ಮೊಹಮ್ಮದ್ ಶಮಿಗೆ ಎರಡನೇ ಮದುವೆ?: ಫೋಟೋ ವೈರಲ್

20 January 2024

Author: Vinay Bhat

ಮೊಹಮ್ಮದ್ ಶಮಿ ಗಾಯದ ಸಮಸ್ಯೆಯಿಂದ ಕಳೆದ 2 ತಿಂಗಳಿಂದ ಕ್ರಿಕೆಟ್ ನಿಂದ ದೂರ ಉಳಿದಿದ್ದಾರೆ. ವಿಶ್ವಕಪ್ 2023 ಬಳಿಕ ಯಾವುದೇ ಕ್ರಿಕೆಟ್ ಪಂದ್ಯವನ್ನು ಆಡಿಲ್ಲ.

ಕ್ರಿಕೆಟ್‌ನಿಂದ ದೂರ

ಕ್ರಿಕೆಟ್‌ನಿಂದ ದೂರವಿದ್ದರೂ, ಶಮಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುತ್ತಾರೆ. ಇತ್ತೀಚೆಗೆ ಶಮಿ ತಮ್ಮ ಅಭ್ಯಾಸದ ವಿಡಿಯೋವನ್ನು ಪೋಸ್ಟ್ ಮಾಡಿದ್ದರು.

ಮನೆಯಲ್ಲಿ ಅಭ್ಯಾಸ

ಇವೆಲ್ಲದರ ನಡುವೆ ಇದ್ದಕ್ಕಿದ್ದಂತೆ ಶಮಿ ಮಾಡಿದ ಪೋಸ್ಟ್ ಅಭಿಮಾನಿಗಳಿಗೆ ಶಾಕ್ ನೀಡಿದೆ. ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 3 ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.

ಶಮಿ ಪೋಸ್ಟ್

ಈ ಚಿತ್ರದಲ್ಲಿ ಶಮಿ ತಲೆಗೆ ಪೇಟ, ಕುತ್ತಿಗೆಗೆ ಹಾರ ಮತ್ತು ಭುಜದ ಮೇಲೆ ಶಾಲು ಹಾಕಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಶಮಿ ಮರುಮದುವೆ ಆಗಿದ್ದಾರೆಯೇ ಎಂದು ಕಮೆಂಟ್ ಮಾಡಿದ್ದಾರೆ.

ಶಮಿ ಎರಡನೇ ಮದುವೆ?

ವಾಸ್ತವವಾಗಿ ಸತ್ಯ ಬೇರೆಯೇ ಆಗಿದೆ. ಶಮಿ ಯಾರನ್ನೂ ಮದುವೆಯಾಗಿಲ್ಲ, ಕೆಲವು ಸಮಾರಂಭದಲ್ಲಿ ಅಭಿಮಾನಿಗಳು ಅವರನ್ನು ಈ ರೀತಿ ಸ್ವಾಗತಿಸಿದ್ದಾರೆ.

ಸತ್ಯವೇನು?

ಶಮಿ ಕಳೆದ ಕೆಲವು ವರ್ಷಗಳಿಂದ ಪತ್ನಿ ಹಸೀನ್ ಜಹಾನ್‌ನಿಂದ ದೂರವಾಗಿದ್ದರು. ಇಬ್ಬರ ನಡುವೆ ನ್ಯಾಯಾಲಯದಲ್ಲಿ ಪ್ರಕರಣವೂ ನಡೆಯುತ್ತಿದೆ.

ಹಸೀನ್ ಜಹಾನ್‌

ಮೊನ್ನೆಯಷ್ಟೆ 2023 ರ ವಿಶ್ವಕಪ್‌ನಲ್ಲಿ ಅವರ ಅದ್ಭುತ ಪ್ರದರ್ಶನದ ನಂತರ, ಶಮಿ ಅವರಿಗೆ ಭಾರತ ಸರ್ಕಾರದಿಂದ ಅರ್ಜುನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಅರ್ಜುನ್ ಪ್ರಶಸ್ತಿ