಜನ್ ಆಟಗಾರರು ಗಾಯಗಳಿಂದಾಗಿ ಹೊರಗಿದ್ದಾರೆ.

ಗಾಯದ ಸಮಸ್ಯೆ

ಸೂರ್ಯಕುಮಾರ್ ಯಾದವ್, ಇತ್ತೀಚೆಗಷ್ಟೇ ಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ ಸುಮಾರು ಒಂದು ತಿಂಗಳ ಕಾಲ ಕ್ರಿಕೆಟ್ ನಿಂದ ದೂರ ಉಳಿದಿದ್ದಾರೆ.

ಸೂರ್ಯಕುಮಾರ್

ಸ್ಟಾರ್ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಕೂಡ ಮೊಣಕಾಲಿನ ಸಮಸ್ಯೆಯಿಂದಾಗಿ ಆಟದಿಂದ ದೂರವಿದ್ದು, ಪ್ರಸ್ತುತ ಎನ್‌ಸಿಎಯಲ್ಲಿದ್ದಾರೆ.

ಶಾರ್ದೂಲ್ ಥಾಕೂರ್

ಮೊಹಮ್ಮದ್ ಶಮಿ ಕೂಡ ಗಾಯಕ್ಕೆ ತುತ್ತಾಗಿದ್ದು, ವಿಶ್ವಕಪ್ ಬಳಿಕ ಒಂದೇ ಒಂದು ಪಂದ್ಯವನ್ನು ಆಡಿಲ್ಲ. ಇವರು ಶೀಘ್ರದಲ್ಲೇ ಲಂಡನ್‌ಗೆ ತೆರಳಲಿದ್ದಾರೆ.

ಮೊಹಮ್ಮದ್ ಶಮಿ

ಆಗಸ್ಟ್‌ನಿಂದ ಪೃಥ್ವಿ ಶಾ ಕೂಡ ಕ್ರಿಕೆಟ್ ಆಡಿಲ್ಲ, ಅವರು ಮರಳಲು ಇನ್ನೂ ಎರಡು ತಿಂಗಳು ಬೇಕಾಗಬಹುದು. ಹಾಗೆಯೆ ರಿಷಭ್ ಪಂತ್ ಮರಳುವಿಕೆಗೆ ಭಾರತ ಕಾಯುತ್ತಿದೆ.

ರಿಷಭ್ ಪಂತ್

ಭಾರತದ ಮತ್ತೋರ್ವ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ಇಂಜುರಿಯಿಂದ ಕ್ರಿಕೆಟ್'ನಿಂದ ದೂರವಾಗಿ ಸಾಕಷ್ಟು ಸಮಯವಾಗಿದೆ.

ಹಾರ್ದಿಕ್ ಪಾಂಡ್ಯ