ಸಾನಿಯಾ ಮಿರ್ಜಾ ಜೊತೆಗಿನ ಮದುವೆ ಸುದ್ದಿ ಬಗ್ಗೆ ಮೌನ ಮುರಿದ ಶಮಿ

20 July 2024

Pic credit: Google

ಪೃಥ್ವಿ ಶಂಕರ

Pic credit: Google

ಇತ್ತೀಚೆಗೆ, ಟೆನಿಸ್ ಸ್ಟಾರ್ ಸಾನಿಯಾ ಮಿರ್ಜಾ ಜೊತೆ ಕ್ರಿಕೆಟಿಗ ಮೊಹಮ್ಮದ್ ಶಮಿ ಮತ್ತೊಂದು ಮದುವೆಯಾಗಲಿದ್ದಾರೆ ಎಂಬ ವದಂತಿ ಎಲ್ಲೆಡೆ ಹಬ್ಬಿತ್ತು.

Pic credit: Google

ಸೋಶಿಯಲ್ ಮೀಡಿಯಾದಲ್ಲಿ ಈ ವದಂತಿ ವೈರಲ್ ಆದ ಬಳಿಕ ಸಾನಿಯಾ ಅವರ ತಂದೆ ಈ ವದಂತಿಯೇಲ್ಲ ಸುಳ್ಳು ಎಂದಿದ್ದರು.

Pic credit: Google

ಆ ಬಳಿಕವೂ ಶಮಿ ಮತ್ತು ಸಾನಿಯಾ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ವದಂತಿ ಅಗಾಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಲೇ ಇದೆ.

Pic credit: Google

ಆದರೆ ಈ ಬಗ್ಗೆ ಈ ಇಬ್ಬರು ಇದುವರೆಗೆ ಏನನ್ನು ಹೇಳಿರಲಿಲ್ಲ. ಆದರೆ ಇದೀಗ ಮೊದಲ ಬಾರಿಗೆ ಮೊಹಮ್ಮದ್ ಶಮಿ ಈ ವದಂತಿಗಳ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ.

Pic credit: Google

ಈ ವದಂತಿಗಳ ಬಗ್ಗೆ ಮಾತನಾಡಿದ ಶಮಿ, ಇದು ವಿಚಿತ್ರ ಸಂಗತಿಯಾಗಿದೆ. ಈ ಬಗ್ಗೆ ನಾನು ಏನು ಮಾತ್ರ ಹೇಳಬಲ್ಲೆ? ಇಂತಹ ಸುಳ್ಳು ಸುದ್ದಿಗಳನ್ನು ಮುಂದಕ್ಕೆ ಕೊಂಡೊಯ್ಯಬೇಡಿ ಎಂದಷ್ಟೇ ಹೇಳಲು ಬಯಸುತ್ತೇನೆ ಎಂದು ಯೂಟ್ಯೂಬ್ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

Pic credit: Google

ಇನ್ನು ಇಂತಹ ವದಂತಿಗಳನ್ನು ಹಬ್ಬಿಸುವವರ ವಿರುದ್ಧ ಕೆರಳಿ ಕೆಂಡವಾಗಿರುವ ಶಮಿ, ಇಂತಹ ವದಂತಿಗಳನ್ನು ಹರಡುವವರಿಗೆ ಧೈರ್ಯವಿದ್ದರೆ ಅವರು ತಮ್ಮ ನಿಜವಾದ ಖಾತೆಗಳಿಂದ ಅಂತಹ ಪೋಸ್ಟ್‌ಗಳನ್ನು ಹಂಚಿಕೊಳ್ಳಲಿ. ಆ ನಂತರ ನಾನವರಿಗೆ ಉತ್ತರ ಕೊಡುತ್ತೇನೆ ಎಂದಿದ್ದಾರೆ.

Pic credit: Google

ವಾಸ್ತವವಾಗಿ ಸಾನಿಯಾ ಮಿರ್ಜಾ ಇತ್ತೀಚೆಗೆ ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್‌ ಅವರಿಂದ ವಿಚ್ಛೇದನ ಪಡೆದಿದ್ದಾರೆ. ಇತ್ತ ಮೊಹಮ್ಮದ್ ಶಮಿ ಕೂಡ ಕಳೆದ ಕೆಲವು ವರ್ಷಗಳಿಂದ ಪತ್ನಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.

Pic credit: Google

ಮೊಹಮ್ಮದ್ ಶಮಿ ಸದ್ಯ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ. ಕೊನೆಯ ಬಾರಿಗೆ 2023 ರ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಪರ ಆಡಿದ್ದ ಶಮಿ, ಅಂದಿನಿಂದ ಗಾಯದಿಂದ ಬಳಲುತ್ತಿದ್ದು, ಚೇತರಿಕೆಯ ಹಾದಿಯಲ್ಲಿದ್ದಾರೆ.