28-10-2023

ಪಾಕಿಸ್ತಾನ ಕಣ್ಣೀರಿಡುವಂತೆ ಮಾಡಿದ ಈ ಅಂಪೈರ್ ಯಾರು ಗೊತ್ತೇ?

ಪಾಕಿಸ್ತಾನಕ್ಕೆ ಸೋಲು

ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಶುಕ್ರವಾರ ಪಾಕಿಸ್ತಾನ ಕ್ರಿಕೆಟ್ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 1 ವಿಕೆಟ್‌ನಿಂದ ಸೋಲನುಭವಿಸಿತು.

ಪಾಕಿಸ್ತಾನ ಗೆದ್ದಿದ್ದರೆ...

ಈ ಪಂದ್ಯದಲ್ಲಿ ಪಾಕಿಸ್ತಾನ ಜಯ ಸಾಧಿಸಬಹುದಿತ್ತು. ಆದರೆ, ಫೀಲ್ಡ್ ಅಂಪೈರ್ ಅಲೆಕ್ಸ್ ವಾರ್ಫ್ ಅವರ ತಪ್ಪು ನಿರ್ಧಾರ ಪಾಕ್ ಗೆಲುವನ್ನು ಕಿತ್ತುಕೊಂಡಿತು.

ಶಮ್ಸಿಗೆ ಔಟ್ ನೀಡಲಿಲ್ಲ

ಆಫ್ರಿಕಾ ಬ್ಯಾಟಿಂಗ್ ಇನಿಂಗ್ಸ್‌ನ 46ನೇ ಓವರ್‌ನ ರೌಫ್ ಅವರ ಕೊನೆಯ ಎಸೆತದಲ್ಲಿ ಶಮ್ಸಿ ವಿರುದ್ಧ ಎಲ್‌ಬಿಡಬ್ಲ್ಯು ಮನವಿ ಇತ್ತು. ಅಂಪೈರ್ ನಾಟೌಟ್ ಘೋಷಿಸಿದರು.

ಡಿಆರ್‌ಎಸ್

ಅಲೆಕ್ಸ್ ನಿರ್ಧಾರದ ವಿರುದ್ಧ ಪಾಕಿಸ್ತಾನ ಡಿಆರ್​ಎಸ್ ಮನವಿ ತೆಗೆದುಕೊಂಡಿತು. ಥರ್ಡ್ ಅಂಪೈರ್ ಮೈದಾನದ ಅಂಪೈರ್‌ನ ತೀರ್ಮಾನವೇ ಅಂತಿಮವೆಂದು ಘೋಷಿಸಿತು.

ಶಮ್ಸಿ ಔಟ್

ಶಮ್ಸಿ ಔಟಾಗಿರುವುದು ಟಿವಿ ರಿಪ್ಲೇಯಿಂದ ಸ್ಪಷ್ಟವಾಗಿತ್ತು. ಇದು ದಕ್ಷಿಣ ಆಫ್ರಿಕಾದ ಕೊನೆಯ ವಿಕೆಟ್ ಕೂಡ. ಆದರೆ, ಅಂಪೈರ್ ನಿರ್ಧಾರ ಪಾಕ್ ಆಸೆಗೆ ತಣ್ಣೀರೆರಚಿತು.

ಅಂಪೈರ್ ಕಾಲ್

ಚೆಂಡು ಸ್ಟಂಪ್‌ಗೆ ತಾಗಿದಾಗ ಅದು ನೇರವಾಗಿ ವಿಕೆಟ್‌ಗೆ ತಾಕದೆ, ಒಂದು ಭಾಗ ಮಾತ್ರ ಸ್ಟಂಪ್‌ಗೆ ತಾಗಿತು. ಹೀಗಾಗಿ ಅಂಪೈರ್ ಕಾಲ್ ಆದಾರದ ಮೇಲೆ ನಾಟೌಟ್ ನೀಡಲಾಯಿತು.

ಅಲೆಕ್ಸ್ ಅನುಭವ

ಅಲೆಕ್ಸ್ ವಾರ್ಫ್ ಇಂಗ್ಲೆಂಡ್‌ನವರು. ಇಲ್ಲಿಯವರೆಗೆ 4 ಟೆಸ್ಟ್, 12 ODI ಮತ್ತು 36 T20I ಪಂದ್ಯಗಳಲ್ಲಿ ಅಂಪೈರ್ ಮಾಡಿದ್ದಾರೆ.

18 ವಿಕೆಟ್

ಅಲೆಕ್ಸ್ ವಾರ್ಫ್ ಅವರು ಇಂಗ್ಲೆಂಡ್ ಪರ 13 ODIಗಳನ್ನು ಆಡಿದ್ದಾರೆ, ಇದರಲ್ಲಿ ಅವರು 18 ವಿಕೆಟ್‌ಗಳನ್ನು ಪಡೆದಿದ್ದಾರೆ. ಟೆಸ್ಟ್ ಪಂದ್ಯವನ್ನು ಆಡಲಿಲ್ಲ.

ಮುಂದಿನ 3 ಪಂದ್ಯಗಳಿಂದ ಹೊರಬಿದ್ದ ಭಾರತದ ಸ್ಟಾರ್ ಆಟಗಾರ

umpire alex wharf