19-01-2024

ಎಂಎಸ್ ಧೋನಿ ಜೊತೆ ರಿಷಭ್ ಪಂತ್ ಸಖತ್ ಡ್ಯಾನ್ಸ್

Author: Vinay Bhat

ಧೋನಿ-ಪಂತ್

ಟೀಮ್ ಇಂಡಿಯಾದ ಇಬ್ಬರು ಸೂಪರ್‌ಸ್ಟಾರ್ ವಿಕೆಟ್‌ ಕೀಪರ್‌ಗಳಾದ ಎಂಎಸ್ ಧೋನಿ ಮತ್ತು ರಿಷಭ್ ಪಂತ್ ಪುನಃ ಒಟ್ಟಿಗೆ ಅನೇಕ ಬಾರಿ ಕಾಣಿಸಿಕೊಂಡಿದ್ದಾರೆ.

ಹೊಸ ವರ್ಷ

ಗಾಯದ ಸಮಸ್ಯೆಯಿಂದ ಕ್ರಿಕೆಟ್'ನಿಂದ ದೂರ ಉಳಿದಿರುವ ಪಂತ್, ಧೋನಿ ಹಾಗೂ ಸಾಕ್ಷಿ ಜೊತೆ ದುಬೈನಲ್ಲಿ ಕ್ರಿಸ್‌ಮಸ್ ಮತ್ತು ಹೊಸ ವರ್ಷವನ್ನು ಆಚರಿಸಿಕೊಂಡಿದ್ದರು.

ನಿಶ್ಚಿತಾರ್ಥ ಪಾರ್ಟಿ

ಮೊನ್ನೆಯಷ್ಟೆ ಪಂತ್ ಸಹೋದರಿ ಸಾಕ್ಷಿ ಪಂತ್ ನಿಶ್ಚಿತಾರ್ಥವಾಗಿತ್ತು. ಇಲ್ಲಿಯೂ ಸಹ, ಪಂತ್ ಅವರ ಆಹ್ವಾನದ ಮೇರೆಗೆ ಧೋನಿ ಆಗಮಿಸಿದ್ದರು.

ಒಟ್ಟಿಗೆ ನೃತ್ಯ

ಈಗ ಮತ್ತೊಮ್ಮೆ ಅವರ ವಿಶೇಷ ಫೋಟೋ ವೈರಲ್ ಆಗಿದ್ದು, ಇಬ್ಬರೂ ಒಟ್ಟಿಗೆ ನೃತ್ಯ ಮಾಡುತ್ತಿದ್ದಾರೆ. ಈ ಫೋಟೋದಲ್ಲಿ ಪಂತ್ ಮತ್ತು ಧೋನಿ ಜೊತೆ ನಿತೀಶ್ ರಾಣಾ ಕೂಡ ಕಾಣಿಸಿಕೊಂಡಿದ್ದಾರೆ.

ನಿಶ್ಚಿತಾರ್ಥದ ಫೋಟೋ

ಈ ಫೋಟೋಗಳು ಸಾಕ್ಷಿ ಪಂತ್ ನಿಶ್ಚಿತಾರ್ಥದ್ದು. ಇಲ್ಲಿ ಪಂತ್ ಕ್ರಿಕೆಟ್ ಮತ್ತು ಸಿನಿಮಾ ರಂಗದ ಸ್ನೇಹಿತರನ್ನು ಆಹ್ವಾನಿಸಿದ್ದರು.

ಪಂತ್ ಅಭ್ಯಾಸ

ಅಪಘಾತದಲ್ಲಿ ಗಾಯಗೊಂಡು ಚೇತರಿಸಿಕೊಳ್ಳುತ್ತಿರುವ ರಿಷಭ್ ಪಂತ್ ಸಂಪೂರ್ಣ ಫಿಟ್ ಆಗುವ ಹಾದಿಯಲ್ಲಿದ್ದಾರೆ. ಬ್ಯಾಟಿಂಗ್ ಅಭ್ಯಾಸ ಶುರುಮಾಡಿದ್ದಾರೆ.

ಧೋನಿ ಕೂಡ ಅಭ್ಯಾಸ

ಎಂಎಸ್ ಧೋನಿ ಕೂಡ ಮತ್ತೆ ಬ್ಯಾಟ್ ಕೈಗೆತ್ತಿಕೊಂಡಿದ್ದಾರೆ. ಐಪಿಎಲ್ 2024 ರಲ್ಲಿ ಕಣಕ್ಕಿಳಿಯಲು ಧೋನಿ ಸಿದ್ಧರಾಗಿದ್ದು, ಈಗಿನಿಂದಲೇ ಅಭ್ಯಾಸ ಶುರು ಮಾಡಿದ್ದಾರೆ.