24-06-2024

100 ಕೋಟಿ ರೂ. ಮಾನನಷ್ಟ ಮೊಕದಮ್ಮೆ ಹೂಡಿದ ಬಾಬರ್ ಆಝಂ..!

Author: ಪೃಥ್ವಿ ಶಂಕರ

ಮಹತ್ವದ ನಿರ್ಧಾರ ಕೈಗೊಂಡಿರುವ ಪಾಕಿಸ್ತಾನದ ನಾಯಕ ಬಾಬರ್ ಆಝಂ, ಖ್ಯಾತ ಯೂಟ್ಯೂಬರ್ ಮುಬಾಶರ್ ಲುಕ್ಮಾನ್ ಅವರಿಗೆ ಮಾನನಷ್ಟ ನೋಟಿಸ್ ಕಳುಹಿಸಿದ್ದಾರೆ.

ಬಾಬರ್ ಆಝಂ, ಪಾಕಿಸ್ತಾನಿ ಯೂಟ್ಯೂಬರ್ ಮುಬಾಶರ್ ಲುಕ್ಮಾನ್ ವಿರುದ್ಧ 100 ಕೋಟಿ ರೂಪಾಯಿ ಮಾನನಷ್ಟ ನೋಟಿಸ್ ಕಳುಹಿಸಿದ್ದಾರೆ.

ಪಾಕಿಸ್ತಾನದ ಯೂಟ್ಯೂಬರ್ ಮುಬಾಶರ್ ಲುಕ್ಮಾನ್ ಅವರು ಬಾಬರ್ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ ಮಾಡಿದ್ದರು.

ಮುಬಾಶಿರ್ ಲುಕ್ಮಾನ್ ಅವರು, ‘ಬಾಬರ್​ಗೆ 8 ಕೋಟಿ ರೂಪಾಯಿ ಮೌಲ್ಯದ ಕಾರು ಎಲ್ಲಿಂದ ಬಂತು? ಅಮೆರಿಕ, ಐರ್ಲೆಂಡ್​ನಂಥ ತಂಡಗಳ ಎದುರು ಸೋತರೆ ಅಂಥ ವಾಹನ ಖಂಡಿತಾ ಬರುತ್ತದೆ ಎಂದು ಆರೋಪಿಸಿದ್ದರು.

ಇದೀಗ ಮಾನನಷ್ಟ ಮೊಕದಮ್ಮೆ ಹೂಡಿರುವ ಬಾಬರ್, ಯೂಟ್ಯೂಬರ್ ಮುಬಾಷರ್ ಲುಕ್ಮಾನ್ ಮಾಡಿರುವ ಮ್ಯಾಚ್ ಫಿಕ್ಸಿಂಗ್ ಆರೋಪಕ್ಕೆ ಸಾಕ್ಷ್ಯವನ್ನು ಕೇಳಿದ್ದಾರೆ.

ಸಾಕ್ಷ್ಯ ಒದಗಿಸಲು ಸಾಧ್ಯ ಆಗದಿದ್ದರೆ ಮುಬಾಷರ್ ಲುಕ್ಮಾನ್ ಅವರು ಬಾಬರ್‌ಗೆ 100 ಕೋಟಿ ಪಾಕಿಸ್ತಾನಿ ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.

ಪಿಸಿಬಿ ಈ ವಿಷಯದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ ಆದರೆ ಮೂಲಗಳ ಪ್ರಕಾರ ಅದು ಮಾನನಷ್ಟ ಮೊಕದ್ದಮೆ ದಾಖಲಿಸಲು ಬಾಬರ್‌ಗೆ ಅನುಮತಿ ನೀಡಿದೆ ಎಂದು ವರದಿಯಾಗಿದೆ.

ಪಾಕಿಸ್ತಾನದ ಸಹಾಯಕ ಕೋಚ್ ಅಜರ್ ಮಹಮೂದ್ ಕೂಡ ಯೂಟ್ಯೂಬರ್ ಮುಬಾಶರ್ ಲುಕ್ಮಾನ್ ಅವರಿಗೆ ಮಾನನಷ್ಟ ನೋಟಿಸ್ ಕಳುಹಿಸಿದ್ದಾರೆ.

NEXT: ಭಾರತ- ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಗಳಲ್ಲಿ ಅತೀ ಶ್ರೀಮಂತ ಮಂಡಳಿ ಯಾವುದು ಗೊತ್ತಾ?