ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಧೋನಿಗೆ ಆಹ್ವಾನ

16-January-2024

Author: Vinay Bhat

ಜ. 22 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ನಡೆಯಲಿದ್ದು, ಇದರಲ್ಲಿ ಭಾರತದ ಅನೇಕ ಪ್ರಸಿದ್ಧ ವ್ಯಕ್ತಿಗಳು ಭಾಗವಹಿಸಲಿದ್ದಾರೆ.

ಜ. 22ಕ್ಕೆ ಕಾರ್ಯಕ್ರಮ

ಈ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಭಾರತ ತಂಡದ ಮಾಜಿ ನಾಯಕ ಧೋನಿ ಅವರಿಗೆ ಹಿರಿಯ ಆರ್‌ಎಸ್‌ಎಸ್ ಅಧಿಕಾರಿ ಧನಂಜಯ್ ಸಿಂಗ್ ಆಹ್ವಾನ ನೀಡಿದ್ದಾರೆ.

ಧೋನಿಗೆ ಆಹ್ವಾನ

ರಾಂಚಿಯಲ್ಲಿರುವ ಧೋನಿ ಅವರ ಮನೆಗೆ ಭೇಟಿ ನೀಡಿ ಈ ಆಹ್ವಾನವನ್ನು ನೀಡಿದ್ದೇನೆ ಎಂದು ಧನಂಜಯ್ ಪಿಟಿಐಗೆ ತಿಳಿಸಿದ್ದಾರೆ.

ಧೋನಿ ಮನೆಗೆ

ಧೋನಿ ಜೊತೆಗೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರಿಗೆ ಕೂಡ ಈ ಸಮಾರಂಭಕ್ಕೆ ಆಹ್ವಾನಿಸಲಾಗಿದೆ.

ಸಚಿನ್‌ಗೂ ಆಹ್ವಾನ

ವರದಿಗಳ ಪ್ರಕಾರ, ಕೊಹ್ಲಿ-ರೋಹಿತ್'ಗೂ ಈ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಹ್ವಾನ ಬಂದಿದೆ. ಬಾಲಿವುಡ್ ನಟರಾದ ಅಮಿತಾಬ್, ಮುಖೇಶ್ ಅಂಬಾನಿ, ಆಹ್ವಾನವನ್ನು ಸ್ವೀಕರಿಸಿದ್ದಾರೆ.

ಸೆಲಿಬ್ರಿಟಿಸ್

ವರದಿಗಳ ಪ್ರಕಾರ, ಕೊಹ್ಲಿ-ರೋಹಿತ್'ಗೂ ಈ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಹ್ವಾನ ಬಂದಿದೆ. ಬಾಲಿವುಡ್ ನಟರಾದ ಅಮಿತಾಬ್, ಮುಖೇಶ್ ಅಂಬಾನಿ, ಆಹ್ವಾನವನ್ನು ಸ್ವೀಕರಿಸಿದ್ದಾರೆ.

ಈ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಭಾಗವಹಿಸಲಿದ್ದು, ರಾಮಲಲ್ಲಾ ಮೂರ್ತಿಯನ್ನು ಪ್ರತಿಷ್ಠಾಪಿಸಲಿದ್ದಾರೆ.

ಪ್ರಧಾನಿ ಮೋದಿ

ವರದಿಗಳ ಪ್ರಕಾರ, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸಮಾರಂಭದಲ್ಲಿ ಪಾಲ್ಗೊಳ್ಳಲು 6,000 ಕ್ಕೂ ಹೆಚ್ಚು ಜನರಿಗೆ ಆಹ್ವಾನವನ್ನು ಕಳುಹಿಸಿದೆ.

ಸಾವಿರಾರು ಜನರು