ಇದುವರೆಗೆ ಏಕದಿನ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ 45 ಪಂದ್ಯಗಳಿಂದ 2278 ರನ್ ಕಲೆಹಾಕಿರುವ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದಾರೆ.
20 November 2023
ವಿರಾಟ್ ಕೊಹ್ಲಿ ಈಗ ಎರಡನೇ ಸ್ಥಾನಕ್ಕೆ ಬಂದಿದ್ದು, ಅವರು ಇದುವರೆಗೆ ಏಕದಿನ ವಿಶ್ವಕಪ್‌ನ 37 ಪಂದ್ಯಗಳಲ್ಲಿ 1775 ರನ್ ಬಾರಿಸಿದ್ದಾರೆ.
ರಿಕಿ ಪಾಂಟಿಂಗ್ ಈಗ ಮೂರನೇ ಸ್ಥಾನಕ್ಕೆ ಜಾರಿದ್ದು, ಅವರು 46 ಪಂದ್ಯಗಳಲ್ಲಿ 1743 ರನ್ ಸಿಡಿಸಿದ್ದಾರೆ.
ರೋಹಿತ್ ಶರ್ಮಾ ಇದೀಗ ನಾಲ್ಕನೇ ಸ್ಥಾನಕ್ಕೆ ಏರಿದ್ದು, ಅವರು 28 ಪಂದ್ಯಗಳಲ್ಲಿ 1575 ರನ್ ಕಲೆಹಾಕಿದ್ದಾರೆ.
ಶ್ರೀಲಂಕಾದ ಕುಮಾರ ಸಂಗಕ್ಕಾರ 37 ಏಕದಿನ ವಿಶ್ವಕಪ್ ಪಂದ್ಯಗಳಲ್ಲಿ 1532 ರನ್ ಬಾರಿಸಿ ಐದನೇ ಸ್ಥಾನದಲ್ಲಿದ್ದಾರೆ.
ಡೇವಿಡ್ ವಾರ್ನರ್ ಇದುವರೆಗೆ ಏಕದಿನ ವಿಶ್ವಕಪ್‌ನಲ್ಲಿ 29 ಪಂದ್ಯಗಳನ್ನು ಆಡಿದ್ದು, 1520 ರನ್ ಗಳಿಸಿದ್ದಾರೆ.
ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ 36 ಪಂದ್ಯಗಳಲ್ಲಿ 1332 ರನ್ ಬಾರಿಸಿ 6ನೇ ಸ್ಥಾನದಲ್ಲಿದ್ದಾರೆ.
ವೆಸ್ಟ್ ಇಂಡೀಸ್‌ನ ಬ್ರಿಯಾನ್ ಲಾರಾ ಏಕದಿನ ವಿಶ್ವಕಪ್‌ನ 34 ಪಂದ್ಯಗಳಲ್ಲಿ 1225 ರನ್ ಬಾರಿಸಿದ್ದಾರೆ.
ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಏಕದಿನ ವಿಶ್ವಕಪ್‌ನಲ್ಲಿ 23 ಪಂದ್ಯಗಳನ್ನು ಆಡಿ ಒಟ್ಟು 1207 ರನ್ ಬಾರಿದ್ದಾರೆ
ಏಕದಿನ ವಿಶ್ವಕಪ್‌ನಲ್ಲಿ 35 ಪಂದ್ಯಗಳನ್ನು ಆಡಿರುವ ಕ್ರಿಸ್ ಗೇಲ್ 1186 ರನ್ ಬಾರಿಸಿದ್ದಾರೆ.
NEXT: ICC World Cup: ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಗೆದ್ದವರ ಪೈಕಿ ಇಬ್ಬರು ಭಾರತೀಯರು