10-02-2024

ODI ಕ್ರಿಕೆಟ್ ಇತಿಹಾಸದಲ್ಲಿ ವೇಗದ ದ್ವಿಶತಕ ಸಿಡಿಸಿದ್ದು ಇವರೇ ನೋಡಿ

Author: Vinay Bhat

ಇಶಾನ್ ಕಿಶನ್

ಇಶಾನ್ ಕಿಶನ್ ಏಕದಿನ ಕ್ರಿಕೆಟ್‌ನಲ್ಲಿ ಅತಿವೇಗದ ದ್ವಿಶತಕ ದಾಖಲೆ ಹೊಂದಿದ್ದಾರೆ. ಡಿ. 2022 ರಲ್ಲಿ ಬಾಂಗ್ಲಾದೇಶ ವಿರುದ್ಧ ಕೇವಲ 126 ಎಸೆತಗಳಲ್ಲಿ 200 ರನ್ ಗಳಿಸಿದರು.

ಇಶಾನ್ ಕಿಶನ್

ಕಿಶನ್ ಅವರು ಒಟ್ಟಾರೆಯಾಗಿ ಕೇವಲ 131 ಎಸೆತಗಳಲ್ಲಿ 210 ರನ್ ಗಳಿಸಿ ಈ ಸಾಧನೆ ಮಾಡಿದ ನಾಲ್ಕನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಗ್ಲೆನ್ ಮ್ಯಾಕ್ಸ್‌ವೆಲ್

ವಾಂಖೆಡೆ ಸ್ಟೇಡಿಯಂನಲ್ಲಿ 2023 ರ ಐಸಿಸಿ ಕ್ರಿಕೆಟ್ ವಿಶ್ವಕಪ್‌ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಅಫ್ಘಾನಿಸ್ತಾನ ವಿರುದ್ಧ ಕೇವಲ 128 ಎಸೆತಗಳಲ್ಲಿ ದ್ವಿಶತಕ ಗಳಿಸಿದರು.

ಗ್ಲೆನ್ ಮ್ಯಾಕ್ಸ್‌ವೆಲ್

ಮ್ಯಾಕ್ಸ್‌ವೆಲ್ ಅವರು ಅಫ್ಘಾನಿಸ್ತಾನ ವಿರುದ್ಧ 128 ಎಸೆತಗಳಲ್ಲಿ 201 ರನ್ ಗಳಿಸಿದ್ದು, ODI ಕ್ರಿಕೆಟ್ ಇತಿಹಾಸದಲ್ಲಿ ಶ್ರೇಷ್ಠ ನಾಕ್ ಆಗಿದೆ.

ಪಾತುಂ ನಿಸ್ಸಾಂಕ

2024ರ ಫೆಬ್ರುವರಿಯಲ್ಲಿ ಪಲ್ಲೆಕೆಲೆಯಲ್ಲಿ 139 ಎಸೆತಗಳಲ್ಲಿ 210 ರನ್ ಗಳಿಸುವ ಮೂಲಕ ಅಫ್ಘಾನಿಸ್ತಾನ ವಿರುದ್ಧ ನಿಸ್ಸಾಂಕಾ 136 ಎಸೆತಗಳಲ್ಲಿ ದ್ವಿಶತಕ ಗಳಿಸಿದರು.

ಪಾತುಂ ನಿಸ್ಸಾಂಕ

ಪಾತುಂ ನಿಸ್ಸಾಂಕಾ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ದ್ವಿಶತಕ ಬಾರಿಸಿದ ಮೊದಲ ಮತ್ತು ಇಲ್ಲಿಯವರೆಗೆ ಶ್ರೀಲಂಕಾದ ಏಕೈಕ ಕ್ರಿಕೆಟಿಗ ಆಗಿದ್ದಾರೆ.

ಕ್ರಿಸ್ ಗೇಲ್

ಗೇಲ್ 2015 ರ ವಿಶ್ವಕಪ್‌ನಲ್ಲಿ ಜಿಂಬಾಬ್ವೆ ವಿರುದ್ಧ ಕೇವಲ 138 ಎಸೆತಗಳಲ್ಲಿ ದ್ವಿಶತಕ ಗಳಿಸಿದರು. ಇವರು 8 ವರ್ಷಗಳ ಕಾಲ ಅತಿವೇಗದ ODI ದ್ವಿಶತಕ ದಾಖಲೆ ಹೊಂದಿದ್ದರು.

ಕ್ರಿಸ್ ಗೇಲ್

ಗೇಲ್ ದ್ವಿಶತಕ ಗಳಿಸಿದ ಮೊದಲ ಭಾರತೀಯರಲ್ಲದ ಆಟಗಾರ ಮತ್ತು ಕ್ರಿಕೆಟ್ ವಿಶ್ವಕಪ್‌ನಲ್ಲಿ ದ್ವಿಶತಕ ಬಾರಿಸಿದ ಮೊದಲ ಆಟಗಾರ. 147 ಎಸೆತಗಳಲ್ಲಿ 215 ರನ್ ಗಳಿಸಿದ್ದರು.

ವೀರೇಂದ್ರ ಸೆಹ್ವಾಗ್

ಸೆಹ್ವಾಗ್ 2011 ರಲ್ಲಿ ಇಂದೋರ್‌ನ ಹೋಲ್ಕರ್ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ದ್ವಿಶತಕ ಗಳಿಸಿ ಕೇವಲ 140 ಎಸೆತಗಳಲ್ಲಿ ಈ ಮೈಲುಗಲ್ಲನ್ನು ತಲುಪಿದ್ದರು.