ಇಂದು ಪಾಕಿಸ್ತಾನ ಸೋತರೆ ವಿಶ್ವಕಪ್ನಿಂದ ಹೊರಬೀಳುತ್ತಾ?
27 October 2023
ಐಸಿಸಿ ಏಕದಿನ ವಿಶ್ವಕಪ್'ನಲ್ಲಿ ಇಂದು ನಡೆಯಲಿರುವ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿ ಆಗಲಿದೆ.
ಪಾಕ್-ಆಫ್ರಿಕಾ
ಪಾಕಿಸ್ತಾನ ಈ ಬಾರಿ ಆಡಿರುವ ಐದು ಪಂದ್ಯಗಳ ಪೈಕಿ ಸತತ ಮೂರು ಪಂದ್ಯಗಳಲ್ಲಿ ಸೋಲು ಕಂಡು ಪಾಯಿಂಟ್ಸ್ ಟೇಬಲ್ನಲ್ಲಿ ಆರನೇ ಸ್ಥಾನದಲ್ಲಿದೆ.
ಹ್ಯಾಟ್ರಿಕ್ ಸೋಲು
ಪಾಕಿಸ್ತಾನಕ್ಕೆ ಇಂದಿನದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಗೆದ್ದರಷ್ಟೆ ಉಳಿಗಾಲ, ಸೋತರೆ ಬಾಬರ್ ಪಡೆ ಬಹುತೇಕ ಟೂರ್ನಿಯಿಂದ ಹೊರಬಿದ್ದಂತೆ.
ಟೂರ್ನಿಯಿಂದ ಔಟ್?
ಪಾಕಿಸ್ತಾನ ಸೆಮೀಸ್ನಲ್ಲಿ ಸ್ಥಾನ ಭದ್ರಪಡಿಸಬೇಕು ಎಂದರೆ ಉಳಿದಿರುವ ಎಲ್ಲ ಪಂದ್ಯ ಗೆಲ್ಲಲೇಬೇಕು. ಒಂದು ತಂಡ ಸೆಮೀಸ್ಗೆ ಏರಬೇಕು ಎಂದರೆ ಐದು ಪಂದ್ಯಗಳಲ್ಲಿ ಗೆಲುವು ಸಾಧಿಸಬೇಕು.
ಸೆಮಿ ಫೈನಲ್
ಪಾಕಿಸ್ತಾನ ಒಂದು ಪಂದ್ಯ ಸೋತರೂ ಟೂರ್ನಿಯಿಂದ ಹೊರಬಿದ್ದಂತೆ. ರನ್ರೆಟ್ ಆಧಾರದ ಮೇಲೆ ಕೂದಲೆಳೆಯ ಅವಕಾಶ ಸಿಗಬೇಕು ಎಂದರೆ ದೊಡ್ಡ ಅಂತರದ ಗೆಲುವು ಬೇಕು.
ರನ್ರೇಟ್
ಪಾಕ್ ಇಂದು ಚೆನ್ನೈನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ, ಬಳಿಕ ಕೋಲ್ಕತ್ತಾದಲ್ಲಿ ಬಾಂಗ್ಲಾದೇಶ, ಬೆಂಗಳೂರಿನಲ್ಲಿ ನ್ಯೂಝಿಲೆಂಡ್ ಮತ್ತು ಕೋಲ್ಕತ್ತಾದಲ್ಲಿ ಇಂಗ್ಲೆಂಡ್ ವಿರುದ್ಧ ಆಡಲಿದೆ.
ಮುಂದಿನ ಪಂದ್ಯ
ಹ್ಯಾಟ್ರಿಕ್ ಸೋಲಿನ ಮುಖಭಂಗ ಅನುಭವಿಸಿ ಪಾಕಿಸ್ತಾನ ಆಟಗಾರರು ಈಗಾಗಲೇ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದಾರೆ. ಹೀಗಾಗಿ ಇಂದು ಕಮ್ ಬ್ಯಾಕ್ ಮಾಡುತ್ತಾರ ನೋಡಬೇಕು.
ಕಮ್ಬ್ಯಾಕ್
ಅತ್ತ ಹಾಲಿ ಚಾಂಪಿಯನ್ ಇಂಗ್ಲೆಂಡ್ ಸ್ಥಿತಿ ಕೂಡ ಇದೇರೀತಿಯಲ್ಲಿದೆ. ಇಂಗ್ಲೆಂಡ್ ಇನ್ನೊಂದು ಪಂದ್ಯ ಸೋತರೆ ಅಧಿಕೃತವಾಗಿ ವಿಶ್ವಕಪ್ನಿಂದ ಹೊರಬೀಳಲಿದೆ.
ಇಂಗ್ಲೆಂಡ್ ಔಟ್
ಮತ್ತೊಮ್ಮೆ ಸೋತ ಇಂಗ್ಲೆಂಡ್: ನೂತನ ಪಾಯಿಂಟ್ಸ್ ಟೇಬಲ್ ಇಲ್ಲಿದೆ
ಇನ್ನಷ್ಟು ಓದಿ