08-03-2024

WTC ಇತಿಹಾಸದಲ್ಲಿ ಅತಿ ಹೆಚ್ಚು ಶತಕ ಸಿಡಿಸಿದವರ್ಯಾರು ಗೊತ್ತಾ?

Author: ಪೃಥ್ವಿ ಶಂಕರ

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ ಅತಿ ಹೆಚ್ಚು ಶತಕ ಸಿಡಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಇಂಗ್ಲೆಂಡ್‌ನ ಜೋ ರೂಟ್ ಆಡಿರುವ 52 ಪಂದ್ಯಗಳಲ್ಲಿ 13 ಶತಕ ಸಿಡಿಸಿದ್ದಾರೆ.

ಎರಡನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾದ ಮಾರ್ನಸ್ ಲಬುಶೇನ್ 45 ಪಂದ್ಯಗಳಲ್ಲಿ 11 ಶತಕ ದಾಖಲಿಸಿದ್ದಾರೆ.

ಮೂರನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ ಇದುವರೆಗೆ 23 ಪಂದ್ಯಗಳನ್ನು ಆಡಿದ್ದು, 10 ಶತಕಗಳನ್ನು ಗಳಿಸಿದ್ದಾರೆ.

ಇದೀಗ 4ನೇ ಸ್ಥಾನಕ್ಕೇರಿರುವ ರೋಹಿತ್ ಶರ್ಮಾ ಆಡಿರುವ 32 ಪಂದ್ಯಗಳಲ್ಲಿ 9 ಶತಕ ಬಾರಿಸಿದ್ದಾರೆ.

ಐದನೇ ಸ್ಥಾನಕ್ಕೆ ಕುಸಿದಿರುವ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಡಬ್ಲ್ಯುಟಿಸಿಯಲ್ಲಿ ಇದುವರೆಗೆ 45 ಪಂದ್ಯಗಳನ್ನು ಆಡಿ 9 ಶತಕ ಸಿಡಿಸಿದ್ದಾರೆ.

ಪಾಕಿಸ್ತಾನದ ಬಾಬರ್ ಆಝಂ ಇದೀಗ 6ನೇ ಸ್ಥಾನಕ್ಕೆ ಜಾರಿದ್ದು, ಇದುವರೆಗೆ ಆಡಿರುವ 29 ಪಂದ್ಯಗಳಲ್ಲಿ 8 ಶತಕಗಳನ್ನು ಬಾರಿಸಿದ್ದಾರೆ.

ಆಸ್ಟ್ರೇಲಿಯಾದ ಉಸ್ಮಾನ್ ಖವಾಜಾ ಇದುವರೆಗೆ 32 ಪಂದ್ಯಗಳನ್ನು ಆಡಿದ್ದು, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ 7 ಶತಕಗಳನ್ನು ಗಳಿಸಿದ್ದಾರೆ.

ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಡಬ್ಲ್ಯುಟಿಸಿಯಲ್ಲಿ ಇದುವರೆಗೆ 45 ಪಂದ್ಯಗಳಲ್ಲಿ 7 ಶತಕಗಳನ್ನು ಬಾರಿಸಿದ್ದಾರೆ.