20-03-2024

IPL: ಫ್ರೀ ಹಿಟ್‌ಗಳಲ್ಲಿ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದವರಿವರು

Author: ಪೃಥ್ವಿ ಶಂಕರ

ಐಪಿಎಲ್‌ನಲ್ಲಿ ಫ್ರೀ ಹಿಟ್‌ ಎಸೆತಗಳಲ್ಲಿ 4 ಸಿಕ್ಸರ್‌ ಬಾರಿಸಿರುವ ಬ್ರೆಂಡನ್ ಮೆಕಲಮ್ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಎರಡನೇ ಸ್ಥಾನದಲ್ಲಿರುವ ಕನ್ನಡಿಗ ಕೆಎಲ್ ರಾಹುಲ್ ಕೂಡ 4 ಫ್ರೀ ಹಿಟ್‌ ಎಸೆತಗಳನ್ನು ಸಿಕ್ಸರ್​ಗಟ್ಟಿದ್ದಾರೆ.

ಮಾಜಿ ಆರ್​ಸಿಬಿ ಆಟಗಾರ ಎಬಿ ಡಿವಿಲಿಯರ್ಸ್ 3 ಫ್ರೀ ಹಿಟ್‌ ಎಸೆತಗಳನ್ನು ಸಿಕ್ಸರ್ ಬಾರಿಸಿದ್ದಾರೆ.

ಮಾಜಿ ಕೆಕೆಆರ್ ನಾಯಕ ಸೌರವ್ ಗಂಗೂಲಿ ಫ್ರೀ ಹಿಟ್‌ನಲ್ಲಿ 3 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

ಮಾಜಿ ಆರ್​ಸಿಬಿ ಆರಂಭಿಕ ಆಟಗಾರ ಕ್ರಿಸ್ ಗೇಲ್ ಫ್ರೀ ಹಿಟ್‌ನಲ್ಲಿ 3 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

ಆಡಮ್ ಗಿಲ್‌ಕ್ರಿಸ್ಟ್ 3 ಫ್ರೀ ಹಿಟ್‌ ಎಸೆತಗಳನ್ನು ಸಿಕ್ಸರ್​ಗಟ್ಟಿದ್ದಾರೆ.

ಸಿಎಸ್​ಕೆ ಆಲ್​ರೌಂಡರ್ ರವೀಂದ್ರ ಜಡೇಜಾ 3 ಫ್ರೀ ಹಿಟ್‌ ಎಸೆತಗಳನ್ನು ಸಿಕ್ಸರ್​ಗಟ್ಟಿದ್ದಾರೆ.

ಉಳಿದಂತೆ ದಿನೇಶ್ ಕಾರ್ತಿಕ್, ಶುಭ್​ಮನ್ ಗಿಲ್, ರಾಹುಲ್ ತ್ರಿಪಾಠಿ ಕೂಡ 3 ಫ್ರೀ ಹಿಟ್‌ ಎಸೆತಗಳನ್ನು ಸಿಕ್ಸರ್​ಗಟ್ಟಿದ್ದಾರೆ.

NEXT: IPL: ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿದವರು