29-01-2024

ಡಬ್ಲ್ಯುಟಿಸಿಯಲ್ಲಿ ಅತಿ ಹೆಚ್ಚು ರನ್ ಕಲೆಹಾಕಿರುವ ಟಾಪ್ 10 ಬ್ಯಾಟರ್​ಗಳಿವರು

Author: ಪೃಥ್ವಿ ಶಂಕರ

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ 48 ಪಂದ್ಯಗಳನ್ನಾಡಿರುವ ಜೋ ರೂಟ್ ಒಟ್ಟು 4018 ರನ್ ಕಲೆಹಾಕಿ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಎರಡನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾದ ಮಾರ್ನಸ್ ಲಬುಶೇನ್ ಇದುವರೆಗೆ 43 ಪಂದ್ಯಗಳಲ್ಲಿ 3805 ರನ್ ಗಳಿಸಿದ್ದಾರೆ.

ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಮೂರನೇ ಸ್ಥಾನದಲ್ಲಿದ್ದು, ಡಬ್ಲ್ಯುಟಿಸಿಯಲ್ಲಿ ಇದುವರೆಗೆ 43 ಪಂದ್ಯಗಳನ್ನು ಆಡಿರುವ ಅವರು 3435 ರನ್ ಗಳಿಸಿದ್ದಾರೆ.

ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಇದುವರೆಗೆ 41 ಪಂದ್ಯಗಳನ್ನು ಆಡಿದ್ದು, 2786 ರನ್ ಗಳಿಸಿದ್ದಾರೆ.

ಪಾಕಿಸ್ತಾನದ ಬಾಬರ್ ಆಝಂ ಐದನೇ ಸ್ಥಾನದಲ್ಲಿದ್ದು, 29 ಪಂದ್ಯಗಳನ್ನು ಆಡಿರುವ ಅವರು ಇಲ್ಲಿಯವರೆಗೆ 2661 ರನ್ ಗಳಿಸಿದ್ದಾರೆ.

ಆಸ್ಟ್ರೇಲಿಯಾದ ಉಸ್ಮಾನ್ ಖವಾಜಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ 30 ಪಂದ್ಯಗಳನ್ನಾಡಿ 2598 ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಇದುವರೆಗೆ 39 ಡಬ್ಲ್ಯುಟಿಸಿ ಪಂದ್ಯಗಳನ್ನು ಆಡಿ 2441 ರನ್ ಕಲೆಹಾಕಿದ್ದಾರೆ.

ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ 38 ಪಂದ್ಯಗಳನ್ನು ಆಡಿದ್ದು, 2423 ರನ್ ಸಿಡಿಸಿದ್ದಾರೆ.

9ನೇ ಸ್ಥಾನದಲ್ಲಿದ್ದರುವ ವಿರಾಟ್ ಕೊಹ್ಲಿ ಇಲ್ಲಿಯವರೆಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್​ನಲ್ಲಿ 36 ಪಂದ್ಯಗಳನ್ನು ಆಡಿ 2235 ರನ್ ಗಳಿಸಿದ್ದಾರೆ.

ಅಗ್ರ 10ರೊಳಗೆ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿರುವ ರೋಹಿತ್ ಆಡಿರುವ 28 ​​ಪಂದ್ಯಗಳಲ್ಲಿ 2215 ರನ್ ಗಳಿಸಿದ್ದಾರೆ.

NEXT: ಇಂಗ್ಲೆಂಡ್ ವಿರುದ್ಧ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಭಾರತೀಯ ಯಾರು ಗೊತ್ತಾ?