15-01-2024
T20I ಪವರ್‌ಪ್ಲೇನಲ್ಲಿ ಪವರ್ ತೋರಿದ ಡೆಡ್ಲಿ ಬೌಲರ್ಗಳಿವರು
Author: ಪೃಥ್ವಿ ಶಂಕರ
ಅಂತರಾಷ್ಟ್ರೀಯ ಟಿ20 ಪಂದ್ಯದ ಪವರ್‌ಪ್ಲೇನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಪೈಕಿ 50 ವಿಕೆಟ್ ಪಡೆದಿರುವ ನ್ಯೂಜಿಲೆಂಡ್‌ನ ಟಿಮ್ ಸೌಥಿ ಮೊದಲ ಸ್ಥಾನದಲ್ಲಿದ್ದಾರೆ.
ಎರಡನೇ ಸ್ಥಾನದಲ್ಲಿರುವ ಭಾರತದ ಭುವನೇಶ್ವರ್ ಕುಮಾರ್ ಮೊದಲ 6 ಓವರ್‌ಗಳಲ್ಲಿ 47 ವಿಕೆಟ್‌ಗಳನ್ನು ಪಡೆದಿದ್ದಾರೆ.
ವೆಸ್ಟ್ ಇಂಡೀಸ್‌ನ ಸ್ಯಾಮ್ಯುಯೆಲ್ ಬದ್ರಿ ಅಂತಾರಾಷ್ಟ್ರೀಯ ಟಿ20 ಪವರ್‌ಪ್ಲೇನಲ್ಲಿ 33 ವಿಕೆಟ್‌ಗಳನ್ನು ಕಬಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.
ಆಸ್ಟ್ರೇಲಿಯಾದ ಜೋಶ್ ಹೇಜಲ್‌ವುಡ್ ಪವರ್‌ಪ್ಲೇನಲ್ಲಿ ಇದುವರೆಗೆ 32 ವಿಕೆಟ್‌ಗಳನ್ನು ಪಡೆದಿದ್ದಾರೆ.
ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ ಮೊದಲ 6 ಓವರ್‌ಗಳಲ್ಲಿ ಇದುವರೆಗೆ 32 ವಿಕೆಟ್‌ಗಳನ್ನು ಪಡೆದಿದ್ದಾರೆ.
ಇಂಗ್ಲೆಂಡ್‌ನ ಡೇವಿಡ್ ವಿಲ್ಲಿ ಟಿ20 ಪವರ್‌ಪ್ಲೇಯಲ್ಲಿ 31 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಬಾಂಗ್ಲಾದೇಶದ ಮುಸ್ತಫಿಜುರ್ ರೆಹಮಾನ್ ಪವರ್‌ಪ್ಲೇನಲ್ಲಿ ಇದುವರೆಗೆ 29 ವಿಕೆಟ್‌ಗಳನ್ನು ಪಡೆದಿದ್ದಾರೆ.
ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಇದುವರೆಗೆ ಟಿ20 ಅಂತಾರಾಷ್ಟ್ರೀಯ ಪವರ್‌ಪ್ಲೇಯಲ್ಲಿ 29 ವಿಕೆಟ್‌ಗಳನ್ನು ಪಡೆದಿದ್ದಾರೆ.
ಪಾಕಿಸ್ತಾನದ ಶಾಹೀನ್ ಶಾ ಆಫ್ರಿದಿ ಇದುವರೆಗೆ ಟಿ20 ಪವರ್‌ಪ್ಲೇಯಲ್ಲಿ 27 ವಿಕೆಟ್‌ಗಳನ್ನು ಪಡೆದಿದ್ದಾರೆ.
NEXT: T20I ನಲ್ಲಿ ಅಧಿಕ ರನ್ ಬಾರಿಸಿದವರ ಪೈಕಿ ಭಾರತೀಯರಿಗೆ ಮೊದಲೆರಡು ಸ್ಥಾನ